Politicians Actresses wedding - ಮನರಂಜನೆಯ ಗ್ಲಾಮರ್​, ಜನಸೇವೆಯ ಗ್ರಾಮರ್​ ಒಂದಾದ ಬಳಿಕ...

Politicians celebrities wedding
Politicians celebrities wedding
Published on
Politicians Actress wedding -
ಸಿನಿಮಾ ಮತ್ತು ರಾಜಕಾರಣಕ್ಕೆ ಅವಿನಾಭಾವ ಸಂಬಂಧ. ಎರಡೂ ಸಾರ್ವಜನಿಕ ಕ್ಷೇತ್ರಗಳಾಗಿರುವುದೇ ಅದಕ್ಕೆ ಪ್ರಮುಖ ಕಾರಣ. ಸಿನಿಮಾ ಕಾರ್ಯಕ್ರಮಗಳಿಗೆ ರಾಜಕಾರಣಿಗಳು ಬರುವುದು, ರಾಜಕಾರಣಿಗಳ ಪರ ಸಿನಿಮಾ ಮಂದಿ ಪ್ರಚಾರ ಮಾಡುವುದು, ರಾಜಕಾರಣಿಗಳು ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವುದು, ರಾಜಕಾರಣಿಗಳ ಮಕ್ಕಳು ಸಿನಿಮಾಗಳಲ್ಲಿ ನಾಯಕ, ನಾಯಕಿಯಾಗಿರುವುದು, ಸಿನಿಮಾ ಮಂದಿ ರಾಜಕಾರಣಕ್ಕೂ ಎಂಟ್ರಿ ಕೊಡುವುದು ಸಾಮಾನ್ಯ. ಅದರ ಹೊರತಾಗಿಯೂ ರಾಜಕಾರಣಿಗಳು ಮತ್ತು ನಟ, ನಟಿಯರ ನಡುವಿನ ಸಂಬಂಧ ಆಗಾಗ ಮದುವೆಯ ಮೂಲಕವೂ ಗಟ್ಟಿಯಾಗಿದೆ. ಅದಕ್ಕೆ ಇತ್ತೀಚಿನ ಉದಾಹರಣೆ "ಟಗರು' ಚಿತ್ರದ ಕಾನ್​ಸ್ಟೆಬಲ್​ ಸರೋಜ ಖ್ಯಾತಿಯ ನಟಿ ತ್ರಿವೇಣಿ ರಾವ್​ ಮತ್ತು ತ್ರಿಪುರ ಮಾಜಿ ಸಿಎಂ, ಸಂಸದ ಬಿಪ್ಲವ್​ ಕುಮಾರ್​ ದೇವ್​ ಮದುವೆ. ಹಾಗಂತ ಈ ಎರಡೂ ಕ್ಷೇತ್ರಗಳ ಸಂಬಂಧ ಮೂರು ಗಂಟುಗಳಲ್ಲಿ ಬೆಸೆದುಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೆಲ ನಟ, ನಟಿಯರು ರಾಜಕಾರಣಿಗಳನ್ನು ವರಿಸಿದ್ದಾರೆ.

ಪರಿಣೀತಿ, ರಾಘವ್​ ಪ್ರೀತಿ

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಕ್ರಮೇಣ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಹೆಗ್ಗಳಿಕೆ ನಟಿ ಪರಿಣೀತಿ ಚೋಪ್ರಾಗೆ ಸಲ್ಲುತ್ತದೆ. ಇಂತಹ ಪರಿಣೀತಿ ಮತ್ತು ಇತ್ತೀಚೆಗಷ್ಟೆ ಬಿಜೆಪಿ ಸೇರಿರುವ ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್​ ಛಡ್ಡಾ ಇಬ್ಬರೂ ಕಾಲೇಜು ದಿನಗಳಿಂದ ಗೆಳೆಯರು. ಅವರ ಗೆಳೆತನ ಕ್ರಮೇಣ ಪ್ರೀತಿಗೆ ತಿರುಗಿ, 2023ರಲ್ಲಿ ಮದುವೆಯಾದ ಈ ಜೋಡಿಗೆ ಕಳೆದ ವರ್ಷ ಮುದ್ದಾದ ಗಂಡು ಮಗು ಜನಿಸಿದೆ.

ಹೋರಾಟದಲ್ಲಿ ಅರಳಿದ ಹೂವು!

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಮತ್ತು ಹಾದ್​ ಅಹ್ಮದ್​ ಭೇಟಿಯಾಗಿದ್ದರು. ಆ ಹೋರಾಟದ ಕಿಚ್ಚೇ, ಅವರ ನಡುವೆ ಪ್ರೀತಿಯ ಕಿಚ್ಚನ್ನೂ ಹಚ್ಚಿತ್ತು. ನಂತರ 2023ರ ೆಬ್ರವರಿಯಲ್ಲಿ ಈ ಜೋಡಿ ಮದುವೆಯಾಯಿತು. ಅದೇ ಸೆಪ್ಟೆಂಬರ್​ನಲ್ಲಿ ಸ್ವರಾ ಮುದ್ದಾದ ಮಗಳಿಗೆ ಜನ್ಮ ನೀಡಿದರು. ಇನ್ನು 2024ರವರೆಗೆ ಸಮಾಜವಾದಿ ಪಕ್ಷದಲ್ಲಿದ್ದ ಹಾದ್​, ನಂತರ ಶರದ್​ ಪವಾರ್​ರ ಎನ್​ಸಿಪಿ ಪಕ್ಷ ಸೇರಿದ್ದಾರೆ.

