Social Media: ಈ ದೇಶಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಬಳಸುತ್ತಾರೆ, ಭಾರತದ ಸ್ಥಾನ ಕೇಳಿದ್ರೆ ಶಾಕ್​ ಆಗ್ತಿರಾ...?

Social Media
Published on

Social Media: ಇಂದಿನ ವೇಗವಾಗಿ ಹುಡುತ್ತಿರುವ ಕಾಲದಲ್ಲಿ, ಸೋಷಿಯಲ್​ ಮೀಡಿಯಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಜನರು ತಮ್ಮ ದಿನದ ಹೆಚ್ಚಿನ ಭಾಗವನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಟಿಕ್‌ಟಾಕ್ ಮತ್ತು ಇತರ ಆ್ಯಪ್​ಗಳ ಸ್ಕ್ರೋಲಿಂಗ್, ಚಾಟ್ ಮತ್ತು ವೀಡಿಯೊಗಳನ್ನು ವೀಕ್ಷಿಸುವುದರಲ್ಲಿ ಕಳೆಯುತ್ತಾರೆ. ಆದರೆ, ಯಾವ ದೇಶಗಳು ಸಾಮಾಜಿಕ ಜಾಲತಾಣ ನೋಡುವುದರಲ್ಲಿ ಹೆಚ್ಚು ಸಮಯವನ್ನು ವ್ಯರ್ಥ ಮಾಡುತ್ತಿವೆ ಎಂದು ನಿಮಗೆ ತಿಳಿದಿದೆಯೇ? ಇತ್ತೀಚಿನ ವರದಿಯ ಪ್ರಕಾರ, ಅನೇಕ ದೇಶಗಳಲ್ಲಿ ಜನರು ದಿನಕ್ಕೆ 3-5 ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮದಲ್ಲಿಯೇ ಕಳೆಯುತ್ತಾರೆ. ಇದರಲ್ಲಿ ಉನ್ನತ ದೇಶಗಳ ಪಟ್ಟಿಗಳು ಮತ್ತು ಭಾರತದ ಸ್ಥಾನವನ್ನು ತಿಳಿಯೋಣ ಬನ್ನಿ.

ಫಿಲಿಪೈನ್ಸ್

ಫಿಲಿಪೈನ್ಸ್ ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ಸಮಯ ಕಳೆಯುವ ದೇಶವಾಗಿದೆ. ಇಲ್ಲಿನ ಜನರು ದಿನಕ್ಕೆ ಸರಾಸರಿ 4 ರಿಂದ 5 ಗಂಟೆಗಳು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ. ಇದರರ್ಥ ದಿನದ ಕಾಲು ದಿನ ಸೋಷಿಯಲ್​ ಮೀಡಿಯಾದಲ್ಲಿಯೇ ಕಳೆಯುತ್ತಾರೆ.

ಕೊಲಂಬಿಯಾ

ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಕೊಲಂಬಿಯಾ ಎರಡನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, ಇಲ್ಲಿನ ಜನರು ದಿನಕ್ಕೆ ಸರಾಸರಿ 3 ಗಂಟೆ 46 ನಿಮಿಷಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಕಳೆಯುತ್ತಾರೆ. ಇಲ್ಲಿನ ಬಳಕೆದಾರರು ಚಾಟಿಂಗ್ ಮತ್ತು ವೀಡಿಯೊ ವಿಚಾರಕ್ಕಾಗಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.

ದಕ್ಷಿಣ ಆಫ್ರಿಕಾ

ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ. ಇಲ್ಲಿನ ಜನರು ಪ್ರತಿದಿನ ಸರಾಸರಿ 3 ಗಂಟೆ 43 ನಿಮಿಷಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಕಳೆಯುತ್ತಾರೆ. ಮನರಂಜನೆ ಮತ್ತು ಸುದ್ದಿಗಳಿಗಾಗಿ ಸಾಮಾಜಿಕ ಮಾಧ್ಯಮವು ಹೆಚ್ಚು ಜನಪ್ರಿಯವಾಗಿದೆ.

ಬ್ರೆಜಿಲ್

ಲ್ಯಾಟಿನ್​ ಅಮೆರಿಕದ ದೇಶವಾದ ಬ್ರೆಜಿಲಿಯನ್ನರು ಸಾಮಾಜಿಕ ಮಾಧ್ಯಮದಲ್ಲಿಯೂ ತುಂಬಾ ಸಕ್ರಿಯರಾಗಿದ್ದಾರೆ. ಇಲ್ಲಿನ ಜನರು ಪ್ರತಿದಿನ ಸುಮಾರು 3 ಗಂಟೆ 41 ನಿಮಿಷಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ವೇದಿಕೆಗಳಲ್ಲಿ ಕಳೆಯುತ್ತಾರೆ. ವಿಶೇಷವಾಗಿ ಯುವಕರು ಸಾಮಾಜಿಕ ಮಾಧ್ಯಮವನ್ನು ತಮ್ಮ ಪ್ರಾಥಮಿಕ ಸಂವಹನ ಸಾಧನವಾಗಿ ಬಳಸುತ್ತಾರೆ.

ಅರ್ಜೆಂಟೀನಾ

ಇನ್ನೋಂದು ದಕ್ಷಿಣ ಅಮೆರಿಕದ ರಾಷ್ಟ್ರವಾದವು ಸಾಮಾಜಿಕ ಮಾಧ್ಯಮದ ಬಳಕೆಯಲ್ಲಿ ಅರ್ಜೆಂಟೀನಾ ಐದನೇ ಸ್ಥಾನದಲ್ಲಿದೆ. ಇಲ್ಲಿನ ಜನರು ಪ್ರತಿದಿನ ಸರಾಸರಿ 3 ಗಂಟೆ 26 ನಿಮಿಷಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಕಳೆಯುತ್ತಾರೆ. ಅಲ್ಲದೆ, ಕ್ರೀಡೆ ಮತ್ತು ಮನರಂಜನಾ ವಿಷಯಗಳು ಇಲ್ಲಿ ಅತ್ಯಂತ ಜನಪ್ರಿಯ ವಿಷಯಗಳಾಗಿವೆ.

ಭಾರತದ ಸ್ಥಾನ ಎಷ್ಟು..?

ಈ ಪಟ್ಟಿಯಲ್ಲಿ ಭಾರತ 14 ನೇ ಸ್ಥಾನದಲ್ಲಿದೆ. ನಮ್ಮ ದೇಶದ ಜನರು ಸಾಮಾಜಿಕ ಮಾಧ್ಯಮದಲ್ಲಿ ಸರಾಸರಿ 2 ಗಂಟೆ 36 ನಿಮಿಷಗಳನ್ನು ಕಳೆಯುತ್ತಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿದ್ದರೂ, ಇತರ ಹಲವು ದೇಶಗಳಿಗಿಂತ ಸರಾಸರಿ ಸಮಯ ಕಡಿಮೆಯಾಗಿದೆ.

ಸಾಮಾಜಿಕ ಮಾಧ್ಯಮವನ್ನು ಮಿತವಾಗಿ ಬಳಸಿದಾಗ, ಇದು ಮಾಹಿತಿ ಮತ್ತು ಮನರಂಜನೆಗೆ ಉತ್ತಮ ಮೂಲವಾಗಿದೆ. ಅಲ್ಲದೆ, ಗಂಟೆಗಟ್ಟಲೆ ಇದರಲ್ಲಿ ಕಳೆಯುವುದು ಸಮಯ ವ್ಯರ್ಥ ಮಾಡುವುದಲ್ಲದೆ, ಮಾನಸಿಕ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net