ಇಂದು ಇಬ್ಬರು ಉಗ್ರರು ಉಡೀಸ್​

Terrorists
Published on

ಶ್ರೀನಗರ: ಶೋಪಿಯಾನಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ದಾಳಿಗೆ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ.

ಶೋಪಿಯಾನಾದ ಕುಟ್ಪೊರಾ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ರಕ್ಷಣಾ ಪಡೆಗಳು ಕಣ್ಗಾವಲು ಇಟ್ಟು, ಕಾರ್ಯಾಚರಣೆ ನಡೆಸಿದ್ದರು. ಏಕಾಏಕಿ ಭದ್ರತಾ ಪಡೆಗಳ ಮೇಲೆ ಉಗ್ರರು ಫೈರಿಂಗ್​ ಮಾಡಲು ಶುರು ಮಾಡಿದರು. ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆಯ ಸಿಬ್ಬಂದಿ ಕೂಡ ಫೈರಿಂಗ್​ ಮಾಡಿದ ಪರಿಣಾಮ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.

ಹತ್ಯೆಗೀಡಾದ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವರ ಪರಿಚಯ ಇನ್ನೂ ಸಿಕ್ಕಿಲ್ಲ. ಯಾವ ಉಗ್ರಸಂಘಟನೆಗೆ ಸೇರಿದವರು ಎಂಬ ಬಗ್ಗೆಯೂ ಮಾಹಿತಿ ಇಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net