

ಈ ಸಣ್ಣ ಕಾಯಿ ಹಸಿದ ಹೊಟ್ಟೆ ತುಂಬಿಸಬಹುದೇ? ಶಿವ ಶಿವಾ! ಎಂಥ ಪ್ರಸಂಗ ಎಂದು ನೊಂದುಕೊಂಡ ಆ ತಾಯಿ ಶಂಕರರಿಗೆ ನಮಸ್ಕರಿಸಿ, ‘ಸ್ವಾಮಿ ಮಹಾತ್ಮರಾದ ತಮ್ಮನ್ನು ಉಪಚರಿಸಲು ಮನೆಯಲ್ಲಿ ಏನೂ ಇಲ್ಲ. ಇದ್ದ ಒಂದು ನೆಲ್ಲಿಕಾಯಿಯನ್ನೇ ಅರ್ಪಿಸುತ್ತಿದ್ದೇನೆ, ದಯಮಾಡಿ ಸ್ವೀಕರಿಸಿ’ ಎಂದಳು. ಅದನ್ನು ಸ್ವೀಕರಿಸಿದ ಶಂಕರರು, ಆ ತಾಯಿಯ ತ್ಯಾಗಬುದ್ಧಿಯನ್ನೂ, ಭಕ್ತಿಯನ್ನೂ ಅರಿತು, ಆಕೆಗೆ ಸಂಪದ ಪ್ರಾಪ್ತವಾಗಬೇಕೆಂದು ಸಂಕಲ್ಪಿಸಿ ಮಹಾಲಕ್ಷ್ಮಿಯನ್ನು ಕುರಿತು ಸ್ತೋತ್ರಗೈಯ್ಯುತ್ತಾರೆ. ಅದೇ ‘ಕನಕಧಾರಾ’ ಸ್ತೋತ್ರ. ಇದಕ್ಕೆ ‘ಕನಕವೃಷ್ಟಿಸ್ತೋತ್ರ’ವೆಂದೂ ಕರೆಯುವುದುಂಟು.
ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ|
ಭೃಂಗಾಂಗನೇವ ಮುಕುಲಾಭರಣಂ ತಮಾಲಂ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ|
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||
ಹೀಗೆಂದು ಶ್ರೀ ಶಂಕರರು 22 ನುಡಿಗಳಿಂದ ಕನಕಲಕ್ಷ್ಮಿಯ ಸ್ತೋತ್ರ ಮಾಡಿದರು. ಮಹಾಲಕ್ಷ್ಮಿಯ ದಿವ್ಯಾನುಗ್ರಹದಿಂದ ಆ ಮನೆಯ ಮುಂದೆ ಬಂಗಾರದ ನೆಲ್ಲಿಕಾಯಿಗಳ ಮಳೆಯೇ ಆಯಿತು. ಹೀಗೆ ಸತ್ಯವಂತರ ಸಂಕಲ್ಪಶಕ್ತಿಗೆ - ಯುಗಯುಗಗಳೇ ಸರಿಯಲಿ, ಕಲ್ಪಾಂತರಗಳೇ ಉರುಳಲಿ, ಶತಶತಮಾನಗಳೇ ನೂಕಲಿ, ಪ್ರಳಯವಿಲ್ಲ.