VIDEO| ಟೈಮಾಗಿತ್ತೆಂದು ಕಾರನ್ನು ನೇರವಾಗಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಚಲಾಯಿಸಿದ ಬಿಜೆಪಿ ಸಚಿವ

UP Minister
Published on

ಲಖನೌ: ಕೆಲಸಕ್ಕೆ ಹೋಗುವ ವೇಳೆ ತುಂಬಾ ಲೇಟ್​ ಆಗಿದ್ದ್ರರೆ ನಾವು ನಿಯಮಗಳನ್ನು ಗಾಳಿಗೆ ತೂರಿ ಮುಂದಕ್ಕೆ ಹೋಗುತ್ತೇವೆ. ಇದೀಗ ಅದೇ ರೀತಿಯ ಘಟನೆಯೊಂದರಲ್ಲಿ ಸಚಿವರೊಬ್ಬರು ಈ ರೀತಿ ಮಾಡುವ ಮೂಲಕ ಸುದ್ದಿಯಲ್ಲಿದ್ದು ಸಾಕಷ್ಟು ಖಂಡನೆಗೆ ಗುರಿಯಾಗಿದ್ದಾರೆ.

ಉತ್ತರಪ್ರದೇಶ ಸರ್ಕಾರದಲ್ಲಿ ಪಶು ಸಂಗೋಪನಾ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಧರಮ್​ಪಾಲ್​ ಸಿಂಗ್​ ರೈಲಿಗೆ ಹೊತ್ತಾಯಿತು ಎಂಬ ಕಾರಣಕ್ಕೆ ತಮ್ಮ ಕಾರನ್ನು ನೇರ ಪ್ಲಾಟ್​ಫಾರ್ಮ್​ಗೆ ಒಳಗೆ ನುಗ್ಗಿಸಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಈ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ ಎಂದು ಹಲವರು ಆಗ್ರಹಿಸಿದ್ದಾರೆ.

ವಿಡಿಯೋ ವೈರಲ್​

ಸಚಿವ ಧರಮ್​ಪಾಲ್​ ಸಿಂಗ್​ ಕಾರ್ಯಕ್ರಮದ ನಿಮಿತ್ತ ಲಖನೌನಿಂದ ಬರೇಲಿಗೆ ರೈಲಿನಲ್ಲಿ ತೆರಳಬೇಕಿತ್ತು. ರೈಲ್ವೆ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ ಕಾರಣ ಅವರ ವಾಹನದ ಚಾಲಕ ಕಾರನ್ನು ಅಂಗವಿಕಲರಿಗೆ ಮೀಸಲಿಟ್ಟಿದ್ದ ರ‍್ಯಾಂಪ್‌ ಮೂಲಕ ಪ್ಲಾಟ್​ಫಾರ್ಮ್​ ಪ್ರವೇಶಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಅಖಿಲೇಶ್​ ಯಾದವ್​ ಸಚಿವರು ಪ್ಲಾಟ್​ಫಾರ್ಮ್​ಗೆ ಬುಲ್ಡೋಜರ್​ ಕೊಂಡೊಯ್ಯದಿದ್ದಕ್ಕೆ ಜನರು ಅವರಿಗೆ ಕೃತಜ್ಞರಾಗಿರಬೇಕು ಟೀಕಿಸಿದ್ದಾರೆ. ಘಟನೆ ಕುರಿತು ಸಚಿವ ಧರಮ್​ಪಾಲ್​ ಸಿಂಗ್​ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net