

PM: ಚೀನಾದ ಬೀಜಿಂಗ್‌ನಲ್ಲಿ ಸೆ.2ರಂದು ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾದ್ ಷರೀಫ್, ಭಾರತ ಮತ್ತು ರಷ್ಯಾದ ಸಂಬಂಧದ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಆದರೆ, ನಮಗೆ ನಿಮ್ಮ ದೇಶದ ಜತೆಗೆ ಉತ್ತಮವಾದ ಸಂಬಂಧ ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
"ನಾವು ಬಲವಾದ ಸಂಬಂಧಗಳನ್ನು ನಿರ್ಮಿಸಲು ಬಯಸುತ್ತೇವೆ, ಇದು ಪ್ರದೇಶದ ಪ್ರಗತಿ ಮತ್ತು ಸಮೃದ್ಧಿಗೆ ಪೂರಕವಾಗಿರುತ್ತದೆ" ಎಂದು ಷರೀಫ್ ಹೇಳಿದರು. ಅಲ್ಲದೆ, ಪುಟಿನ್ ಅವರನ್ನು "ಅತ್ಯಂತ ಕ್ರಿಯಾತ್ಮಕ ನಾಯಕ" ಎಂದು ಹೊಗಳುವ ಮೂಲಕ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಇಚ್ಛೆಯನ್ನು ಷರೀಫ್ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ.
ಬೀಜಿಂಗ್‌ನಲ್ಲಿ ನಡೆದ ರಾಜತಾಂತ್ರಿಕ ಸಭೆಗಳ ಸರಣಿಯ ಭಾಗವಾಗಿ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರನ್ನು ಸಹ ಭೇಟಿಯಾದರು.(ಏಜೆನ್ಸೀಸ್)