ಶಾಲೆಗೆ ಬಾಂಬ್​ ಬೆದರಿಕೆ; ಶೋಧ ಕಾರ್ಯಾಚರಣೆ

Delhi School
Published on

ನವದೆಹಲಿ: ದೆಹಲಿಯ ಡಿಫೆನ್ಸ್​ ಕಾಲೋನಿ ಅಲ್ಲಿರುವ ಶಾಲೆಯ ಆವರಣದಲ್ಲಿ ಬಾಂಬ್​ಗಳನ್ನು ಇಟ್ಟಿರುವುದಾಗಿ ಇ-ಮೇಲ್​ ಮೂಲಕ ಬೆದರಿಕೆ ಬಂದ ಕಾರಣ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಪೋಟಕ ವಸ್ತುಗಳ ಇರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಹೇಳಿದ್ಧಾರೆ.

ಬ್ರಿಜೇಶ್​ ಎಂಬು ವ್ಯಕ್ತಿಯೂ ನಮಗೆ ಕರೆ ಮಾಡಿ ಬೆಳ್ಳಗೆ 10:49ಕ್ಕೆ BRT ರಸ್ತೆಯಲ್ಲಿರುವ ಇಂಡಿಯನ್​ ಶಾಲೆಗೆ ಇ-ಮೇಲ್​ ಮೂಲಕ ಬಾಂಬ್​ ಬೆದರಿಕೆ ಬಂದಿರುವ ಬಗ್ಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು ಇ-ಮೇಲ್​ ಕಳುಹಿಸಿದವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ಧಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net