ಬಾಗಿಲಿನ ಚೌಕಟ್ಟಿನಲ್ಲಿ ಗೆದ್ದಲು ಎಂದು ಭಾವಿಸಿದ್ದರು; ತೆಗೆದು ನೋಡಿದಾಗ ಕಾದಿತ್ತು ಶಾಕ್​!

Snake
Published on

ಮುಂಬೈ: ಮೆನೆಯ ಬಾಗಿಲಿನ ಚೌಕಟ್ಟುಗಳನ್ನು ಗೆದ್ದಲು ತಿಂದಿರಬಹುದು ಎಂದು ಭಾವಿಸಿ ಸ್ವಚ್ಛಗೊಳಿಸಲು ಮುಂದಾದ ಮನೆ ಅವರಿಗೆ ಹುಳಗಳ ಬದಲು ಹಾವಿನ ಮರಿಗಳು ಸಿಕ್ಕಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾದಲ್ಲಿ ನಡೆದಿದೆ.

ಚೌಕಟ್ಟುಗಳನ್ನು ತೆಗೆದು ಪರಿಶೀಲನೆ ನಡೆಸಿದಾಗ ಮನೆ ಮಂದಿ ಶಾಕ್​ ಆಗಿದ್ದು ಕೂಡಲೇ ಹಾವು ಹಿಡಯುವವರನ್ನು ಕರೆದಿದ್ಧಾರೆ.

ಒಂದಲ್ಲ, ಎರಡಲ್ಲ ಬರೋಬ್ಬರಿ

ಈ ಕುರಿತು ಪ್ರತಿಕ್ರಿಯಿಸಿರುವ ಮನೆ ಮಾಲೀಕ ಸೀತಾರಾಮ್​ ಶರ್ಮಾ ಎಂದಿನಂತೆ ಮನೆ ಕೆಲಸದವರು ಶುಚಿಗೊಳಿಸುವ ವೇಳೆ ಹಾವಿನ ಮರಿ ಬಾಗಿಲಿನ ಚೌಕಟ್ಟಿನೊಳಗೆ ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಮೊದಲು ನಾವು ಗೆದ್ದಲು ಹಿಡಿದಿರಬಹುದು ಎಂದು ಭಾವಿಸಿದ್ದೆವು.

ನಂತರ ನಾವು ಹಾವು ಹಿಡಿಯುವವರನ್ನು ಕರೆಸಿದೆವು ಅವರು ಸತತ ನಾಲ್ಕು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಒಳಗೆ 39 ಹಾವಿನ ಮರಿ ಇರುವುದಾಗಿ ತಿಳಿಸಿದ್ದಾರೆ ಎಂದು ಮನೆ ಮಾಲೀಕ ಸೀತಾರಾಮ್​ ಶರ್ಮಾ ಮಾಹಿತಿ ನೀಡಿದ್ದಾರೆ.

ಹಿಡಿದಿರುವ ಹಾವುಗಳು ವಿಷಕಾರಿ ಅಲ್ಲ

ಈ ಕುರಿತು ಪ್ರತಿಕ್ರಿಯಿಸಿರುವ ಉರಗ ತಜ್ಱ ಬಂಟಿ ಶರ್ಮಾ ಹಿಡಿದಿರುವ ಹಾವುಗಳು ವಿಷಕಾರಿ ಅಲ್ಲ. ಹಾವುಗಳು ಬಾಗಿಲಿನ ಚೌಕಟ್ಟಿನಲ್ಲಿದ್ದ ಗೆದ್ದಲುಗಳನ್ನು ತಿನ್ನುತ್ತಿದ್ದವು. ಸದ್ಯ ಹಿಡಿದಿರುವ ಹಾವುಗಳು ವಾರದ ಹಿಂದೆಯಷ್ಟೇ ಜನನವಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net