

Rural India : ಭಾರತದ ಬೆಳವಣಿಗೆಯ ಹಾದಿಯು ಗ್ರಾಮೀಣ ಭಾರತದ ಮೂಲಕವೇ ಸಾಗುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶದ ಒಟ್ಟಾರೆ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಜನರಿಗೆ ನೆಲೆಯಾಗಿರುವ ಗ್ರಾಮೀಣ ಭಾರತವು ರಾಷ್ಟ್ರದ ಒಟ್ಟು ದೇಶೀಯ ಉತ್ಪನ್ನ ( GDP ) ಕ್ಕೆ ಶೇ. 46% ಕೊಡುಗೆ ನೀಡುತ್ತಿದೆ. ಈ ಮೂಲಕ ಭಾರತದ ಅಭಿವೃದ್ದಿಯ ಹಾದಿಯಲ್ಲಿ ಗ್ರಾಮೀಣ ಭಾರತ ಪ್ರಮುಖ ಚಾಲಕನಾಗಿ ಮುನ್ನುಗುತ್ತಿದೆ.
| ಶ್ರೀನಿವಾಸ್ ರಾವ್ ಗಣೇಶ್ರಾವ್ ನಾಡಿಗೇರ್, ಎಎಂಎಫ್ಐ ನೋಂದಾಯಿತ ಮ್ಯೂಚವಲ್ ಫಂಡ್ ವಿತರಕರು
ಗ್ರಾಮೀಣ ಜನರ ಜೀವನ ಗುಣಮಟ್ಟ ಸುಧಾರಿಸಿ, ಅವರ ಆದಾಯ ಹೆಚ್ಚಾದಂತೆ ತಲಾ ಆದಾಯದ ವಿಸ್ತರಣೆಗೂ ಅಪಾರ ಸಾಮರ್ಥ್ಯವಿದೆ ಎಂಬುದನ್ನು ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಈ ಆದಾಯದ ಹೆಚ್ಚಳವೂ ಉತ್ಪನ್ನಗಳ ಬೇಡಿಕೆಯನ್ನು ಏರಿಸಿದೆ. ಅಲ್ಲದೆ, ಮಾರುಕಟ್ಟೆಗಳಿಗೆ ಗ್ರಾಮೀಣ ಜನರ ಪ್ರವೇಶವನ್ನು ಸಹ ಉತ್ತೇಜಿಸುತ್ತದೆ ಮತ್ತು ಅಂತಿಮವಾಗಿ ಕಾರ್ಪೊರೇಟ್ ಗಳಿಕೆಯ ಬೆಳವಣಿಗೆಗೆ ಬೂಸ್ಟ್ ನೀಡುತ್ತದೆ.
ಇನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ಜಲ ಜೀವನ್ ಮಿಷನ್‌ನಂತಹ ಯೋಜನೆಗಳನ್ನು ಪರಿಚಯಿಸುವ ಮೂಲಕ ಸರ್ಕಾರವು ಗ್ರಾಮೀಣ ಭಾಗದ ಪರಿವರ್ತನೆಗೆ ವೇಗ ನೀಡಿದೆ. ಈ ಯೋಜನೆಗಳು ಕೃಷಿಯನ್ನು ಅವಲಂಬಿಸಿರುವ ಗ್ರಾಮೀಣ ಭಾಗದ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಇಂದು ಗ್ರಾಮೀಣ ಭಾರತವು ಕೇವಲ ಕೃಷಿ ಆಧಾರಿತ ಆರ್ಥಕತೆಯಾಗಿ ಉಳಿದಿಲ್ಲ. ಬದಲಾಗಿ ಉತ್ಪಾದನೆ, ನಿರ್ಮಾಣ ಮತ್ತು ವ್ಯಾಪಾರ ಚಟುವಟಿಕೆಗಳಂತಹ ಕ್ಷೇತ್ರಗಳು ಕೂಡ ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ಭಾರತವೂ ಸಹ ಚೀನಾಕ್ಕೆ ಸಮಾನವಾಗಿ ಜಿಡಿಪಿಗೆ ಉತ್ಪಾದನಾ ವಲಯದ ಕೊಡುಗೆಯನ್ನು ಪ್ರಸ್ತುತ ಶೇ. 17% ರಿಂದ ಶೇ. 30 ರಿಂದ 32% ಕ್ಕೆ ಹೆಚ್ಚಿಸುವ ಯೋಜನೆಗಳೊಂದಿಗೆ ಅಭಿವೃದ್ಧಿ ಹಾದಿಯಲ್ಲಿ ಸಾಗಲು ಆಶಿಸುತ್ತದೆ.
