ಗೃಹ ಮಂತ್ರಿ ಮನೆಗೆ ನುಗ್ಗಿ ಫ್ರಿಜ್‌ನಿಂದ ಹಾಲು ಕದ್ದ ಕೋತಿ!

viralNews
Published on

ಬೆಂಗಳೂರು: ಬೆಕ್ಕು ಕದ್ದು ಹಾಲು ಕುಡಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕೋತಿ ಗೃಹ ಸಚಿವರ ಮನೆಯಲ್ಲಿ ಕದ್ದು ಹಾಲು ಕುಡಿದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಗೃಹ ಸಚಿವ ಜಿ. ಪರಮೇಶ್ವರ್‌ ಅವರು ಸೋಮವಾರ ತುಮಕೂರಿನ ಸಿದ್ದಾರ್ಥ ನಗರದಲ್ಲಿರುವ ಮನೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದರು.ಪೊಲೀಸ್‌ ಅಧಿಕಾರಿಗಳು ಕೂಡಾ ಅಲ್ಲಿದ್ದರು.

ಎಲ್ಲರ ನಡುವೆಯೇ ರಾಜಾರೋಷವಾಗಿ ಕೋತಿ ಮನೆಯ ಒಳಗೆ ಹೋಗಿ ಫ್ರಿಜ್‌ ಬಾಗಿಲು ತೆಗೆದು ಹಾಲು ಕದ್ದಿದ್ದೇನೆ. ಹಾಲನ್ನು ಹಿಡಿದುಕೊಂಡು ಮೆಟ್ಟಿಲು ಇಳಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಭದ್ರತಾ ಸಿಬ್ಬಂದಿ ಕೋತಿ ಓಡಿಸಲು ಮುಂದಾದಾಗ, ಗೃಹ ಸಚಿವರು ಓಡಿಸಬೇಡಿ ಎಂದು ತಡೆದರು. ಬಳಿಕ ಕೋತಿ ಹಾಲು ಕುಡಿದು ಹೊರ ನಡೆದಿದೆ. ಗೃಹ ಸಚಿವರ ಮನೆಯಲ್ಲೇ ಕೋತಿ ಹಾಲು ಕಳ್ಳತನ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಹಲವು ರೀತಿ ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net