ಕತಾರ್ ನಲ್ಲಿ ಕರೊನಾ ಸೋಂಕು: ಕನ್ನಡಿಗರೊಬ್ಬರಿಂದ ಪ್ರತ್ಯಕ್ಷ ವರದಿ

coorona virus 4 mar 20
Published on

ಸುಬ್ರಹ್ಮಣ್ಯ ಹೆಬ್ಬಾಗಿಲು ಕತಾರ್

ತಾರ್​ನಲ್ಲಿ ನೌಕರ ವರ್ಗ ಹೆಚ್ಚಿರುವ ಕಡೆಗಳಲ್ಲಿ ಸೋಂಕು ಹರಡುವ ಸಾಧ್ಯತೆ, ಪ್ರಮಾಣ ತುಸು ವೇಗವಾಗಿದೆ. ಅಂತಹ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಉದ್ಯಮ ಸಂಸ್ಥೆಗಳು ಕಾರ್ಯ ನಡೆಸುತ್ತಿವೆಯಾದರೂ ಅತ್ಯಂತ ಸೀಮಿತ ಸಿಬ್ಬಂದಿಯನ್ನು ಹೊಂದಿವೆ, ಉಳಿದವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಶೇ.80 ಸರ್ಕಾರಿ ಕೆಲಸಗಳು ಮನೆಯಿಂದಲೇ ನಡೆಯುತ್ತಿವೆ. ಸುಮಾರು 25-30 ಸಾವಿರ ಕನ್ನಡಿಗರು ಇದ್ದಾರೆ. ಕಳೆದ ವಾರ ರಜೆ ಇದ್ದಾಗ ಕೆಲವು ಭಾರತೀಯರು, ಅದರಲ್ಲೂ ಕೆಲವು ಅವಿವಾಹಿತರು ಊಟ, ತಿಂಡಿಗೆ ನಿಯಮ ಮೀರಿ ಹೊರಗೆ ಓಡಾಡಿದ್ದರಿಂದ ಅವರನ್ನು ಬಂಧಿಸಿ ಸ್ವದೇಶಕ್ಕೆ ಮರಳಿಸಲಾಗಿದೆ ಎಂಬ ಸುದ್ದಿಗಳಿವೆ. ಉಳಿದಂತೆ ಭಾರತೀಯರು ಸ್ವಚ್ಛತೆ ಕಾಪಾಡುವಲ್ಲಿ ಮುಂದಿದ್ದಾರೆ.

ಸಮುದಾಯ ಚಟುವಟಿಕೆಗಳು ನೂರಕ್ಕೆ ನೂರು ಸ್ತಬ್ಧವಾಗಿವೆ. ದೇಶದಲ್ಲಿ ಇಲ್ಲಿವರೆಗೆ 480 ಸೋಂಕಿತರು ಪತ್ತೆಯಾಗಿದ್ದಾರಾದರೂ ಅದೃಷ್ಟವಶಾತ್ ಸಾವು ನೋವು ಕಂಡು ಬಂದಿಲ್ಲ. ಇದೀಗ 4-5ನೇ ವಾರಕ್ಕೆ ಪ್ರವೇಶಿಸುವಾಗ ಪರಿಸ್ಥಿತಿ ಹೇಗಿರುತ್ತದೆ ಎಂಬ ಅಂದಾಜಿಲ್ಲ. ಹಿಂದೆಲ್ಲ ಭಾರತಕ್ಕೆ ಬರುತ್ತೇವೆ ಎಂದಾಗ ಸ್ವಾಗತಿಸಲಾಗುತ್ತಿತ್ತು. ಈಗ ಅನೇಕರು, ವಿದೇಶಕ್ಕೆ ಹಣ ಮಾಡಲು ಹೋಗಿ ಈಗ ಸಿಕ್ಕಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಹೇಳುತ್ತಿರುವುದು ನೋವು ತರಿಸಿದೆ. ನಾವಿಲ್ಲಿ ಕಷ್ಟಪಟ್ಟು ದುಡಿಯಲು ಬಂದಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಕತಾರ್ ಸರ್ಕಾರದಿಂದ ಇಲ್ಲಿಯವರೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಉದ್ಯಮ, ವ್ಯಾಪಾರ ಕುಸಿದರೆ, ಅನಾರೋಗ್ಯ ಹೆಚ್ಚಾದರೆ ಹೊರಗಿನಿಂದ ಬಂದವರ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೆ ತಿಳಿದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net