ಅವರಿಬ್ಬರಿಗೆ ಭಾರತೀಯರ ಮೇಲೆ ನಂಬಿಕೆ ಇಲ್ಲ; ರಾಹುಲ್​ ಗಾಂಧಿ-ಪ್ರಿಯಾಂಕಾ ವಿರುದ್ಧ ಕಿಡಿಕಾರಿದ ಯೋಗಿ

yogi
Published on

ಉತ್ತರಪ್ರದೇಶ: ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಜತೆಗೆ ಟೀಕೆ-ಪ್ರತಿಟೀಕೆಗಳೂ ಉತ್ತರಪ್ರದೇಶದಲ್ಲಿ ಮೇಲಾಟ ನಡೆಸುತ್ತಿದ್ದು, ಇದೀಗ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಗಾಂಧಿ ಕುಟುಂಬದ ಕುಡಿಗಳ ವಿರುದ್ಧ ಕಿಡಿಕಾರಿದ್ದಾರೆ.

ಗಾಂಧಿ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ ಅವರು ಸೂಚ್ಯವಾಗಿ ಅದನ್ನು ಹೇಳಿದ್ದಾರೆ. ಉತ್ತರಪ್ರದೇಶವು ಕುಟುಂಬವೊಂದರ ನಾಲ್ವರನ್ನು ಸಂಸತ್ತಿಗೆ ಕಳುಹಿಸಿದೆ. ಆದರೆ ಆ ಅವರಿಬ್ಬರು ಕೇರಳಕ್ಕೆ ಹೋದಾಗ ಉತ್ತರಪ್ರದೇಶವನ್ನು ಹಾಗೂ ಇಲ್ಲಿನ ಜನರನ್ನೇ ಕಡೆಗಣಿಸಿ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಹೆಸರು ಹೇಳದೆ ಅವರ ಬಗ್ಗೆ ಮಾತನಾಡಿದ ಯೋಗಿ, ಅವರು ದೇಶದ ಹೊರಗೆ ಹೋದಾಗ ಭಾರತದತ್ತ ಬೆರಳು ತೋರಿ ಮಾತನಾಡುತ್ತಾರೆ. ಅವರಿಗೆ ಭಾರತದ ಜನತೆ ಮೇಲೆ ನಂಬಿಕೆ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net