More

    ಇಲ್ಲಿಗೆ ಬಂದ್ರೆ ಕರೊನಾ ಸೋಂಕು ಗ್ಯಾರಂಟಿ..? ಅಧಿಕಾರಿಗಳ ಎಡವಟ್ಟಿಗೆ ಬಲಿಯಾಗದಿರಿ!​

    ಬೆಂಗಳೂರು: ಮಾನವ ಸಂಕುಲಕ್ಕೆ ಕುತ್ತು ತಂದಿದೆ ಕರೊನಾ. ಸೋಂಕು ಹರಡುವುದನ್ನು ನಿಯಂತ್ರಿಸಲು ಕ್ವಾರಂಟೈನ್​ ಕೇಂದ್ರಗಳು ಅಸ್ತಿತ್ವದಲ್ಲಿ ಇವೆಯಾದರೂ ಈ ಕೇಂದ್ರಗಳೇ ಈಗ ಡೇಂಜರ್​ ಝೋನ್​!

    ಹೌದು, ಜೀವ ರಕ್ಷಣೆ ಆಗಬೇಕಾದ ಕೇಂದ್ರಗಳೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರಲ್ಲಿ ಪ್ರಾಣಭೀತಿ ತಂದೊಡ್ಡಿವೆ. ಇದಕ್ಕೊಂದು ತಾಜಾ ಉದಾಹರಣೆ ಜೆಪಿ ನಗರದ ಸಾರಕ್ಕಿ ಸಿಗ್ನಲ್​ಗೆ ಹೊಂದಿಕೊಂಡಂತಿರುವ ಶಾಪಿಂಗ್ ಕಾಂಪ್ಲೆಕ್ಸ್. ನಾಲ್ಕಂತಸ್ತಿನ ಕಾಂಪ್ಲೆಕ್ಸ್​ಗೆ ದಿನನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇದರ ಅರಿವಿದ್ದರೂ ಅಧಿಕಾರಿಗಳು ಮಾತ್ರ ಈ ಕಟ್ಟಡದಲ್ಲಿರುವ ‘ಕ್ಲಾಸಿಕ್ ಕಂಫರ್ಟ್’ ಹೊಟೇಲ್ ಅನ್ನು ಕ್ವಾರಂಟೈನ್​ ಕೇಂದ್ರ ಮಾಡಿ, ನೂರಾರು ಜನರನ್ನು ಕರೆತಂದು ಬಿಟ್ಟಿದ್ದಾರೆ!

    ಇದನ್ನೂ ಓದಿರಿ ‘ಮುತ್ತಿಟ್ಟು ಕರೊನಾ ಸೋಂಕು ನಿವಾರಿಸುತ್ತೇನೆ ಬನ್ನಿ’ ಎಂದು ಕರೆಯುತ್ತಿದ್ದ ಬಾಬಾ ಕೊವಿಡ್​-19ನಿಂದಲೇ ಸಾವು

    ಈ ಕಾಂಪ್ಲೆಕ್ಸ್​ನಲ್ಲಿ ನೂರಾರು ಅಂಗಡಿಗಳಿದ್ದು, ನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೂ ಸಾವಿರಾರು ಮಂದಿ ಅಗತ್ಯ ವಸ್ತು ಖರೀದಿಸಲು ಬರುತ್ತಾರೆ. ಹೋಟೆಲ್ ಮತ್ತು ಮಹಡಿ ಮೇಲಿರುವ ಅಂಗಡಿಗಳಿಗೆ ತೆರಳಲು ಇರೋದು ಒಂದೇ ಸ್ಟೇರ್ ಕೇಸ್ ಮತ್ತು ಲಿಪ್ಟ್.

    ಇಲ್ಲಿ ಕ್ವಾರಂಟೈನ್ ಆಗಿರುವವರು ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇವರನ್ನು ನೋಡಿಕೊಳ್ಳಲು ಪೊಲೀಸ್​ ಸಿಬ್ಬಂದಿಯೂ ಇಲ್ಲ. ಈ ಕಾಂಪ್ಲೆಕ್ಸ್​ ಪಕ್ಕದಲ್ಲೇ ಜೆಪಿ ನಗರ ಮೇಟ್ರೋ ಸ್ಟೇಷನ್, ಅಪಾರ್ಟ್‌ಮೆಂಟ್​ಗಳು ಕೂಡ ಇವೆ.

    ಇದನ್ನೂ ಓದಿರಿ ರಸ್ತೆಯಲ್ಲೇ ಸುಟ್ಟು ಕರಕಲಾದ ಲಾರಿ, ಚಾಲಕನ ಬುರುಡೆ ಮಾತ್ರ ಕಾಣ್ತಿದೆ..!

    ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸೋ ಉದ್ದೇಶ ಬಿಬಿಎಂಪಿ ಅಧಿಕಾರಿಗಳಿಗೆ ಇದ್ದಂತಿಲ್ಲ. ಇಷ್ಟೆಲ್ಲ ಜನಸಂದಣಿ ಇರುವ ಸ್ಥಳದಲ್ಲಿ ಕ್ವಾರಂಟೈನ್ ಮಾಡಬೇಕಿತ್ತಾ? ಬಿಬಿಎಂಪಿ ಅಧಿಕಾರಿಗಳಿಗೆ ಬುದ್ಧಿ ಇಲ್ಲವಾ? ಕ್ವಾರಂಟೈನ್​ ಆಗಿರುವ ಜನರು ಮನಸೋಇಚ್ಛೆ ಹೊಟೇಲ್​ನಿಂದ ಹೊರ ಬಂದು ಅಡ್ಡಾಡುತ್ತಿದ್ದರೂ ಸುಮ್ಮನಿರೋದು ಏಕೆ? ಎಂದು ಅಸಮಾಧಾನಗೊಂಡಿರುವ ಸ್ಥಳೀಯ ನಿವಾಸಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಹೆಲ್ತ್ ಇನ್​ಸ್ಪೆಕ್ಟರ್ ಅವರ ಗಮನಕ್ಕೆ ತಂದರೆ ಉಡಾಫೆಯಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಇದನ್ನೂ ಓದಿರಿ ಮದುವೆಗೆ ಹೋದವರನ್ನು ಮಸಣಕ್ಕೆ ಕರೆದೊಯ್ದ ಜವರಾಯ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts