

ಭೋಪಾಲ್: ವಾಹನಗಳ ಹಾರ್ನ್ ಶಬ್ಧ ಎಷ್ಟೋ ಬಾರಿ ಕಿರಿಕಿರಿ ಎನಿಸುತ್ತದೆ. ಅಬ್ಬಾ! ಎಂದು ಕಿವಿ ಮುಚ್ಚಿಕೊಳ್ಳುವಂತೆ ಮಾಡಿಸುತ್ತವೆ. ಆದರೆ ಇಲ್ಲೊಬ್ಬ ಲಾರಿ ಡ್ರೈವರ್ ಮಾಡುವ ಹಾರ್ನ್ ಸದ್ದಿಗೆ ಫಿದಾ ಆಗಿರುವ ಜನರು ಲಾರಿಯನ್ನು ಅಡ್ಡ ಹಾಕಿ ಮತ್ತೊಮ್ಮೆ ಹಾರ್ನ್ ಮಾಡು ಎಂದು ಕೇಳಿಕೊಂಡಿದ್ದಾರೆ.
ಲಾರಿಯನ್ನು ಅಡ್ಡಗಟ್ಟಿರುವ ಜನರು "ಇನ್ನೊಮ್ಮೆ, ಇನ್ನೊಮ್ಮೆ", "ಒನ್ಸ್ ಮೋರ್" ಎಂದು ಕೂಗುತ್ತಾರೆ. ಲಾರಿ ಡ್ರೈವರ್ ಮತ್ತೊಮ್ಮೆ ತನ್ನ ಗಾಡಿಯ ಹಾರ್ನ್ನಲ್ಲಿ ಬಾಲಿವುಡ್ನ ಹಾಡೊಂದನ್ನು ನುಡಿಸಿದ ನಂತರವೇ ಜನರು ಆತನಿಗೆ ಹೋಗಲು ಬಿಡುತ್ತಾರೆ. ಇಂತದ್ದೊಂದು ವಿಡಿಯೋ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ಪ್ರತಿಭಾವಂತ ಲಾರಿ ಡ್ರೈವರ್ ಎಲ್ಲಿಯವನು, ಯಾವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನುವುದರ ಕುರಿತಾಗಿ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಕೇವಲ ಸ್ಥಳೀಯ ಜನರಿಂದ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದ ಜನರಿಂದಲೂ ಸಹ ಈ ಲಾರಿ ಡ್ರೈವರ್ ಭಾರೀ ಪ್ರಮಾಣದ ಮೆಚ್ಚುಗೆ ಪಡೆದಿದ್ದು ಮಾತ್ರ ವಿಶೇಷ. (ಏಜೆನ್ಸೀಸ್)