ಶಾಪಿಂಗ್​ ಮಾಲ್​ಗಳಲ್ಲಿ ಮೇಲಿನ ಮಹಡಿಯಲ್ಲೇ ಫುಡ್​ ಕೋರ್ಟ್​ ಏಕಿರುತ್ತೆ ಗೊತ್ತಾ? ಇಲ್ಲಿದೆ ಅಚ್ಚರಿಯ ಕಾರಣ! Food Courts

Food Courts
Published on

Food Courts : ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಕುಟುಂಬದ ಜೊತೆಗೆ ಉತ್ತಮ ಸಮಯ ಕಳೆಯಲು ಮಾಲ್‌ಗಳು, ರೆಸ್ಟೋರೆಂಟ್‌ಗಳು ಅಥವಾ ಸಿನಿಮಾಗಳಿಗೆ ಹೋಗುತ್ತಾರೆ. ಅದರಲ್ಲೂ ಶಾಪಿಂಗ್​ ಮಾಲ್‌ಗಳಿಗೆ ಹೋದಾಗ ಎಲ್ಲವನ್ನು ಸುತ್ತಾಡಿ ಕೊನೆಗೆ ಒಂದೊಳ್ಳೆ ಊಟ ಮಾಡಿಕೊಂಡು ಮನೆಗೆ ಹಿಂತಿರುಗುತ್ತಾರೆ.

ನೀವು ಗಮನಿಸಿರಬಹುದು ಪ್ರತಿಯೊಂದು ಶಾಪಿಂಗ್​ ಮಾಲ್​ಗಳಲ್ಲಿ ಫುಡ್​ ಕೋರ್ಟ್​ ಮೇಲಿನ ಮಹಡಿಗಳಲ್ಲಿ ಇರುತ್ತದೆ. ಮೇಲಿನ ಮಹಡಿಯಲ್ಲೇ ಏಕಿದೆ? ಕೆಳಗಡೆ ಇಡಬಹುದಿತ್ತಲ್ವಾ? ಎಂಬ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಮೇಲಿನ ಮಹಡಿಯ ತುಂಬಾ ವಿಶಾಲ ಪ್ರದೇಶದಲ್ಲಿ ಫುಡ್​ ಕೋರ್ಟ್​ ಇರುತ್ತದೆ. ಇದರ ಹಿಂದೆ ಒಂದು ಕಾರಣವೂ ಇದೆ. ಅದೇನು ಅಂತಾ ನಾವೀಗ ತಿಳಿಸುತ್ತೇವೆ.

ಶಾಪಿಂಗ್ ಮಾಲ್‌ಗಳಲ್ಲಿ ನೆಲ ಮಹಡಿಯಲ್ಲಿ ಫುಡ್ ಕೋರ್ಟ್‌ಗಳು ಇರಿಸಿದಾಗ ಜನರ ಗಮನ ಶಾಪಿಂಗ್ ಮೇಲೆ ಇರುವುದಿಲ್ಲ. ಅಲ್ಲದೆ, ಜನರ ಆಲೋಚನೆಗಳು ಕೂಡ ಬಹಳ ಬೇಗನೆ ಬದಲಾಗುತ್ತವೆ. ಇನ್ನು ಫುಡ್ ಕೋರ್ಟ್‌ಗೆ ವಿಶಾಲ ಪ್ರದೇಶವನ್ನು ನಿಗದಿಪಡಿಸಿ, ಆಕರ್ಷಕವಾಗಿ ಇರಿಸಿದರೆ, ಗ್ರಾಹಕರು ಆಸಕ್ತಿ ಹೊಂದುತ್ತಾರೆ ಮತ್ತು ಆಹಾರವನ್ನು ಖರೀದಿಸುತ್ತಾರೆ. ಇದೊಂದು ಮಾನವ ಸೈಕಾಲಜಿ ಎಂದೇ ಹೇಳಬಹುದು.

ಇನ್ನು ಮೇಲಿನ ಮಹಡಿಗಳಲ್ಲಿ ಫುಡ್ ಕೋರ್ಟ್‌ಗಳನ್ನು ಇರಿಸಿದಾಗ, ಗ್ರಾಹಕರಲ್ಲಿ ಹಸಿವು ಕೂಡ ಹೆಚ್ಚಾಗುತ್ತದೆ. ಏಕೆಂದರೆ, ಶಾಪಿಂಗ್​ ಅಂತಾ ಸುತ್ತಾಡಿ ಮೇಲಿನ ಮಹಡಿಗೆ ಹೋಗುವಷ್ಟರಲ್ಲಿ ಜನರು ತುಂಬಾ ದಣಿದಿರುತ್ತಾರೆ. ಏನಾದರೂ ತಿನ್ನಬೇಕು ಅನಿಸುತ್ತಿದೆ. ಆಗ ಅವರ ಕಣ್ಣಿಗೆ ಫುಡ್​ ಕೋರ್ಟ್​ ಬಿದ್ದರೆ ಹೆಚ್ಚಿನ ಆಹಾರವನ್ನು ಸೇವಿಸಲು ಕಾರಣವಾಗುತ್ತದೆ.

ಇದಲ್ಲದೆ, ಇತರ ಮಹಡಿಗಳಲ್ಲಿ ಫುಡ್ ಕೋರ್ಟ್‌ಗಳನ್ನು ಇರಿಸುವುದರಿಂದ ಶಾಪಿಂಗ್ ಮಾಲ್ ಸುಂದರವಾಗಿ ಕಾಣುವುದಿಲ್ಲ. ಫುಡ್​ ಕೋರ್ಟ್​ ತುಂಬಾ ಸ್ವಚ್ಛವಾಗಿ ಮತ್ತು ವಿಶಾಲವಾಗಿ ಕಾಣಲು ಬಯಸಿದರೆ, ಮೇಲಿನ ಮಹಡಿಗಳಲ್ಲಿ ಫುಡ್ ಕೋರ್ಟ್‌ಗಳನ್ನು ಇಡುವುದು ಖಂಡಿತವಾಗಿಯೂ ಉತ್ತಮವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net