

ನವದೆಹಲಿ: ಒಂಟೆಯ ( Camel ) ನಾಲ್ಕು ಕಾಲುಗಳನ್ನು ಕಟ್ಟಿ ಬೈಕ್ ಮೇಲೆ ತೆಗೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಈಗ ಭಯಂಕರ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ವಿಡಿಯೋವನ್ನು ನೋಡಿದ ಜನರು ಕೂಡಲೇ ಅವರ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದ್ರೆ ಈ ಒಂದು ಘಟನೆ ನಡೆದಿದ್ದು ಎಲ್ಲಿ. ಮೂಲವಾಗಿ ವಿಡಿಯೋ ಯಾರು ಶೇರ್ ಮಾಡಿದ್ದು ಎಂಬ ಮಾಹಿತಿಗಳು ಇನ್ನೂ ಸ್ಪಷ್ಟವಾಗಿ ಸಿಕ್ಕಿಲ್ಲ.
ಒಂಟೆಗಳು ಸಾಧಾರಣವಾಗಿ ಅತಿಯಾದ ತಾಪಮಾನ ಇರುವ ಕಡೆ ವಾಸಿಸುವಂತಹ ಪ್ರಾಣಿಗಳು. ಮರುಭೂಮಿಗಳಲ್ಲಿ ಇವುಗಳನ್ನು ಪ್ರಯಾಣಕ್ಕಾಗಿ ಹೆಚ್ಚು ಬಳಸುತ್ತಾರೆ. ಇಂತಹ ದೈತ್ಯಾಕಾರದ ಒಂಟೆಯನ್ನು ಕೇವಲ ಟೂ ವ್ಹೀಲರ್ ಬೈಕ್ ಮೇಲೆ ಸಾಗಿಸುತ್ತಿರುವುದು ವಿಚಿತ್ರವಾಗಿ ಕಾಣುವುದರ ಜೊತೆಗೆ ಆ ಮೂಕ ಪ್ರಾಣಿಯ ಮೇಲೆ ಮರುಕವೂ ಕೂಡ ಹುಟ್ಟತ್ತಿದೆ.
ವಿಡಿಯೋದಲ್ಲಿ ರಸ್ತೆಯ ಅಕ್ಕಪಕ್ಕ ಅರೇಬಿಕ್ ಭಾಷೆಯ ಕಟೌಟ್ಗಳು ಕಾಣಿಸಿದ್ದು ಬಹುಶಃ ಇದು ಮಧ್ಯಪ್ರಾಚ್ಯದ ಯಾವುದಾದರೂ ದೇಶದಲ್ಲಿ ನಡೆದಿರುವ ಘಟನೆ ಎಂದು ಅಂದಾಜಿಸಲಾಗುತ್ತಿದೆ. ಆದ್ರೆ ವಿಡಿಯೋ ಮಾತ್ರ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.