ಅನ್ವರ್ ಮಾಣಿಪ್ಪಾಡಿ ಮಾತನಾಡಿರುವ ಸಾಕ್ಷ್ಯಗಳಿವೆ; ಡಾ.ಜಿ.ಪರಮೇಶ್ವರ|There is evidence that Anwar Manippadi has spoken

ggp1
Published on

ಬೆಂಗಳೂರು: ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮಾತನಾಡಿರುವ ವಿಡಿಯೋ ಪುಟೇಜ್ ಇದೆ(There is evidence that Anwar Manippadi has spoken) . ಈಗ ಮಾತು ಬದಲಾಯಿಸುತ್ತಾರೆ ಎಂದರೆ ಹೇಗೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ(Dr G Parameswar) ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ವೈ.ವಿಜಯೇಂದ್ರ ನನಗೆ 150 ಕೋಟಿ ರೂ. ನೀಡಲು ಬಂದಿದ್ದರು ಎಂದು ಹೇಳಿದ್ದು ಆ ವೇಳೆ ದೊಡ್ಡ ಸುದ್ದಿಯಾಗಿತ್ತು. ಈಗ ಅನ್ವರ್ ಮಾಣಿಪ್ಪಾಡಿ ಮಾತು ಬದಲಾಯಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಲಂಚದ ಆಮಿಷ ಅನ್ವರ್ ಮಾಣಿಪ್ಪಾಡಿ ಹೇಳಿದ್ದಕ್ಕೆ ಮಾತ್ರ ಗೊತ್ತಾಗಿದೆ. ಈಗ ಉಲ್ಟಾ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಟೆಕ್ಕಿ ಅತುಲ್ ಸುಭಾಷ್ ಆತಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತನ ಪತ್ನಿ, ಅತ್ತೆ ಮತ್ತು ಭಾಮೈದುನನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚುವರಿ ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೋವಿಡ್ ಕಾಲಘಟ್ಟದಲ್ಲಿ ಅವ್ಯವಹಾರವಾಗಿರುವುದನ್ನು ನ್ಯಾ. ಮೈಕಲ್ ಕುನ್ಹಾ ಅವರ ಸಮಿತಿ ಪ್ರತಿಯೊಂದನ್ನು ಪರೀಕ್ಷೆ ನಡೆಸಿದೆ. ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ಎಲ್ಲವನ್ನೂ ಪ್ರತ್ಯೆಕವಾಗಿ ಅಧ್ಯಯನ ಮಾಡಿ ಹಗರಣವನ್ನು ಪತ್ತೆ ಹಚ್ಚಿದೆ. ಲೋಪಗಳ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳದೇ ಇದ್ದರೆ ಅದು ಅಧಿಕಾರಿಗಳ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎ್ಐಆರ್ ದಾಖಲಾಗಿದೆ. ಇದರಲ್ಲಿ ತಪ್ಪೆನು? ಎಂದು ಕೇಳಿದರು.

ಕೋವಿಡ್ ಸಂದರ್ಭದಲ್ಲಿ ಹಗರಣವಾಗಿರುವುದಂತೂ ನಿಜ. ಸಾವಿರಾರು ಕೋಟಿ ರೂ.ಗಳ ಲೂಟಿಯಾಗಿದೆ, ತನಿಖೆ ಮಾಡಿಸುತ್ತೆವೆ ಎಂದು ನಾವು ಭರವಸೆ ನೀಡಿದ್ದೆವು. ಅದರಂತೆ ನಡೆದುಕೊಳ್ಳುತ್ತೆವೆ. ಅಧಿಕಾರಿಗಳ ಹೆಸರು ಆರಂಭದಲ್ಲಿದೆ. ತನಿಖೆಯಲ್ಲಿ ರಾಜಕಾರಣಿಗಳು ಖರೀದಿ ವ್ಯವಹಾರಕ್ಕೆ ಸೂಚನೆ ನೀಡಿದ್ದರೆ ಅಥವಾ ನೇರವಾಗಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದರು.

ಸಂವಿಧಾನ ಬದಲಾಯಿಸುತ್ತೆವೆ ಎಂದು ಬಿಜೆಪಿಯ ಸಂಸದರು, ಮುಖಂಡರು ದೇಶಾದ್ಯಂತ ಹೇಳಿಕೆಗಳನ್ನು ನೀಡಿದ್ದಾರೆ. ಈಗ ನೆಹರೂ ಮೇಲೆ ಆಪಾದನೆ ಮಾಡಿ ಸಂವಿಧಾನಕ್ಕೆ ಅಪಪ್ರಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದರು.

ನೆಹರೂ ಅವರ ಕಾಲಘಟ್ಟದಲ್ಲಿ ಕಟ್ಟಿದ ಸಂಸ್ಥೆಗಳು, ಸ್ಥಾಪನೆ ಮಾಡಿದ ಉದ್ಯಮಗಳನ್ನು ನರೇಂದ್ರ ಮೋದಿಯವರು ಕನಸು ಮನಸಿನಲ್ಲಿಯೂ ಆರಂಭ ಮಾಡಲಾಗುವುದಿಲ್ಲ. ಆದರೆ ಆಗ ಆರಂಭಿಸಿದ ಸಂಸ್ಥೆಗಳ ಹೆಸರು ಬದಲಾವಣೆ ಮಾಡಿ ತಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅದರ ಹೊರತಾಗಿ ಮೋದಿಯವರ ಕೊಡುಗೆಗಳು ಏನಿವೆ ಎಂದು ಪ್ರಶ್ನಿಸಿದರು.

ಸಂವಿಧಾನ ಬದಲಿಸುತ್ತೆವೆ ಎಂದು ಹೇಳಿದ್ದು ಬಿಜೆಪಿಯವರೇ ಹೊರತು ಕಾಂಗ್ರೆಸ್ನವರಲ್ಲ ಎಂದು ಹೇಳಿದರು.

ಒತ್ತುವರಿಯಾಗಿರುವ ಆಸ್ತಿಗಳ ಪಹಣಿಯಲ್ಲಿ ಈವರೆಗೂ ವಕ್ಫ್ ಎಂದು ಬಂದರೆ ತಪ್ಪೇನು? ಎಲ್ಲದಕ್ಕೂ ಆರೋಪ ಮಾಡುತ್ತಾ ಕುಳಿತರೆ ಹೇಗೆ?, ಸರ್ಕಾರದ ಆಸ್ತಿ ಸರ್ಕಾರಕ್ಕೆ ಬಂದರೆ ಅದರಲ್ಲಿ ತಪ್ಪೇನು? ಆರೋಪ ಮಾಡುವಂತಹದ್ದೇನಿದೆ? ಎಂದು ಡಾ.ಪರಮೇಶ್ವರ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net