ಅಜಿತ್​ ನಮ್ಮ ಪಕ್ಷದ ನಾಯಕರು, ಎನ್​ಸಿಪಿಯಲ್ಲಿ ಯಾವುದೇ ಒಡಕಿಲ್ಲ: ಶರದ್​ ಪವಾರ್​

Sharath ajit
Published on

ಮುಂಬೈ: ಅಜಿತ್​ ಪವಾರ್​ ನಮ್ಮ ಪಕ್ಷದ ನಾಯಕ ನಮ್ಮಲ್ಲಿ ಯಾವುದೇ ಬಿರುಕು ಉಂಟಾಗಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥ ಶರದ್​ ಪವಾರ್​ ಸ್ಪಷ್ಟಪಡಿಸಿದ್ದಾರೆ.

ಪಕ್ಷ ವಿಭಜನೆಯ ಕುರಿತು ಎದ್ದಿರುವ ಊಹಾಪೋಹಗಳಿಗೆ ಶರದ್​ ಪವಾರ್​ ತೆರೆ ಎಳೆದಿದ್ದು, ನಮ್ಮಲ್ಲಿ ಯಾವುದೇ ತರಹದ ಆಂತರಿಕ ಕಲಹ ಉಂಟಾಗಿಲ್ಲ ಎಂದು ಹೇಳಿದ್ದಾರೆ.

ಒಡಕು ಎಂದು ಕರೆಯಲಾಗುವುದಿಲ್ಲ

ಈ ಕುರಿತು ಮಹಾರಾಷ್ಟ್ರದ ಬಾರಾಮತಿಯಲ್ಲಿ ಮಾತನಾಡಿದ ಶರದ್​ ಪವಾರ್​ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷದಲ್ಲಿ ಯಾವುದೇ ರೀತಿಯ ಒಡಕು ಉಂಟಾಗಿಲ್ಲ. ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​ ನಮ್ಮ ಪಕ್ಷದ ನಾಯಕರು. ಎನ್​ಸಿಪಿಯಲ್ಲಿ ಯಾವುದೇ ತರಹದ ಸಂಘರ್ಷ ಹಾಗೂ ಒಡಕಿಲ್ಲ.

ರಾಷ್ಟ್ರ ಮಟ್ಟದಲ್ಲಿ ದೊಡ್ಡ ಗುಂಪು ಪಕ್ಷದಿಂದ ಬೇರ್ಪಟ್ಟಾಗ ವಿಭಜನೆ ಸಂಭವಿಸುತ್ತದೆ. ಆದರೆ ಎನ್​​ಸಿಪಿಯಲ್ಲಿ ಅಂತಹ ಯಾವುದೇ ಪರಿಸ್ಥಿತಿ ಇಲ್ಲ. ಕೆಲವು ನಾಯಕರು ಪಕ್ಷದ ವಿರುದ್ಧ ಅಸಮಾಧಾನ ಹೊಂದಿದ್ದು, ವಿಭಿನ್ನ ನಿಲುವು ತೆಗೆದುಕೊಂಡರೆ ಅದನ್ನು ಒಡಕು ಎಂದು ಕರೆಯಲಾಗುವುದಿಲ್ಲ. ಎನ್‌ಸಿಪಿ ವಿಭಜನೆ ಆಗಿದೆ ಎಂದು ಯಾರಾದ್ರೂ ಹೇಗೆ ಹೇಳಬಲ್ಲರು. ಅಜಿತ್ ಪವಾರ್ ಅವರು ನಮ್ಮ ಪಕ್ಷದ ನಾಯಕ ಅನ್ನೋದು ಪ್ರಶ್ನಾತೀತ ಎಂದು ಶರದ್ ಪವಾರ್ ಹೇಳಿದ್ದಾರೆ.

ಪಕ್ಷದ ವಿರುದ್ಧ ಅಜಿತ್​ ಪವಾರ್​ ಭಿನ್ನ ನಿಲುವು ತೆಗೆದುಕೊಂಡಿದ್ದು, ಅವರ ವಿರುದ್ಧ ವಿಧಾನಸಭಾಧ್ಯಕ್ಷರಿಗೆ ದೂರು ನೀಡಲಾಗಿದೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಸಂಸದೆ ಸುಪ್ರಿಯಾ ಸುಳೆ ಗುರುವಾರ ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net