

ಮಿನ್ನಿಯಾಪೋಲಿಸ್: ಅಮೆರಿಕದ ಮಿನ್ನಿಯಾ ಪೋಲಿಸ್ ನಗರದ ಪೊಲೀಸರ ವರ್ಣಭೇದ ನೀತಿಯ ವಿರುದ್ಧ ಆರಂಭವಾಗಿರುವ ಹೋರಾಟ ದೇಶದ ವಿವಿಧ ಭಾಗಗಳಿಗೂ ಹಬ್ಬಿದೆ. ಮಿನ್ನಿಯಾಪೋಲಿಸ್ನಲ್ಲಿ ಹೋರಾಟದ ಕಿಚ್ಚು ಹೆಚ್ಚಿದ್ದು, ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ.
ಡೆಟ್ರಾಯ್್ಟಲ್ಲಿ ಪ್ರತಿಭಟನಾ ಕಾರರು ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ. ಅಂಟ್ಲಾಂಟಾದಲ್ಲಿ ಪೊಲೀಸ್ ಕಾರಿಗೆ ಬೆಂಕಿ ಹಚ್ಚಲಾಗಿದೆ. ನ್ಯೂಯಾರ್ಕ್ನಲ್ಲಿ ಪೊಲೀಸರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಶುಕ್ರವಾರ ನಗರದ ವೆಲ್ಸ್ ಫಾಗೋ ಬ್ಯಾಂಕ್, ಜಪಾನ್ ರೆಸ್ಟೋರೆಂಟ್ಗಳು ಹಾಗೂ ಅನೇಕ ಕಚೇರಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಆಫ್ರಿಕ-ಅಮೆರಿಕನ್ ಆಗಿರುವ ಜಾರ್ಜ್ ಫ್ಲಾಯ್್ಡನ್ನು ಅಂಗಡಿಯಲ್ಲಿ ನಕಲಿ ಬಿಲ್ ನೊಂದಿಗೆ ಖರೀದಿ ಮಾಡಿದ್ದಾನೆ ಎನ್ನುವ ಆರೋಪ ದೊಂದಿಗೆ ಪೊಲೀಸರು ಬಂಧಿಸಲು ಬಂದಿದ್ದರು. ಆ ಸಮಯದಲ್ಲಿ ಚೌವಿನ್ ಹೆಸರಿನ ಪೊಲೀಸ್ ಅಧಿಕಾರಿ ಫ್ಲಾಯ್್ಡ ಕುತ್ತಿಗೆ ಮೇಲೆ ಮೊಣಕಾಲಿಟ್ಟು ಒತ್ತಿದ್ದಾನೆ. ಒಂಬತ್ತು ನಿಮಿಷ ಕಾಲ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದರಿಂದಾಗಿ ಫ್ಲಾಯ್್ಡ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಈ ಪ್ರಕರಣವು ಅಮೆರಿಕದಲ್ಲಿ ವರ್ಣಭೇದ ವಿರುದ್ಧದ ಹೋರಾಟಕ್ಕೆ ಕಾರಣವಾಗಿದೆ.