ಕಳ್ಳತನ ಇಲ್ಲವೇ ಭಿಕ್ಷೆ ಬೇಡಿಯಾದ್ರೂ ಲ್ಯಾಪ್​ಟಾಪ್ ​ತಗೋಬೇಕಂತೆ.. ವಿದ್ಯಾರ್ಥಿಗಳಿಗೆ ಪ್ರೊಫೆಸರ್​ ವಾರ್ನಿಂಗ್!

laptop mvj college
Published on

ಬೆಂಗಳೂರು: ಕಳ್ಳತನವಾದ್ರೂ ಮಾಡಿ, ಭಿಕ್ಷೆಯಾದ್ರೂ ಬೇಡಿ.. ಒಟ್ನಲ್ಲಿ ಲ್ಯಾಪ್​ಟಾಪ್​ ಕಡ್ಡಾಯವಾಗಿ ಇರಲೇ ಬೇಕು... ಊಟ- ತಿಂಡಿಗೆ ಖರ್ಚು ಮಾಡೋಕೆ ಆಗುತ್ತೆ.. ಲ್ಯಾಪ್​ಟಾಪ್​ ತಗೋಳೋಕೆ ಏನ್​ ಪ್ರಾಬ್ಲಂ? ನಿಮ್ಮ ಲೈಫ್​ ಸ್ಪೈಲ್​ ಆಗಬಾರದು ಅಂದ್ರೆ ನಾವೇಳ್ದಾಗೆ ಮಾಡಿ...

ಇದು ಬೆಂಗಳೂರಿನ ಎಂವಿಜೆ ಕಾಲೇಜಿನ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಎಚ್​ಒಡಿ ಪ್ರೊ. ಮುರಳೀಧರ್​ ಕೊಟ್ಟ ಖಡಕ್​ ವಾರ್ನಿಂಗ್​. ಮುಂದಿನ ವಾರದಲ್ಲಿ ಇಂಟರ್ನಲ್​ ಎಕ್ಸಾಂ ಇದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲು ವಿಡಿಯೋ ಕಾಲ್​ ಮಾಡಿ ಸಂವಹನ ನಡೆಸಿದ ಪ್ರೊ.ಮುರಳೀಧರ್​, ಮಾತಿನ ಆರಂಭದಲ್ಲೇ 'ಇವಾಗ ಇನ್ನೊಂದು ಮಳೆ ಬರುತ್ತೆ ನೋಡಿ' ಎಂದು ಶಾಕ್​ ನೀಡಿದರು.

ಗ್ರಾಮೀಣ ಭಾಗದ ಮಹಿಳಾ ವಿದ್ಯಾರ್ಥಿಗಳಾದಿಯಾಗಿ 'ಸರ್​... ಏಕಾಏಕಿ ಲ್ಯಾಪ್​ಟಾಪ್​ ಅಂದ್ರೆ ಹೇಗೆ? ನಮ್ಮ­ತ್ರ ಹಣ ಇಲ್ಲ...' ಎಂದು ಗೋಗರೆದರೂ ಕ್ಯಾರೆ ಎನ್ನಲಿಲ್ಲ. ಇನ್ನೂ ಕೆಲ ವಿದ್ಯಾರ್ಥಿಗಳು, 'ಈ ಬಗ್ಗೆ ಲೆಟರ್ ಕೊಡಿ. ನಮ್ಮ ತಹಸೀಲ್ದಾರ್ ಬಳಿ ಮಾತಾಡುತ್ತೇವೆ. ಇಲ್ಲವೇ ನಾವು ಕಟ್ಟಿದ ಶುಲ್ಕದ ಹಣ ವಾಪಸ್​ ಕೊಟ್ಟುಬಿಡಿ' ಎಂದರು. 'ಇದ್ಯಾವುದರ ಬಗ್ಗೆಯೂ ಕೇಳಬೇಡಿ... ಕಡ್ಡಾಯವಾಗಿ ಎಲ್ಲರೂ ಲ್ಯಾಪ್​ಟಾಪ್​ ಹೊಂದಿಸಿಕೊಳ್ಳಬೇಕು ಅಷ್ಟೆ. ಇದು ಫೈನಲ್'​ ಎಂದು ಎಚ್ಚರಿಸಿದರು.

ಮುಂದಿನ ವಾರದಲ್ಲಿ ಇಂಟರ್ನಲ್​ ಎಕ್ಸಾಂ ಶುರುವಾದ್ರೆ ಲ್ಯಾಪ್​ಟಾಪ್​ ಹೊಂದಿಸೋದು ಹೇಗೆ? ಲ್ಯಾಪ್​ಟಾಪ್​ ಇಲ್ಲಾಂದ್ರೆ ಎಕ್ಸಾಂ ಮಿಸ್​ ಆಗುತ್ತೆ.. ಎಂಬ ಟೆನ್ಶನ್​ ವಿದ್ಯಾರ್ಥಿಗಳಲ್ಲಿ ಶುರುವಾಗಿದೆ. ಪ್ರೊಫೆಸರ್ ಬಳಿ ವಿದ್ಯಾರ್ಥಿಗಳು, 'ನಮ್ಮ ಲೈಪ್​ ಹಾಳಾಗುತ್ತೆ ಸರ್​.. ದಯವಿಟ್ಟು ಪರ್ಯಾಯ ವ್ಯವಸ್ಥೆ ಮಾಡಿ' ಎಂದರೂ ಅವರು, 'ನಿಮ್ಮ ಜೀವನ ಹಾಳಾಗಬಾರದು ಅಂದ್ರೆ ಲ್ಯಾಪ್​ಟಾಪ್​ ತಗೋಳಿ' ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು, ಈ ಸಂಭಾಷಣೆಯ ಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ.

ಈ ವಿಡಿಯೋ ನೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net