More

    ಮಗು ಮಲಗಿದ್ದಾಗ ಢೋಲು ಬಾರಿಸಿದ ಮಹಿಳೆ.. ಸ್ಟಂಟ್​ಗೆ ನೆಟಿಜನ್ಸ್​ ಪ್ರತಿಕ್ರಿಯೆ ಹೀಗಿದೆ ನೋಡಿ..

    ಮುಂಬೈ: ಯುಗಾದಿ ಸಂದರ್ಭದಲ್ಲೇ ಮಹಾರಾಷ್ಟ್ರದಲ್ಲಿ ಆಚರಿಸುವ ಗುಡಿಪಾಡ್ವಾ ಹಬ್ಬದಲ್ಲಿ ಮಹಿಳೆಯೊಬ್ಬಳು ಮೆರವಣಿಗೆ ವೇಳೆ ನಿದ್ರಿಸುವ ಮಗುವನ್ನು ಢೋಲ್ ಮೇಲೆ ಹಾಕಿಕೊಂಡು ಬಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ:ಸಂದೇಶಖಾಲಿ ಹತ್ಯಾಕಾಂಡದ ತನಿಖೆ ನಡೆಸಲು ಸಿಬಿಐಗೆ ಹೈಕೋರ್ಟ್​ ಆದೇಶ

    ಮಗುವಿನ ಬಗ್ಗೆ ನಿರ್ಲಕ್ಷಿಸಿದ್ದಕ್ಕೆ ಮಹಿಳೆಯ ವಿರುದ್ಧ ವ್ಯಾಪಕ ಟೀಕೆ ಕೇಳಿ ಬರುತ್ತಿದೆ.

    ವೀಡಿಯೋದಲ್ಲಿ, ಮೆರವಣಿಗೆಯ ಸಮಯದಲ್ಲಿ ಮಹಿಳೆ ಢೋಲ್ ಹೊಡೆಯುವುದನ್ನು ನೋಡಬಹುದು. ಆಗ ಒಂದು ಸಣ್ಣ ಮಗು, (ಬಹುಷಃ ಆಕೆಯ ಮಗು), ಢೋಲು ಮೇಲೆ ವಿಶ್ರಮಿಸುತ್ತಿರುವುದನ್ನು ಕಾಣಬಹುದು. ಸುತ್ತಮುತ್ತಲಿನ ಢೋಲು​ಗಳ ದೊಡ್ಡ ಶಬ್ದದ ನಡುವೆ ಪುಟ್ಟ ಮಗು ಶಾಂತವಾಗಿ ವಿಶ್ರಾಂತಿ ಪಡೆಯುವುದನ್ನು ಕಾಣಬಹುದು.

    ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದ್ದಂತೆ ನೆಟಿಜನ್‌ಗಳು ಮಹಿಳೆಯನ್ನು ಕೆಲವರು ಶ್ಲಾಘಿಸಿದ್ದಾರೆ. ಆದರೆ ಹಲವರು ಇಂತಹ ಗದ್ದಲದ ಪರಿಸರದಲ್ಲಿ ಚಿಕ್ಕ ಮಗುವನ್ನು ಕರೆದೊಯ್ಯಬೇಕೆ ಎಂಬ ಸಾಮಾನ್ಯ ಜ್ಞಾನವಿದೆಯೇ ಎಂದು ಕೇಳುತ್ತಿದ್ದಾರೆ.

    ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೋವನ್ನು ‘X’ಎಕ್ಸ್ ಬಳಕೆದಾರ್ತಿ ತೇಜಾ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಜನರು ರೀಲ್ಸ್​ ಮಾಡಿ ಖ್ಯಾತಿಯನ್ನು ಪಡೆಯಲು ಎಂತಹ ಅಪಾಯಕಾರಿ ಸಾಹಸಗಳನ್ನು ಬೇಕಾದರೂ ಇದು ಸಾಕ್ಷಿಯಾಗಿದೆ. ಪುಟ್ಟ ಮಗುವಿನ ಕಿವಿ, ಮೆದುಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ, ಆದರೆ ಅಧಿಕ ಶಬ್ಧದ ನಡುವೆ ಪ್ರಚಾರಕ್ಕಾಗಿ ಇಂತಹ ಹುಚ್ಚು ಸಾಹಸ ಮಾಡಿರುವುದಕ್ಕೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಗುಡಿಪಾಡ್ವಾ ಸಂದರ್ಭದಲ್ಲಿ ವೀಡಿಯೋ ತೆಗೆಯಲಾಗಿದೆ. ಆದರೆ, ಮಂಗಳವಾರ ನಡೆದ ಮೆರವಣಿಗೆಯಲ್ಲಿ ಇದನ್ನು ಚಿತ್ರೀಕರಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ದೃಢೀಕೃತ ವರದಿಗಳಿಲ್ಲ. ಅಲ್ಲದೆ, ಘಟನೆ ನಡೆದ ಸ್ಥಳದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ವೀಡಿಯೊದಲ್ಲಿನ ದೃಶ್ಯಗಳು ಅಭೇದ್ಯ ಢೋಲ್ ತಾಶಾ ಪಾಠಕ್ , ಪುಣೆ ಮೂಲದ ಗುಂಪಿನ ಲೋಗೋವನ್ನು ತೋರಿಸುತ್ತದೆ. ಇದು ಮಹಾರಾಷ್ಟ್ರದಾದ್ಯಂತ, ಮುಖ್ಯವಾಗಿ ಪುಣೆಯ ಕೆಲವು ಭಾಗಗಳಲ್ಲಿ ಪ್ರದರ್ಶನ ನೀಡುತ್ತದೆ.

    ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಕಟ್ಟಿದ್ದ ಸೀರೆಗಿದೆ ಭಾವನಾತ್ಮಕ ಸಂಬಂಧ..ಇದರ ವಿಶೇಷತೆಯಾದರೂ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts