ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಚಿಕ್ಕ ವಯಸ್ಸಿನಲ್ಲೇ ಕೋಟಿ ರೂಪಾಯಿ ಗಳಿಸುವಿರಿ! Birth of Stars

Zodiac Signs
Published on

Birth of Stars : ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಎಂದಿಗೂ ಇದರ ಬೇಡಿಕೆಯಂತೂ ಕಡಿಮೆಯಾಗುವುದಿಲ್ಲ. ಹಣವಿದ್ದರೆ ಸಾಕು ಈ ಜಗತ್ತಿನಲ್ಲಿ ಏನು ಮಾಡಬೇಕಾದರೂ ಮಾಡಬಹುದು ಎಂದರೆ ಅತಿಶಯೋಕ್ತಿಯಲ್ಲ. ಪ್ರಪಂಚದಾದ್ಯಂತ ಹಣವೇ ಪ್ರಮುಖ ಶಕ್ತಿಯಾಗಿದೆ. ವ್ಯಕ್ತಿಗಿಂತ ಹಣಕ್ಕೆ ಬೆಲೆ ಕೊಡುವವರ ಸಂಖ್ಯೆಯೇ ಹೆಚ್ಚು. ಇಂತಹ ಹಣವನ್ನು ಕೆಲವರು ಶ್ರಮದಿಂದ ಗಳಿಸಿದರೆ, ಕೆಲವರು ಅಕ್ರಮದ ಹಾದಿಯಲ್ಲಿ ಪಡೆಯುತ್ತಾರೆ. ಇನ್ನು ಕೆಲವರು ಅದೃಷ್ಟದ ಮೂಲಕ ತಮ್ಮದಾಗಿಸಿಕೊಳ್ಳುತ್ತಾರೆ. ಅದೃಷ್ಟ ಅಂತಾ ಬಂದಾಗ ಜ್ಯೋತಿಷ್ಯ ಪ್ರಮುಖ ಪಾತ್ರವಹಿಸುತ್ತದೆ.

ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ ಮತ್ತು ನಕ್ಷತ್ರವು ಅವರ ಭವಿಷ್ಯದ ಜೀವನ ಮತ್ತು ಅವರ ಧನಾತ್ಮಕ ಹಾಗೂ ಋಣಾತ್ಮಕ ಗುಣಗಳನ್ನು ಪ್ರಾಬಲ್ಯಗೊಳಿಸುತ್ತದೆ ಎಂದು ಬಲವಾಗಿ ನಂಬಲಾಗಿದೆ. ಕೆಲವು ನಕ್ಷತ್ರಗಳಲ್ಲಿ ಜನಿಸಿದವರು ತಮ್ಮ ಜೀವನದ ಕೊನೆಯವರೆಗೂ ಹೆಚ್ಚಿನ ಸಂಪತ್ತಿನಿಂದ ಬದುಕುತ್ತಾರಂತೆ. ಅದರಲ್ಲೂ ಈ ನಕ್ಷತ್ರಗಳಲ್ಲಿ ಜನಿಸಿದವರು ಚಿಕ್ಕ ವಯಸ್ಸಿನಲ್ಲೇ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಇತರರನ್ನು ಬೆರಗುಗೊಳಿಸುತ್ತಾರಂತೆ. ಈ ಪೋಸ್ಟ್​ನಲ್ಲಿ ಹಣದ ಯೋಗ ಇರುವವರು ಯಾವ ಯಾವ ನಕ್ಷತ್ರಗಳಲ್ಲಿ ಹುಟ್ಟುತ್ತಾರೆ ಎಂಬುದನ್ನು ತಿಳಿಯೋಣ.

ಭರಣಿ ನಕ್ಷತ್ರ

ಭರಣಿ ನಕ್ಷತ್ರದಲ್ಲಿ ಜನಿಸಿದವರು ಹುಟ್ಟಿನಿಂದಲೇ ಹಣದ ವಿಷಯದಲ್ಲಿ ಅತ್ಯಂತ ಅದೃಷ್ಟವಂತರು. ಅವರು ಜೀವನದಲ್ಲಿ ವಿರಳವಾಗಿ ಹಣದ ಕೊರತೆಯನ್ನು ಹೊಂದಿರುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಮುಂದಿನ ಪೀಳಿಗೆಗೆ ಆಸ್ತಿ ವರ್ಗಾಯಿಸುವ ಗಳಿಕೆಯ ಶಕ್ತಿಯನ್ನು ಹೊಂದಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಎಲ್ಲಿಗೆ ಹೋದರೂ, ಅವರು ಇತರರ ಮೇಲೆ ಪ್ರಾಬಲ್ಯ ಸಾಧಿಸುವಂತಹ ಉನ್ನತ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.

ಅಶ್ವಿನ ನಕ್ಷತ್ರ

ಅಶ್ವಿನಿ ನಕ್ಷತ್ರದವರು ಹುಟ್ಟುವಾಗಲೇ ಕುಬೇರ ಯೋಗದಲ್ಲಿ ಜನಿಸುತ್ತಾರೆ. ಇವರು ತಮ್ಮ ಜೀವನದುದ್ದಕ್ಕೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಕಡಿಮೆ ಅವಧಿಯಲ್ಲಿ ಆರ್ಥಿಕವಾಗಿ ಉನ್ನತ ಸ್ಥಾನವನ್ನು ತಲುಪುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಶಿಕ್ಷಣ ಮತ್ತು ಹಣಕಾಸಿನ ಬಗ್ಗೆ ಆಳವಾದ ಮತ್ತು ಸ್ಪಷ್ಟವಾದ ಜ್ಞಾನವನ್ನು ಹೊಂದಿರುತ್ತಾರೆ. ಇವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಮತ್ತು ತಮ್ಮ ಜೀವನದುದ್ದಕ್ಕೂ ತಾವು ಯೋಚಿಸಿದ ಸೌಕರ್ಯವನ್ನು ಅನುಭವಿಸುತ್ತಾರೆ. ಹಣ ಸಂಪಾದಿಸಲು ಅವರು ಕಷ್ಟಪಡಬೇಕಾಗಿಲ್ಲ.

ಕೃತಿಕಾ ನಕ್ಷತ್ರ

ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರು ಲಕ್ಷ್ಮಿ ಮತ್ತು ಕುಬೇರನ ಸಂಪೂರ್ಣ ಆಶೀರ್ವಾದದೊಂದಿಗೆ ಜನಿಸುತ್ತಾರೆ. ಕಡಿಮೆ ಶ್ರಮದಿಂದ ಹೆಚ್ಚು ಹಣ ಗಳಿಸುವ ಅದೃಷ್ಟ ಅವರಿಗೆ ಇರುತ್ತದೆ. ಇವರಿಗೆ ವಿದೇಶದಲ್ಲಿ ಉದ್ಯೋಗಾವಕಾಶಗಳು ಸಿಗುತ್ತವೆ ಅಥವಾ ಶಾಶ್ವತವಾಗಿ ವಿದೇಶದಲ್ಲಿ ವಾಸಿಸುವ ಅವಕಾಶವೂ ಸಿಗುತ್ತದೆ. ಇಡೀ ಕುಟುಂಬ ಐಷಾರಾಮಿ ಜೀವನ ನಡೆಸುವಂತೆ ಮಾಡಲು ಚಿಕ್ಕ ವಯಸ್ಸಿನಲ್ಲಿಯೇ ಶ್ರಮವಹಿಸುತ್ತಾರೆ ಮತ್ತು ಅದರಲ್ಲಿ ಯಶಸ್ವಿ ಕೂಡ ಆಗುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net