

ಕಳಸ: ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ದೇವಿ ದರ್ಶನ ಮಾಡಲು ಸದ್ಯಕ್ಕೆ ಅವಕಾಶ ಇಲ್ಲ.
ಲಾಕ್ಡೌನ್ ಸಮಯದಲ್ಲಿ ನಡೆದುಕೊಂಡು ಬಂದಂತೆ ನಿತ್ಯವೂ ಫೇಸ್ಬುಕ್ನಲ್ಲಿ ಮಹಾಮಂಗಳಾರತಿ ದರ್ಶನ ವ್ಯವಸ್ಥೆ ಮುಂದುವರಿಯಲಿದೆ. ಸೇವೆ ಮಾಡಿಸುವವರು ಕ್ಷೇತ್ರದ ವೆಬ್ಸೈಟ್ ಅಥವಾ ದೇವಸ್ಥಾನದ ಕಚೇರಿ ಮೊಬೈಲ್ ನಂ. 94482 82410, 99000 76410 ಸಂಪರ್ಕಿಸಬಹುದು ಎಂದು ದೇವಸ್ಥಾನ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿ ಜೂ.8 ರಿಂದ ದೇವರ ದರ್ಶನ, ಪೂಜೆ ಹಾಗೂ ವಾಸ್ತವ್ಯಕ್ಕೆ ಅವಕಾಶ ನೀಡಿದೆ. ಆದರೆ, ಭಕ್ತರು ಹಾಗೂ ಸಿಬ್ಬಂದಿ ಸುರಕ್ಷತೆ ಮುಖ್ಯ. ಹಾಗಾಗಿ ಕರೊನಾ ಹರಡುವಿಕೆ ತಡೆಗಟ್ಟಲು ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲು ಇನ್ನೂ ಹೆಚ್ಚಿನ ಸಮಯ ಬೇಕು. ಈ ನಿಟ್ಟಿನಲ್ಲಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದೇವರ ದರ್ಶನ, ಪೂಜೆ, ವಾಸ್ತವ್ಯದ ಅವಕಾಶವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಡಾ. ಭೀಮೇಶ್ವರ ಜೋಷಿ ತಿಳಿಸಿದ್ದಾರೆ.