ಉತ್ತುಂಗದಲ್ಲಿ ಗುಡ್​ಬೈ ಹೇಳಿದ ಆಯೆಷಾ

ಬಾಲಿವುಡ್​ ನಟಿ ಆಯೆಷಾ ಟಾಕಿಯಾ ಗ್ಲಾಮರ್​ ಪಾತ್ರಗಳಲ್ಲಿ ಹೆಚ್ಚು ಮಿಂಚಿದವರು. ತಮ್ಮ ಕರಿಯರ್​ ಪೀಕ್​ನಲ್ಲಿ 23ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಗುಡ್​ಬೈ ಹೇಳಿದ ಅವರು, ಸಮಾಜವಾದಿ ಪಕ್ಷದ ಶಾಸಕ ಅಬು ಅಸೀಮ್​ ಆಜ್ಮಿ ಪುತ್ರ ರ್ಹಾನ್​ ಆಜ್ಮಿಯನ್ನು ಮದುವೆಯಾದರು. ಇಬ್ಬರಿಗೂ ಒಬ್ಬ ಮಗನಿದ್ದು, ಸದ್ಯ ಚಿತ್ರರಂಗದಿಂದ ದೂರವಿದ್ದರೂ ಆಯೆಷಾ, ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

ನವನೀತ್​ ಬಾಳಲ್ಲಿ ರವಿ ಮೂಡಿದಾಗ

ಕನ್ನಡದಲ್ಲಿ ನಟ ದರ್ಶನ್​ ಜತೆ "ದರ್ಶನ್​' (2004) ಸಿನಿಮಾ ಸೇರಿ ತಮಿಳು, ತೆಲುಗು, ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದ ನಟಿ ನವನೀತ್​ ರಾಣಾ, 2010ರಲ್ಲಿ ಚಿತ್ರರಂಗಕ್ಕೆ ಗುಡ್​ಬೈ ಹೇಳಿ 2011ರಲ್ಲಿ ರವಿ ರಾಣಾರನ್ನು ಮದುವೆಯಾದರು. ನಂತರ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು, 2019ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಸಂಸದೆ ಕೂಡ ಆದರು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಪರಭಾವಗೊಂಡರು.


ಕನ್ನಡದ ಜೋಡಿಗಳು...

ಇನ್ನು "ಪೀಕಬೂ' ಮೂಲಕ ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್​ ಮಾಡುತ್ತಿರುವ ನಟಿ ಅಮೂಲ್ಯ ಪತಿ ಜಗದೀಶ್​ ಚಂದ್ರ ಬಿಜೆಪಿಯಲ್ಲಿ ಸಕ್ರಿಯರಾಗಿದ್ದು, ಯುವ ಮೋರ್ಚಾದ ಬೆಂಗಳೂರು ಸೆಂಟ್ರಲ್​ ಅಧ್ಯಕ್ಷರಾಗಿದ್ದಾರೆ. 2017ರಲ್ಲಿ ಈ ಜೋಡಿ ಮದುವೆಯಾಗಿದ್ದು, ಇಬ್ಬರಿಗೂ ಅವಳಿ ಮಕ್ಕಳಿದ್ದಾರೆ. ಇನ್ನು "ಪೊನ್ನಿಯಿನ್​ ಸೆಲ್ವನ್​ 2' ಚಿತ್ರದ "ವೀರ ರಾಜ ವೀರ' ಹಾಡು ಸೇರಿ ಹಲವು ಜಾಹೀರಾತುಗಳಿಗೆ ಧ್ವನಿಯಾಗಿರುವ ಹೆಗ್ಗಳಿಕೆ ಕರ್ನಾಟಕ ಸಂಗೀತ ಗಾಯಕಿ, ಭರತನಾಟ್ಯ ನೃತ್ಯಗಾತಿ ಶಿವಶ್ರೀ ಸ್ಕಂದಪ್ರಸಾದ್​ಗೆ ಸಲ್ಲುತ್ತದೆ. ಮೂಲತ@ ತಮಿಳುನಾಡಿನವರಾದ ಅವರು ಕಳೆದ ವರ್ಷ ಸಂಸದ ತೇಜಸ್ವಿ ಸೂರ್ಯರನ್ನು ಮದುವೆಯಾಗಿ ಕರ್ನಾಟಕದ ಸೊಸೆಯಾದರು. "ಅಬ್ಬರ', "ೈಟರ್​' ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿರುವ ಲೇಖಾಚಂದ್ರ ಮದುವೆಯಾಗಿರುವುದು ಯುವನಾಯಕ ಶ್ರೇಯಸ್​ರನ್ನು. ಶ್ರೇಯಸ್​ ತಾಯಿ ಪದ್ಮಾವತಿ ಜಯರಾಮ್​ ರಾಮನಗರದ ಮೋಟಗೊಂಡನದಳ್ಳಿ ಗ್ರಾ.ಪಂ.ಅಧ್ಯೆಯಾಗಿದ್ದು, ಕಾಂಗ್ರೆಸ್​ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ. ಮಾಜಿ ಶಾಸಕ, ಮಾಜಿ ಸಂಸದ ಎಲ್​.ಆರ್​.ಶಿವರಾಮೇಗೌಡ ಪುತ್ರಿ ಭವ್ಯಾ ಗೌಡ ಮದುವೆಯಾಗಿರುವುದು "ರಂಗಿನ ರಾಟೆ', "ಬೇಟೆಗಾರ' ಸೇರಿ ಕೆಲ ಕನ್ನಡ, ತೆಲುಗು ಚಿತ್ರಗಳಲ್ಲಿ ನಟಿಸಿರುವ ರಾಜೀವ್​ ರಾಥೋಡ್​ರನ್ನು. 2017ರಲ್ಲಿ ಈ ಜೋಡಿ ಸಪ್ತಪದಿ ತುಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net