ಇಲ್ಲಿಯ ಅನ್ನ ತಿಂದು, ಶತ್ರು ದೇಶದ ಗುಣಗಾನ ಮಾಡುವವರಿಗೆ ಕ್ಷಮೆಯೇ ಇಲ್ಲ: ಸಚಿವ ಸಿ.ಟಿ.ರವಿ

CT ravi 22 Feb 20
Published on

ಉಡುಪಿ: ಬೇರೆ ಎಲ್ಲ ತಪ್ಪುಗಳಿಗೂ ಕ್ಷಮೆ ಇದೆ. ಆದರೆ ದೇಶದ್ರೋಹದ ಚಟುವಟಿಕೆಗಳಿಗೆ ಕ್ಷಮೆಯೇ ಇಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಕಾರ್ಕಳದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸೈನಿಕರು ಅಷ್ಟು ಚಳಿಯಲ್ಲಿ ಹಿಮಾಲಯದಲ್ಲಿ ನಿಂತು ದೇಶವನ್ನೇಕೆ ಕಾಯಬೇಕು. ಅವರು ಯಾಕೆ ಗುಂಡಿಗೆ ಬಲಿಯಾಗುತ್ತಾರೆ ಎಂಬುದನ್ನೆಲ್ಲ ಯೋಚಿಸಬೇಕು. ಈ ಪಾಕಿಸ್ತಾನ ಜಿಂದಾಬಾದ್ ಅನ್ನೋರು ಯಾರಿಗೆ ಹುಟ್ಟಿದ್ದಾರೆ. ಇಲ್ಲಿಯ ಅನ್ನ ತಿಂದು ಶತ್ರು ದೇಶದ ಗುಣಗಾನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತನ ಮಾನಸಿಕ ಸ್ಥಿತಿ ತುಂಬ ಅಪಾಯಕಾರಿ. ಅಮೂಲ್ಯಳ ಹಿಂದೆ ಒಂದು ತಂಡವೇ ಇದೆ. ಅದನ್ನು ಅಮೂಲ್ಯಾಳೇ ಬಹಿರಂಗಪಡಿಸಿದ್ದಾಳೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net