

ಬೆಂಗಳೂರು: ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡೂ ವೇಳೆ ಬಿಡುಗಡೆಯಾಗುತ್ತಿದ್ದ ಕರೊನಾ ಕುರಿತ ಹೆಲ್ತ್ ಬುಲೆಟಿನ್ ಇನ್ಮುಂದೆ ದಿನಕ್ಕೊಂದು ಬಾರಿ ಮಾತ್ರ ಬರಲಿದೆ.
ರಾಜ್ಯದಲ್ಲಿ ಇಂದಿನಿಂದ(ಶನಿವಾರ) ಕೋವಿಡ್-19 ಹೆಲ್ತ್ ಬುಲೆಟಿನ್ ಬೆಳಗಿನ ವೇಳೆ ಪ್ರಕಟವಾಗುವುದಿಲ್ಲ. ಒಟ್ಟಾರೆಯಾಗಿ ಸಂಜೆ ವೇಳೆಯೇ ಬಿಡುಗಡೆ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿರಿ ನಾಳೆ ಲಾಕ್ಡೌನ್ ಇರಲ್ಲ!
ಕರೊನಾ ಟಾಸ್ಕ್ ಫೋರ್ಸ್ ಸಲಹೆಯಂತೆ ಬೆಳಗಿನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡದಿರಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಒಟ್ಟಾರೆಯಾಗಿ ಸಂಜೆ ವೇಳೆಯೇ ಕರೊನಾ ಕುರಿತ ಹೆಲ್ತ್ ಬುಲೆಟಿನ್ ನೀಡಲಾಗುತ್ತದೆ ಎಂದು ಸಚಿವರು ಸುದ್ದಿಗಾರರಿಗೆ ವಿವರಿಸಿದ್ದಾರೆ.
ಇದನ್ನೂ ಓದಿರಿ ಕ್ವಾರಂಟೈನ್ ಕೇಂದ್ರದಲ್ಲಿ ಕಾಂಡೋಮ್ ರಾಶಿ!