ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ; ಲಿಂಗಯ್ಯ

17-RNR-09
filter: 0; fileterIntensity: 0.0; filterMask: 0; module: photo; hw-remosaic: false; touch: (0.4712963, 0.4883721); sceneMode: 2; cct_value: 0; AI_Scene: (200, 0); aec_lux: 272.50775; aec_lux_index: 0; albedo: ; confidence: ; motionLevel: -1; weatherinfo: null; temperature: 35;
Published on

ಹಾವೇರಿ: ಭಾಷಣ ಮತ್ತು ಬರವಣಿಗೆಯ ಭಾಷಾ ಶೈಲಿ ಮೂಲಕ ವರ್ಣರಂಜಿತ ವ್ಯಕ್ತಿತ್ವ ರೂಪಿಸಿಕೊಂಡ ಪ್ರೊ. ಶ್ರೀಶೈಲ ಹುದ್ದಾರ ಜನಪದ ಮತ್ತು ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ ಎಂದು ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಟಕ, ಜಿಲ್ಲಾ ಹಾಗೂ ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಸಾಹಿತಿ ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರೊ. ಶ್ರೀಶೈಲ ಹುದ್ದಾರ ಅವರ ಬದುಕು ಬರಹ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಖಂಡ ಧಾರವಾಡ ಜಿಲ್ಲೆಯಲ್ಲಿ ಹುದ್ದಾರ ಅವರು ತಮ್ಮ ಜನಪರ ಹೋರಾಟ ಮತ್ತು ಪ್ರಗತಿಪರ ಚಿಂತನೆ ಮೂಲಕ ಗಮನ ಸೆಳೆದವರು. ವಿಶೇಷವಾಗಿ ತೊಂಬತ್ತರ ದಶಕದಲ್ಲಿ ಸಾಕ್ಷರತಾ ಆಂದೋಲನದಲ್ಲಿ ತಮ್ಮ ಕ್ರಿಯಾಶೀಲ ಗುಣದಿಂದ ಜಿಲ್ಲೆಯಲ್ಲಿ ನೆನಪಳಿಯದ ಛಾಪು ಒತ್ತಿರುವರು. ನೇರ ನಿಷ್ಠುರ ಸ್ವಭಾವದ ಅವರಲ್ಲಿ ಕರ್ತೃತ್ವ ಶಕ್ತಿಯಿದೆ ಎಂದರು.

ಸಂಕಿರಣ ಉದ್ಘಾಟಿಸಿದ ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕೆಲಸ ಮಾಡಿದವರನ್ನು ಜನ ಗುರುತಿಸುತ್ತಾರೆ. ಅಂಥ ಕೆಲಸ ಮಾಡಿದ ಪ್ರೊ. ಶ್ರೀಶೈಲ ಹುದ್ದಾರ ಅಭಿನಂದನಾರ್ಹರು ಎಂದರು.

ಪರಿಮಳಾ ಜೈನ್​ ಪ್ರಾಸ್ತಾವಿಕವಾಗಿ ಮತ್ತು ಮಣಿಕಂಠ ಗೊದಮನಿ, ಸಂಗೀತಾ ಬೆಳವತ್ತಿ, ಶೇಖರ ಭಜಂತ್ರಿ, ಮಹಾದೇವ ಕರೇಣ್ಣವರ ಅವರು ಹುದ್ದಾರ ಅವರ ಪುಸ್ತಕಗಳ ಕುರಿತು ಮಾತನಾಡಿದರು. ಶ್ರೀಶೈಲ ಹುದ್ದಾರ ದಂಪತಿ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಸಾಹಿತಿಗಳಾದ ವಿರೂಪಾಕ್ಷಪ್ಪ ಕೋರಗಲ್ಲ, ಸತೀಶ ಕುಲಕಣಿರ್, ಡಾ. ಶಂಭು ಬಳಿಗಾರ, ಡಿಡಿಪಿಯು ಅಶೋಕ ಶಾಸ್ತ್ರಿ, ಕಸಾಪ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ರೇಣುಕಾ ಗುಡಿಮನಿ, ಸುಮಿತ್ರಾ ಹುದ್ದಾರ, ಡಾ. ವಿ.ಪಿ. ದ್ಯಾಮಣ್ಣವರ, ಎಸ್​.ಎನ್​.ತಿಪ್ಪನಗೌಡ್ರ, ಎಸ್​.ಆರ್​. ಹಿರೇಮಠ, ಈರಣ್ಣ ಬೆಳವಡಿ, ಸಿ.ಎಸ್​. ಮರಳಿಹಳ್ಳಿ, ಕೆ.ಎನ್​. ಜಾನ್ವೇಕರ, ಜಿ.ಎಂ. ಓಂಕಾರಣ್ಣವರ, ಹನುಮಂತಗೌಡ ಗೊಲ್ಲರ, ಸೋಮನಾಥ ಡಿ., ನಾಗರಾಜ ಹುಡೇದ ಮತ್ತಿತರರು ಉಪಸ್ಥಿತರಿದ್ದರು.

ಅಕ್ಕಮಹಾದೇವಿ ಹಾನಗಲ್ಲ ಹಾಗೂ ಮಹಾಂತೇಶ ಮರಿಗೂಳಪ್ಪನವರ ಜಾಗೃತಿ ಗೀತೆ ಹಾಡಿದರು. ಅರಳಿಕಟ್ಟಿ ಗೂಳಪ್ಪ ನಿರೂಪಿಸಿದರು. ನಾಗರಾಜ ನಡುವಿನಮಠ ಸ್ವಾಗತಿಸಿದರು. ಪೃಥ್ವಿರಾಜ್​ ಬೆಟಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net