ಜಡ್ಜ್​ಗಳ ವಸತಿಗೃಹದಲ್ಲಿ ಕಳವು

Theft
Published on

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಗಳಿಗಾಗಿ ಸ್ಯಾಂಕಿ ರಸ್ತೆಯಲ್ಲಿ ಕಾಯ್ದಿರಿಸಲಾಗಿರುವ ಸರ್ಕಾರಿ ವಸತಿ ಗೃಹದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, 45 ಸಾವಿರ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ಕಟ್ಟಡಗಳ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಸ್ಯಾಂಕಿ ರಸ್ತೆಯಲ್ಲಿರುವ ಸರ್ಕಾರಿ ವಸತಿ ಗೃಹ-29 ಅನ್ನು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯ ಮೂರ್ತಿಗಳಿಗಾಗಿ ಕಾಯ್ದಿರಿಸಲಾಗಿದೆ. ಪ್ರಸ್ತುತ ಯಾರಿಗೂ ಹಂಚಿಕೆಯಾಗದೆ ಖಾಲಿ ಉಳಿದಿದೆ. ಅತಿ ಗಣ್ಯ ವ್ಯಕ್ತಿಗಳ ನಿವಾಸ ಆಗಿರುವುದರಿಂದ ಕಾಲಕಾಲಕ್ಕೆ ಸ್ವಚ್ಚಗೊಳಿಸಿ ಕಟ್ಟಡ ಸುಸ್ಥಿತಿಯಲ್ಲಿಡಲಾಗುತ್ತಿದೆ. ಲೋಕೋಪಯೋಗಿ ಗುತ್ತಿಗೆದಾರರು ಮೂರು ದಿನಗಳಿಗೊಮ್ಮೆ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದರು.

ಜೂ.6ರ ಮಧ್ಯಾಹ್ನ 12 ಗಂಟೆಗೆ ಸ್ವಚ್ಛಗೊಳಿಸಿ ಬೀಗ ಹಾಕಲಾಗಿತ್ತು. ಜೂ. 8ರ ಬೆಳಗ್ಗೆ ಸಿಬ್ಬಂದಿ ಸ್ವಚ್ಛತೆಗೆ ತೆರಳಿದ ಸಮಯದಲ್ಲಿ ವಸತಿ ಗೃಹದ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಪ್ಲಂಬಿಂಗ್ ವಸ್ತುಗಳು, ನೀರೆತ್ತುವ 3 ಮೋಟಾರು ಪಂಪ್​ಗಳು, ಎಲ್​ಇಡಿ ಟಿವಿ ಸೇರಿ 45 ಸಾವಿರ ರೂ. ಮೌಲ್ಯದ ವಸ್ತುಗಳು ಕಳವಾಗಿವೆ. ಕಟ್ಟಡಗಳ ಉಪವಿಭಾಗದ ಇಂಜಿನಿಯರ್ ಆಸಿಫುಲ್ಲಾ ಷರೀಫ್ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net