ಬೈಡೆನ್-ಮೋದಿ ನಡುವೆ ಉತ್ತಮ ಬಾಂಧವ್ಯವಿದೆ

Modi and biden
Published on

ಜೋ ಬೈಡನ್ ಅಧ್ಯಕ್ಷರಾದರೆ, ಭಾರತದ ಸಂಬಂಧವು ಹಳಸುವುದಿಲ್ಲ. ಕಾರಣ, ಉಪಾಧ್ಯಕ್ಷರಾಗಿ ಅವಧಿಯಲ್ಲಿ ಅವರು ಮೋದಿ ಜತೆ ಒಡನಾಟವನ್ನು ಇಟ್ಟುಕೊಂಡಿದ್ದರು. ಮೋದಿ ಮತ್ತು ಬರಾಕ್ ಒಬಾಮ ಸ್ನೇಹವು ಮೋದಿ -ಟ್ರಂಪ್ ಸ್ನೇಹಕ್ಕಿಂತಲೂ ಗಾಢವಾಗಿತ್ತು.

ಮೋದಿಯವರು ಚೀನಾ ದೇಶದ ಪ್ರಾಬಲ್ಯವನ್ನು ಮುರಿಯಲು, ಕುತಂತ್ರಿ ಪಾಕಿಸ್ತಾನದ ಸೊಕ್ಕನ್ನು ಅಡಗಿಸಲು ಟ್ರಂಪ್ ಅವರ ಸ್ನೇಹವನ್ನು ಮಾಡಲೇಬೇಕಾಗಿ ಬಂದಿತ್ತು. ಭಾರತದ ಹಿತಾಸಕ್ತಿಗೆ ಅಮೆರಿಕದ ಬೆಂಬಲ ಬೇಕೇ ಬೇಕಿತ್ತು.

ಆದರೆ, ಇತ್ತೀಚೆಗೆ ಅಧ್ಯಕ್ಷ ಚುನಾವಣೆಯ ಚರ್ಚೆಗಳಲ್ಲಿ ಟ್ರಂಪ್, ‘ಭಾರತ ದೇಶವು ಚೀನಾ ದೇಶದಂತೆ ನಿಜವಾದ ಕರೊನಾ ಸಾವಿನ ಸಂಖ್ಯೆಗಳನ್ನು ಮುಚ್ಚಿಟ್ಟಿದೆ ಎಂದು ಹೇಳಿದ್ದು, ್ತ ಭಾರತ ವಾಯುಮಾಲಿನ್ಯದಿಂದ ತುಂಬಾ ಕೆಟ್ಟದೆ ಎಂದು ಆಪಾದಿಸಿದ್ದರು. ಇದು ಮೋದಿಗೆ ಮುಜುಗರ ಉಂಟು ಮಾಡಿತ್ತು. ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತ ಮೂಲದವರಾಗಿರುವುದರಿಂದ ಭಾರತಕ್ಕೆ ಬಹುದೊಡ್ಡ ಸಹಾಯ ಇರುತ್ತದೆ. ಏಕೆಂದರೆ, ಅಧ್ಯಕ್ಷರ ನೀತಿಯನ್ನು ರೂಪಿಸುವವರು ಉಪಾಧ್ಯಕ್ಷರೇ ಆಗಿರುತ್ತಾರೆ. ಡೆಮಾಕ್ರಟಿಕ್ ಪಕ್ಷದವರು ವಲಸಿಗರಿಗೆ ಪ್ರಾಮುಖ್ಯತೆ ಕೊಡುವುದರಿಂದ ಎಚ್-1ಬಿ ಸಮಸ್ಯೆಗಳು, ಗ್ರೀನ್ ಕಾರ್ಡ್ ಸಮಸ್ಯೆಗಳು ಪರಿಹಾರವಾಗುವ ಸಂಭವವಿದ್ದು ಭಾರತಕ್ಕೆ ಸಹಾಯ ಮಾಡುತ್ತವೆ.

| ಬೆಂಕಿ ಬಸಣ್ಣ ನ್ಯೂಯಾರ್ಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net