

Instagram: ತಮಿಳುನಾಡಿನ ದಿಂಡುಗಲ್ ನಿವಾಸಿ 23 ವರ್ಷದ ಯುವತಿಯ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಇದನ್ನು ನೋಡಿ ಆಕೆಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ. ಫೋಟೋ ನಿಜವಾಗಿಯೂ ಅಪ್ಲೋಡ್ ಮಾಡಿದ್ದು ಯಾರು? ಏನಿದು ಪ್ರಕರಣ ತಿಳಿಯೋಣ.
ಹುಡುಗಿಯ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಅದರ ಮೂಲಕ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಇದರಿಂದ ಅಘಾತಕ್ಕೊಳಾದ ಕುಟುಂಬ ದೂರು ನೀಡಿದೆ. ದೂರಿನ ಆಧಾರದ ಮೇಲೆ, ಸೈಬರ್ ಕ್ರೈಮ್ ಪೊಲೀಸರು ತನಿಖೆ ಆರಂಭಿಸಿದರು. ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡ ವ್ಯಕ್ತಿಯನ್ನು ವಿರುಧುನಗರ ಜಿಲ್ಲೆಯ ಕರಿಯಾಪಟ್ಟಿಯ ವಿಮಲ್ (31) ಎಂದು ಗುರುತಿಸಲಾಗಿದೆ.
ವಿಮಲ್ ಖಾಸಗಿ ಕಾಲೇಜೊಂದರಲ್ಲಿ ಇಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಾನೆ. ಆತನ ಸ್ನೇಹಿತನನ್ನು ಒಂದು ಸಿಮ್ ಖರೀದಿಸಿಕೊಡುವಂತೆ ಕೇಳಿದ್ದಾನೆ. ವಿಮಲ್ ದಿಂಡಿಗಲ್‌ನ ಯುವತಿಯ ಹೆಸರಿನಲ್ಲಿ ನಕಲಿ ಖಾತೆಯನ್ನು ಪ್ರಾರಂಭಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ವಿವಿಧ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾನೆ. ಯುವತಿಗೆ ಇತ ಯಾವತ್ತು ಪರಿಚಯ ಇಲ್ಲ. ಆದರೆ, ತೇವಲಿಗೆ ಇಂತಹ ಕೆಲಸ ಮಾಡಿದ್ದಾನೆ. ಇದೀಗ ಇತನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)