ನೊಂದವರ ದನಿ ದೇವರಾಜ ಅರಸು

arasu
ಶಿವಮೊಗ್ಗದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಡಿ.ದೇವರಾಜ ಅರಸು ಜಯಂತ್ಯುತ್ಸವವನ್ನು ಸಿ.ಎಸ್.ಚಂದ್ರಭೂಪಾಲ ಉದ್ಘಾಟಿಸಿದರು. ವಿ.ರಾಜು, ಗುರುದತ್ತ ಹೆಗಡೆ, ಡಾ. ಜಿ.ಪ್ರಶಾಂತ ನಾಯಕ್, ಅಶೋಕ್‌ಕುಮಾರ್, ಸುಜಾತಾ, ಕೆ.ಆರ್.ಶೋಭಾ ಮುಂತಾದವರಿದ್ದರು.
Published on

ಶಿವಮೊಗ್ಗ: ಹಿಂದುಳಿದವರ, ನೊಂದವರಿಗಾಗಿ ಶ್ರಮಿಸಿದ ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಅವರ ಹೆಸರು ಇತಿಹಾಸದಲ್ಲಿ ಎಂದಿಗೂ ಅಜರಾಮರ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು.

ಜಿಲ್ಲಾಡಳಿತದಿಂದ ಬುಧವಾರ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಹೇಗೆ ದಮನಿತರು, ಹಿಂದುಳಿದವರನ್ನು ಮುಂಚೂಣಿಗೆ ತರಲು ಅನುಭವ ಮಂಟಪದ ಮೂಲಕ ಬಸವಾದಿ ಶರಣರು ಕ್ರಾಂತಿ ನಡೆಸಿದರೋ ಅದೇ ರೀತಿ ಅರಸು ಮುಖ್ಯಮಂತ್ರಿಯಾಗಿ ನಮ್ಮ ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಅನೇಕ ಸುಧಾರಣೆಗಳನ್ನು ತಂದರು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಅರಸು ಅವರ ಮುಂದಾಲೋಚನೆಯಿಂದಾಗಿ ಹಿಂದುಳಿದ ವರ್ಗಗಳು, ಎಸ್‌ಸಿ, ಎಸ್‌ಟಿ ಹಾಗೂ ಹೆಣ್ಣುಮಕ್ಕಳಿಗೆ ರಾಜ್ಯಾದ್ಯಂತ ವಸತಿ ನಿಲಯಗಳ ಸೌಲಭ್ಯ ಕಲ್ಪಿಸಿ, ವಿದ್ಯೆ ಪಡೆಯಲು ಸಾಧ್ಯವಾಯಿತು. ಭೂ ಸುಧಾರಣೆ ಕಾಯ್ದೆಯಿಂದ ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಭೂಮಿ ಲಭಿಸಿದೆ ಎಂದು ತಿಳಿಸಿದರು.

ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ.ಆರ್.ಶೋಭಾ, ಎಎಸ್‌ಪಿ ರಮೇಶ್‌ಕುಮಾರ್, ಜಿಪಂ ಉಪಕಾರ್ಯದರ್ಶಿ ಸುಜಾತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net