

ನವದೆಹಲಿ: ಮುಂಬರುವ ಬಿಹಾರ ವಿಧಾನಸಭೆ ಹಾಗೂ ಇತರ ಉಪಚುನಾವಣೆಗಳಲ್ಲಿ 65 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮತದಾನ ಅವಕಾಶ ವಿಸ್ತರಣೆ ಇಲ್ಲ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಸಾಗಾಟ ವ್ಯವಸ್ಥೆ ಹಾಗೂ ಸಿಬ್ಬಂದಿ ಕೊರತೆ ಮತ್ತು ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಆಯೋಗ ಹೇಳಿದೆ. ಆದರೆ, 80 ವರ್ಷದ ಅತಿ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಕೋವಿಡ್-19 ರೋಗಿಗಳಿಗೆ ಮತ್ತು ಕ್ವಾರಂಟೈನ್ನಲ್ಲಿರುವ ಶಂಕಿತರಿಗೆ ಅಂಚೆ ಮತದಾನದ ಅವಕಾಶ ಮುಂದುವರಿಯಲಿದೆ ಎಂದು ಸ್ಪಷ್ಟ ಪಡಿಸಿದೆ.
ಬಿಹಾರದಲ್ಲಿ ಹೆಚ್ಚುವರಿ 34,000 ಮತಕೇಂದ್ರ ಸ್ಥಾಪಿಸಲಿದ್ದು, ಸಿಬ್ಬಂದಿ ಮೇಲೆ ಹೆಚ್ಚಿನ ಹೊರೆ ಬೀಳುವುದರಿಂದ ಅಂಚೆ ಮತದಾನದ ಸೌಲಭ್ಯವನ್ನು 65 ವರ್ಷ ಮೇಲ್ಪಟ್ಟವರಿಗೆ ನೀಡದಿರಲು ನಿರ್ಧರಿಸಲಾಗಿದೆ.