ಪ್ರಿಯಕರನಿಗಾಗಿ ಪತಿ ತೊರೆದು ಇಬ್ಬರು ಮಕ್ಕಳನ್ನು ಕೊಂದ ಮಹಿಳೆ ಅರೆಸ್ಟ್​!

crime
Published on

ಮುಂಬೈ: ಮೂರು ಮತ್ತು ಐದು ವರ್ಷದ ಮಕ್ಕಳನ್ನು ಕೊಂದ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ.

ರಾಯಗಢ ಮೂಲದ ಶೀತಲ್ ತನ್ನ ಪತಿಯನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸಲು ತನ್ನಿಬ್ಬರು ಮಕ್ಕಳನ್ನು ಉಸಿರುಕಟ್ಟಿಸಿ ಕೊಂದಿದ್ದಳು.

ಮಾರ್ಚ್ 31 ರಂದು ಶೀತಲ್ ತನ್ನ ಮಕ್ಕಳನ್ನು ಮನೆಯಲ್ಲಿ ಉಸಿರುಗಟ್ಟಿಸಿ ಕೊಂದಿದ್ದಳು. ಪತಿ ಮನೆಗೆ ಬಂದಾಗ ಮಕ್ಕಳು ಮಲಗಿದ್ದರು ಎಂದು ಆಕೆ ಸುಳ್ಳು ಹೇಳಿದ್ದಳು.

ಆದರೆ, ಇಬ್ಬರೂ ಎಚ್ಚರಗೊಳ್ಳದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಡೆಗೆ ಮಕ್ಕಳು ಮೃತಪಟ್ಟಿದ್ದರು. ಆದರೆ ವ್ಯತಿರಿಕ್ತ ಹೇಳಿಕೆ ನೀಡಿದ್ದ ಆಕೆಯನ್ನು ವಿವರವಾಗಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net