ಈ ಐವರು ಯುವಕರು ಆಂಬುಲೆನ್ಸ್ ನಲ್ಲಿ ಎಲ್ಲಿಗೆ ಹೋಗುತ್ತಿದ್ದರು? ಅವರನ್ನು ಪೊಲೀಸರು ಹಿಡಿದು ಕಳಿಸಿದ್ದು ಎಲ್ಲಿಗೆ?

Kundagol Home Quarantine 26 MAR 20
Published on

ಚನ್ನರಾಯಪಟ್ಟಣ: ಚೆಕ್‌ಪೋಸ್ಟ್‌ನಲ್ಲಿ ಪೊಲೀಸರಿಂದ ಬಚಾವಾಗಲು ಖಾಸಗಿ ಆಂಬುಲೆನ್ಸ್‌ನಲ್ಲಿ ಬರುತ್ತಿದ್ದ ಐವರು ಯುವಕರು ಮಂಗಳವಾರ ಪೊಲೀಸರಿಗೆ ಸಿಕ್ಕಿಬಿದ್ದು ಹೋಂ ಕ್ವಾರಂಟೈನ್ ಸೇರಿದ್ದಾರೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಅಯ್ಯಂಗಾರ್ ಕೇಕ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಬೇಲೂರು ತಾಲೂಕಿನ ಯುವಕರು, ಸಕಲೇಶಪುರ ತಾಲೂಕಿನ ವಡೂರು ಗ್ರಾಮದ ಆಂಬುಲೆನ್ಸ್ ಚಾಲಕನನ್ನು ಸಂಪರ್ಕಿಸಿ ಆತನ ವಾಹನದಲ್ಲಿ ಬೆಂಗಳೂರಿನಿಂದ ಊರಿಗೆ ಹೊರಟಿದ್ದರು.

ಆದರೆ ಹಿರೀಸಾವೆ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದರು. ‘ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಬದುಕುವುದು ಕಷ್ಟವಾಗಿದೆ. ಹೀಗಾಗಿ ಹುಟ್ಟೂರು ಸೇರಲು ಆಂಬುಲೆನ್ಸ್ ನೆರವು ಪಡೆದೆವು. 7 ಸಾವಿರ ರೂ. ಬಾಡಿಗೆ ಸಹ ನೀಡಿದ್ದೇವೆ’ ಎಂದು ಯುವಕರು ಹೇಳಿಕೊಂಡರು.

ಬಳಿಕ ಹಿರೀಸಾವೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಎಲ್ಲರ ಆರೋಗ್ಯ ತಪಾಸಣೆ ನಡೆಸಿದರು. ಐವರಿಗೂ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಮುದ್ರೆ ಒತ್ತ್ತಿ ಮನೆಗೆ ಕಳುಹಿಸಲಾಯಿತು. ವಾಹನ ವಶಕ್ಕೆ ಪಡೆದಿರುವ ಹಿರೀಸಾವೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net