

ಕೊಪ್ಪಳ: ಮನೆಯಲ್ಲಿ ಗಿಣಿ, ಪಾರಿವಾಳ, ಬಾತುಕೋಳಿ... ಸಾಕುವುದನ್ನು ಕಂಡಿದ್ದೇವೆ. ಇನ್ನು ಕಾಗೆ? ಈ ಹೆಸರು ಹೇಳಿದಾಕ್ಷಣ ಹಲವರ ಮನದಲ್ಲಿ ಅಪಶಕುನದ ಭೀತಿ, ಆತಂಕ ಮೂಡುತ್ತೆ. ಇನ್ನು ಮನೆಯ ಆಚೆ ಕಾಗೆ ಕೂತರೂ ಓಡಾಡುವಾಗ ಮೈಯೆಲ್ಲ ಕಣ್ಣಾಗಿರ್ತಾರೆ. ಅಂತಹದ್ದರಲ್ಲಿ ಕಾಗೆಯನ್ನು ಯಾರು ಸಾಕುತ್ತಾರೆ ಹೇಳಿ?
ಆದರೆ, ಇಲ್ಲೊಬ್ಬ ಕಾಗೆಯನ್ನು ಮನೆಯಲ್ಲೇ ಸಾಕಿದ್ದಾನೆ. ಈತನ ಪಾಲಿಗೆ ಇದು ಶುಭಶಕುನವಂತೆ! ಕೊಪ್ಪಳದ ಕಾರಟಗಿ ತಾಲೂಕು ಬಸವಣ್ಣ ಕ್ಯಾಂಪ್ ಹೊರವಲಯದ ನಿವಾಸಿ ಕೃಷ್ಣಪ್ಪ ಅವರು ಕಾಗೆಯನ್ನು ಮನೆಯಲ್ಲಿ ಸಾಕುತ್ತಿದ್ದಾರೆ. ಅಂದಹಾಗೆ ಇದು ಎಂತಹ ಕಾಗೆ ಗೊತ್ತಾ? ಇದನ್ನೂ ಓದಿರಿ ಇಲ್ಲಿಗೆ ಬಂದ್ರೆ ಕರೊನಾ ಸೋಂಕು ಗ್ಯಾರಂಟಿ..? ಅಧಿಕಾರಿಗಳ ಎಡವಟ್ಟಿಗೆ ಬಲಿಯಾಗದಿರಿ!