

ತೈಲ ಬೆಲೆ ಪ್ರತಿದಿನ ಪರಿಷ್ಕರಣೆ ಆಗುವ ಮಾದರಿಯಲ್ಲಿ ಇನ್ಮುಂದೆ ಎಲ್ಪಿಜಿ ಸಿಲಿಂಡರ್ ಬೆಲೆ ವಾರಕ್ಕೊಮ್ಮೆ ಪರಿಷ್ಕರಣೆ ಆಗಲಿದ್ದು, 2021ರಿಂದ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಸದ್ಯ ಎಲ್ಪಿಜಿ ಬೆಲೆ ತಿಂಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದೆ ಎನ್ನಲಾಗಿದೆ.
ಚೆಕ್ ವಂಚನೆ ತಡೆಯಲು -ಠಿ; 50 ಸಾವಿರ ಮತ್ತು ಅದಕ್ಕೂ ದೊಡ್ಡ ಮೊತ್ತದ ಪಾವತಿಗೆ ಆರ್ಬಿಐ ಸೂಚಿಸಿರುವ ಹೊಸ ನಿಯಮ ಜಾರಿಗೆ ಬರಲಿದೆ. ಚೆಕ್ನಲ್ಲಿ ಕನಿಷ್ಠ ಸುರಕ್ಷತಾ ವೈಶಿಷ್ಟ್ಯ ಸೂಚಿಸುವ ಸಿಟಿಎಸ್ -2010 ಮಾನದಂಡ ಇರುತ್ತದೆ. ಚೆಕ್ ನೀಡುವ ಮೊದಲು ಅದರ ಸಂಖ್ಯೆ, ದಿನಾಂಕ, ಹೆಸರು, ಖಾತೆ ಸಂಖ್ಯೆ, ಮೊತ್ತ ಮಾಹಿತಿಗಳನ್ನು ಬ್ಯಾಂಕ್ಗೆ ನೀಡಬೇಕಾಗುತ್ತದೆ.
ಹೊಸ ವರ್ಷದಿಂದ ಗ್ರಾಹಕರು ತಮ್ಮ ಮ್ಯಾಗ್ನೆಟಿಕ್ ಎಟಿಎಂ-ಡೆಬಿಟ್ ಕಾರ್ಡ್ ಬದಲಿಸಬೇಕು ಎಂದು ಎಸ್ಬಿಐ ತಿಳಿಸಿದೆ.
ನಾಲ್ಕು ಚಕ್ರಗಳಿಗೂ ಮೇಲ್ಪಟ್ಟ ಎಲ್ಲ ವಾಹನಗಳಿಗೆ ಫಾಸ್ಟಾ್ಯಗ್ ಕಡ್ಡಾಯವಾಗಲಿದೆ. ಫಾಸ್ಟಾ್ಯಗ್ ಇಲ್ಲದ ವಾಹನಗಳನ್ನು ಟೋಲ್ಗಳಲ್ಲಿ ತಡೆಯಲಾಗುತ್ತದೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಸೇವಾ ತೆರಿಗೆ ಮತ್ತು ಅಬಕಾರಿ ಸುಂಕಕ್ಕೆ ಸಂಬಂಧಿಸಿದ ಬಾಕಿ ಉಳಿದಿರುವ ವಿವಾದಾತ್ಮಕ ಪ್ರಕರಣಗಳ ಪರಿಹಾರಕ್ಕಾಗಿ ಪರಿಚಯಿಸಲಾಗಿದ್ದ ‘ಸಬ್ಕಾ ವಿಶ್ವಾಸ್ ಯೋಜನೆ’ ಡಿಸೆಂಬರ್ಗೆ ಮುಕ್ತಾಯಗೊಳ್ಳಲಿದೆ.
ಲ್ಯಾಂಡ್ಲೈನ್ ಫೋನ್ ಮೂಲಕ ಮೊಬೈಲ್ಗಳಿಗೆ ಕರೆ ಮಾಡುವಾಗ ಮೊದಲು ಸೊನ್ನೆ ನಮೂದಿಸುವುದು ಕಡ್ಡಾಯ.
