More

    ಅಡ್ರೆಸ್​ ಕೇಳಿದ ಡೆಲಿವರಿ ಬಾಯ್​ ಮೇಲೆ ಮಾರಣಾಂತಿಕ ಹಲ್ಲೆ; ರಕ್ಷಣೆಗೆ ಧಾವಿಸಿದ ಪೊಲೀಸರಿಗೆ ಇರಿತ

    ನವದೆಹಲಿ: ಅಡ್ರೆಸ್​ ಕೇಳಿದ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಡೆಲಿವರ್​ ಬಾಯ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಆತನ ಬೈಕ್​ ಹಾನಿಗೊಳಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾ ಸೆಕ್ಟರ್​-23ರಲ್ಲಿ ನಡೆದಿದೆ.

    ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮಹಿಳೆಯನ್ನು ವಶಕ್ಕೆ ಪಡೆಯಲು ಮುಂದಾದ ಪೊಲೀಸ್​ ಅಧಿಕಾರಿಗಳಿಗೂ ಚಾಕುವಿನಿಂದ ಇರಿಯಲಾಗಿದೆ.

    ಪ್ರಕರಣದ ಹಿನ್ನಲೆ

    ಪ್ರತಿಷ್ಠಿತ ಆ್ಯಪ್​ ಒಂದರಲ್ಲಿ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿರುವ ಗೋಲು ಎಂಬ ಯುವಕನು ದೆಹಲಿಯ ದ್ವಾರಕ ಸೆಕ್ಟರ್​-23ರಲ್ಲಿರುವ ಡಿಡಿಎ ಅಪಾರ್ಟ್​ಮೆಂಟ್​ಗೆ ಸಾಮಾಗ್ರಿಗಳನ್ನು ಕೊಡಲು ಬಂದಿದ್ದ. ಈ ವೇಳೆ ಆತನಿಗೆ ದಾರಿ ತಿಳಿಯದ ಕಾರಣ ಆರೋಪಿ ಮಹಿಳೆ ಬಳಿ ಅಡ್ರೆಸ್​ ಕೇಳಿದ್ದಾನೆ. ಮಹಿಳೆ ಆತನಿಗೆ ಅಡ್ರೆಸ್​ ಹೇಳದೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದು, ಏಕಾಏಕಿ ಆತನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾಳೆ.

    ಇದನ್ನೂ ಓದಿ: ‘ದಿ ಕಾಶ್ಮೀರ ಫೈಲ್ಸ್​’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ

    ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕನ ಚೀರಾಟ ಕೇಳಿದ ನೆರೆಹೊರೆಯವರು ಆತನ ರಕ್ಷಣೆಗೆ ಧಾವಿಸಿದ್ದು, ಕೂಡಲೇ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಆದರೆ, ಯಾವುದಕ್ಕೂ ಜಗ್ಗದ ಮಹಿಳೆ ಅಧಿಕಾರಿಗಳಿಗೆ ಚಾಕುವಿನಿಂದ ಚುಚ್ಚಿ ಅಲ್ಲಿದ್ದ ಕಾರುಗಳನ್ನು ಜಖಂಗೊಳಿಸಿ ಪರಾರಿಯಾಗಲು ಯತ್ನಿಸಿದ್ದಾರೆ.

    ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಪೊಲೀಸ್​ ಅಧಿಕಾರಿಗಳು ಮಹಿಳೆಯನ್ನು ಸೆರೆ ಹಿಡಿದಿದ್ದು, ಆಕೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಗಾಯಾಳು ಯುವಕ ಹಾಗೂ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts