ಮನೆ ಗೋಡೆ ಕುಸಿದು ಹಾನಿ

ಮನೆ ಗೋಡೆ ಕುಸಿದು ಹಾನಿ
Published on

ಪಿರಿಯಾಪಟ್ಟಣ: ವಾರದಿಂದ ಸುರಿದ ಮಳೆಗೆ ಪಟ್ಟಣದ ಮೇದರ ಬ್ಲಾಕ್ ನಿವಾಸಿ ರಾಮಸ್ವಾಮಿ ಎಂಬುವರ ಮನೆಯ ಗೋಡೆ ಶನಿವಾರ ರಾತ್ರಿ ಕುಸಿದಿದೆ.

ಗೋಡೆ ಕುಸಿದು ಮನೆಯಿಂದ ಹೊರ ಭಾಗಕ್ಕೆ ಬಿದ್ದಿದ್ದರಿಂದ ಅನಾಹುತ ತಪ್ಪಿದೆ. ಸದ್ಯ ರಾಮಸ್ವಾಮಿ ರತ್ನಮ್ಮ ದಂಪತಿಗೆ ವಾಸಿಸಲು ಮನೆ ಇಲ್ಲದಂತಾಗಿದೆ.

ಇದುವರೆಗೆ ಯಾವುದೇ ಅಧಿಕಾರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಸಂಬಂಧಪಟ್ಟವರು ಗಮನಹರಿಸಿ ಕ್ರಮವಹಿಸಬೇಕು ಎಂದು ಪುರಸಭೆ ಸದಸ್ಯ ಮಂಜುನಾಥ್ ಸಿಂಗ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net