30 ಮುಖ್ಯಮಂತ್ರಿಗಳ ಪೈಕಿ 29 ಮಂದಿ ಕರೋಡ್​ಪತಿಗಳು; ಸಮೀಕ್ಷೆ

Money
Published on

ನವದೆಹಲಿ: ತಾವು ಚುನಾವಣೆ ಸಮಯದಲ್ಲಿ ಸಲ್ಲಿಸುವ ನಾಮಪತ್ರಗಳಲ್ಲಿ ಸಲ್ಲಿಸಿರುವ ವಿವರಗಳ ಪ್ರಕಾರ ದೇಶದ 30 ಮುಖ್ಯಮಂತ್ರಿಗಳ ಪೈಕಿ 29 ಮಂದಿ ಕೋಟ್ಯಾಧಿಪತಿಗಳು ಎಂದು ಅಸೋಸಿಯೇಷನ್​ ಫಾರ್​ ಡೆಮಾಕ್ರಾಟಿಕ್ ರಿಫರ್ಮ್ಸ್(ADR) ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್​ನಲ್ಲಿ ತಿಳಿಸಲಾಗಿದೆ ಎಂದು ADR ಹಾಗೂ ಎಲೆಕ್ಷನ್​ ವಾಚ್​ ಬಿಡುಗಡೆ ಂಆಡಿರುವ ಮಾಹಿತಿಯಲ್ಲಿ ತಿಳಿದು ಬಂದಿದೆ.

30ರ ಪೈಕಿ 29ಮಂದಿ ಕರೋಡ್​ಪತಿಗಳು

ವಿವಿಧ ರಾಜ್ಯಗಳ 30 ಮುಖ್ಯಮಂತ್ರಿಗಳ ಪೈಕಿ 29(ಶೇ.97ರಷ್ಟು) ಮಂದಿ ಕೋಟ್ಯಾಧಿಪತಿಗಳಾಗಿದ್ದು ಪ್ರತಿ ಸಿಎಂನ ಆಸ್ತಿ ಸರಾಸರಿ 33.96 ಕೋಟಿ ರೂ.ಮೌಲ್ಯ ಎಂದು ಹೇಳಲಾಗಿದೆ.

30 ಜನ ಮುಖ್ಯಮಂತ್ರಿಗಳ ಪೈಕಿ 13(ಶೇ.43 ರಷ್ಟು) ಮಂದಿ ತಮ್ಮ ಮೇಲೆ ದಾಖಲಾಗಿರುವ ಕ್ರಿಮಿನಲ್​ ಪ್ರಕರಣಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಜಾಮೀನು ರಹಿತ ಅಪರಾಧ, ಜೈಲು ಶಿಕ್ಷೆಯ ಬಗ್ಗೆಯೂ ತಿಳಿಸಲಾಗಿದೆ.

ಜಗನ್​ ಮೊದಲು, ಮಮತಾ ಕೊನೆ

ಕರೋಡ್​ಪತಿ ಮುಖ್ಯಮಂತ್ರಿಗಳು ಪೈಕಿ ಆಂಧ್ರಪ್ರದೇಶ ಸಿಎಂ ಜಗನ್​ ಮೋಹನ್​ ರೆಡ್ಡಿ(510 ಕೋಟಿ ರೂಪಾಯಿ) ಮೊದಲ ಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೇಮಾ ಖಂಡು(163 ಕೋಟಿ ರೂಪಾಯಿ), ಓಡಿಶಾದ ನವೀನ್​ ಪಟ್ನಾಯಕ್​(63 ಕೋಟಿ ರೂಪಾಯಿ) ಮೌಲ್ಯದ ಆಸ್ತಿ ಹೊಂದಿದ್ದಾರೆ.

ಅತ್ಯಂತ ಕಡಿಮೆ ಆಸ್ತಿ ಘೋಷಿಸಿರುವವರ ಪೈಕಿ ಕೇರಳದ ಪಿನರಾಯಿ ವಿಜಯನ್​(1 ಕೋಟಿ ರೂಪಾಯಿ), ಹರಿಯಾಣದ ಮನೋಹರ್​ ಲಾಲ್​ ಖಟ್ಟರ್​(1 ಕೋಟಿ ರೂಪಾಯಿ), ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ(15 ಲಕ್ಷ ರೂಪಾಯಿ) ಮೌಲ್ಯದ ಆಸ್ತಿ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net