ಬ್ಯಾಂಕ್ ಗ್ರಾಹಕರು ನೆಫ್ಟ್ (ಎನ್ಇಎಫ್ಟಿ) ಮೂಲಕ ನಡೆಸುವ ವಹಿವಾಟುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನೆಫ್ಟ್ನ 24*7 ಸೇವೆಯನ್ನು ಆರ್ಬಿಐ ಡಿಸೆಂಬರ್ 16ರಿಂದ ಪ್ರಾರಂಭಿಸಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಪಿಎಫ್ ಅಡಿಯಲ್ಲಿ ಪಿಂಚಣಿ ಕಮ್ಯುಟೇಷನ್ ಸೌಲಭ್ಯ ಸಿಗಲಿದೆ. ಈ ಸೌಲಭ್ಯದಡಿ ಮುಂಚಿತವಾಗಿ ಪಿಂಚಣಿಯ ಒಂದು ದೊಡ್ಡ ಮೊತ್ತವನ್ನು ನೀಡಲಾಗುತ್ತದೆ. ಮಾಸಿಕ ಪಿಂಚಣಿಯನ್ನು ಮುಂದಿನ 15 ವರ್ಷಗಳವರೆಗೆ 3ನೇ ಒಂದು ಭಾಗದಷ್ಟು ಕಡಿತಗೊಳಿಸಲಾಗುತ್ತದೆ. 15 ವರ್ಷಗಳ ನಂತರ, ಪಿಂಚಣಿದಾರರು ಪೂರ್ಣ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ವರ್ಷದಿಂದ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಆಧಾರಿತ ಎಟಿಎಂ ಹಣ ವಿತ್ಡ್ರಾ ಸೌಲಭ್ಯವನ್ನು ಪ್ರಾರಂಭಿಸಲಿದೆ. ಇದರ ಅನ್ವಯ 10 ಸಾವಿರಕ್ಕೂ ಹೆಚ್ಚಿನ ಹಣವನ್ನು ಎಟಿಎಂನಿಂದ ಪಡೆಯುವಾಗ ಮೊಬೈಲ್ಗೆ ಬರುವ ಒಟಿಪಿ ಸಂಖ್ಯೆ ನಮೂದಿಸುವುದು ಕಡ್ಡಾಯ.
ಬಿಡಿ ಭಾಗಗಳ ಬೆಲೆ ಹೆಚ್ಚಳದಿಂದಾಗಿ ವಾಹನ ದುಬಾರಿಯಾಗಲಿದ್ದು, ಟಾಟಾ ಮೋಟಾರ್ಸ್, ಹೀರೋ ಮೋಟೊಕಾರ್ಪ್, ಟೊಯೋಟಾ, ಮಹೀಂದ್ರಾ, ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ ಇಂಡಿಯಾ, ಮರ್ಸಿಡಿಸ್ ಬೆಂಜ್, ಕಿಯಾ ಮೋಟಾರ್ಸ್ ಮತ್ತು ನಿಸ್ಸಾನ್ ಮೋಟಾರ್ ಇಂಡಿಯಾ ಸಂಸ್ಥೆಗಳು ಬೆಲೆ ಹೆಚ್ಚಿಸಲಿವೆ.
50 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು ತಮ್ಮ ಗ್ರಾಹಕರಿಗೆ ಜನವರಿ 1ರಿಂದ ಯಾವುದೇ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕವಿಲ್ಲದೆ ಡೆಬಿಟ್ ಕಾರ್ಡ್ ಮತ್ತು ಯುಪಿಐ ಕ್ಯೂಆರ್ ಕೋಡ್ ಮೂಲಕ ಪಾವತಿಸುವ ಸೌಲಭ್ಯವನ್ನು ಒದಗಿಸಲಿವೆ. ಈ ಶುಲ್ಕವನ್ನು ಸರ್ಕಾರ ಭರಿಸಲಿದೆ.