

ರಾಮನಗರ: ಸಿ.ಪಿ.ಯೋಗೇಶ್ವರ್ಗೆ ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಿದೆ. ಹಾಗೇ ಅವರ ಬೆಂಬಲಿಗರಲ್ಲೂ ಅಸಮಾಧಾನವಿದೆ.
ಸಿ.ಪಿ.ಯೋಗೇಶ್ವರ್ ಮಂತ್ರಿಯಾಗಿಯೇ ಆಗುತ್ತಾರೆ ಎಂದು ನಂಬಿಕೊಂಡಿದ್ದ ಅವರ ಬೆಂಬಲಿಗರು, ಅಭಿಮಾನಿಗಳು ಚೆನ್ನಪಟ್ಟಣ, ರಾಮನಗರ, ಬಿಡದಿಗಳಲ್ಲಿ ನೂತನ ಸಚಿವರಿಗೆ ಅಭಿನಂದನೆ ಎಂದು ಬರೆದುಕೊಂಡಿರುವ ಬ್ಯಾನರ್ಗಳನ್ನು ಈ ಮೊದಲೇ ಹಾಕಿದ್ದರು.
ಸಿ.ಪಿ.ಯೋಗೇಶ್ವರ್ಗೆ ಸಚಿವ ಸ್ಥಾನ ಸಿಗದೆ ಇರುವ ಕಾರಣ ಬಿಡದಿಯ ಬಳಿಯಿರುವ ಬ್ಯಾನರ್ಗಳನ್ನು ತೆಗೆದುಹಾಕಲಾಗಿದೆ. ಆದರೆ ಚೆನ್ನಪಟ್ಟಣದಲ್ಲಿ ಇನ್ನೂ ಹಾಗೇ ರಾರಾಜಿಸುತ್ತಿವೆ.