ಪರಿಸರ ವಿನಾಶದಿಂದ ಜಗತ್ತು ತಲ್ಲಣ

sahyadri
ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಮುದುಕಪ್ಪ, ಡಾ. ಕೆ.ಎನ್.ಮಂಜುನಾಥ, ಶೃಂಗಶ್ರೀ, ಡಾ. ಕೃಪಾಲಿನಿ, ಡಾ. ಹಾಲಮ್ಮ, ಡಾ. ಎಂ.ಎಚ್.ಪ್ರಹ್ಲಾದಪ್ಪ ಇದ್ದರು.
Published on

ಶಿವಮೊಗ್ಗ: ಮನುಷ್ಯನ ದುರಾಸೆಯಿಂದ ನಮ್ಮ ಪರಿಸರ ವಿನಾಶದತ್ತ ಸಾಗಿದ್ದು, ಜಗತ್ತು ಪರಿಸರ ವಿನಾಶದಿಂದ ತಲ್ಲಣಗೊಂಡಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆೆ.ಎನ್.ಮಂಜುನಾಥ್ ಹೇಳಿದರು.

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ, ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಬುಧವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ನಮ್ಮ ಭೂಮಿ, ನಮ್ಮ ಭವಿಷ್ಯ. ಭೂಮಿಯ ಮರುಸ್ಥಾಪನೆ ಎಂಬುವುದು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಾಪಕಿ ಶೃಂಗಶ್ರೀ ಮಾತನಾಡಿ, ನಾವು ಒಗ್ಗೂಡಿ ಮರಗಳನ್ನು ಬೆಳೆಸೋಣ. ಪರಿಸರವನ್ನು ಕಾಪಾಡೋಣ. ಭೂಮಿಯನ್ನು ಮತ್ತೆ ಹಸಿರುಗೊಳಿಸೋಣ. ಪರಿಸರ ಎಂದರೇ ಆತ್ಮೀಯ ಸ್ನೇಹಿತನಿದ್ದಂತೆ ಎಂದು ಹೇಳಿದರು.
ಅಧ್ಯಾಪಕಿ ಡಾ.ಕೃಪಾಲಿನಿ, ಎನ್‌ಎಸ್‌ಎಸ್ ಅಧಿಕಾರಿ ಮುದುಕಪ್ಪ, ಪ್ರಾಧ್ಯಾಪಕ ಡಾ.ಎಂ.ಎಚ್.ಪ್ರಹ್ಲಾದಪ್ಪ, ಡಾ. ಹಾಲಮ್ಮ, ಡಾ. ಎಚ್.ಎಂ.ಶಂಭುಲಿಂಗಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net