ಭಾರತದಲ್ಲಿ ಇಂದು ಶೇ. 41.5 ರಷ್ಟು ಕಾರ್ಮಿಕಶಕ್ತಿ ಇನ್ನೂ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಆದರೆ, ಈ ವಲಯವು ಜಿಡಿಪಿಗೆ ಕೇವಲ ಶೇ. 16 ರಷ್ಟು ಮಾತ್ರ ಕೊಡುಗೆ ನೀಡುತ್ತದೆ. ಸರ್ಕಾರವು ಉತ್ಪಾದನಾ ವಲಯದ ಮೇಲೆ ಒತ್ತು ನೀಡುತ್ತಿರುವುದು ಗ್ರಾಮೀಣ ಜಿಡಿಪಿ ಹೆಚ್ಚಳದ ಮುನ್ಸೂಚನೆಯಾಗಿದೆ. ಇದಕ್ಕೆ ಮೇಕ್ ಇನ್ ಇಂಡಿಯಾ, ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ ಯೋಜನೆಗಳು ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯಂತಹ ಕಾರ್ಯಕ್ರಮಗಳು ಬೆಂಬಲವನ್ನು ನೀಡುತ್ತಿವೆ. ಈ ಪ್ರಯತ್ನಗಳು ಈಗಾಗಲೇ ಫಲ ನೀಡಿದ್ದು, ಹೊಸ ಉತ್ಪಾದನಾ ಯೋಜನೆಗಳು 2020ರ ಹಣಕಾಸು ವರ್ಷದಲ್ಲಿ 3.8 ಟ್ರಿಲಿಯನ್ ಡಾಲರ್ನಿಂದ 2023ರ ಹಣಕಾಸು ವರ್ಷದಲ್ಲಿ 13.2 ಟ್ರಿಲಿಯನ್ ಡಾಲರ್ಗೆ ಏರಿಕೆ ಕಂಡಿದೆ.
ಅಂದಹಾಗೆ ಭಾರತದ ಗ್ರಾಮೀಣ ಆರ್ಥಿಕತೆಯು ಸದ್ಯ ಬದಲಾವಣೆಯ ತುತ್ತ ತುದಿಯಲ್ಲಿದೆ. ಗ್ರಾಮೀಣ ಜನರ ತಲಾ ಆದಾಯವು 2,000 ಡಾಲರ್ ಗಡಿಯನ್ನು ದಾಟುವುದರೊಂದಿಗೆ, ಜನರ ಬಳಕೆಯ ಶಕ್ತಿಯು ಕೂಡ ಏರಿಕೆ ಕಂಡಿರುವುದು ಪ್ರಮುಖ ಮೈಲಿಗಲ್ಲಾಗಿದೆ. ಹೀಗಾಗಿ ಗಮನಾರ್ಹ ಆರ್ಥಿಕ ಬದಲಾವಣೆಗೆ ಗ್ರಾಮೀಣ ಭಾರತದಲ್ಲಿ ವೇದಿಕೆ ಸಜ್ಜಾಗಿದೆ. ಭಾರತದ ನಗರ ಪ್ರದೇಶವು 2012ರ ಹಣಕಾಸು ವರ್ಷದಲ್ಲೇ ಈ ಮೈಲಿಗಲ್ಲನ್ನು ಸಾಧಿಸಿತ್ತು. ಈ ಒಂದು ಬದಲಾವಣೆಯು ಕಂಪನಿಗಳಿಗೆ ಆದಾಯದ ಬೆಳವಣಿಗೆ ಮತ್ತು ವಿಸ್ತರಣೆಗೆ ಕಾರಣವಾಯಿತು. ಇದೇ ಫಲಿತಾಂಶ ಗ್ರಾಮೀಣ ಭಾರತದಲ್ಲಿ ಕಂಡುಬರಲಿದೆ.
ಗ್ರಾಮೀಣ ಭಾರತದ ಬೆಳವಣಿಗೆಯನ್ನೇ ಬಂಡವಾಳ ಮಾಡಿಕೊಳ್ಳಲು ಬಯಸುವ ಹೂಡಿಕೆದಾರರು ಐಸಿಐಸಿಐ ಪ್ರುಡೆನ್ಶಿಯಲ್ ರೂರಲ್ ಆಪರ್ಚುನಿಟೀಸ್ ಫಂಡ್ ಅನ್ನು ಪರಿಗಣಿಸಬಹುದು. ಈ ಪ್ಲಾನ್ ಗ್ರಾಮೀಣ ಭಾರತ ಮತ್ತು ಅದರ ಸಂಬಂಧಿತ ಥೀಮ್‌ನ ಸುತ್ತ ಕೇಂದ್ರೀಕೃತವಾಗಿದೆ. ಈ ನ್ಯೂ ಫಂಡ್ ಆಫರ್ (ಎನ್ಎಫ್ಒ) 2025ರ ಜನವರಿ 9 ರಿಂದ 2025ರ ಜನವರಿ 23 ರವರೆಗೆ ಲಭ್ಯವಿರುತ್ತದೆ. ಈ ಮುಕ್ತ ಇಕ್ವಿಟಿ ಯೋಜನೆಯು ಪ್ರಾಥಮಿಕವಾಗಿ ಗ್ರಾಮೀಣ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವ ಮತ್ತು ಅದರಿಂದ ಲಾಭ ಪಡೆಯುವ ವಲಯಗಳು ಮತ್ತು ಕಂಪನಿಗಳ ಮೇಲೆ ಕೇಂದ್ರೀಕರಿಸುತ್ತದೆ.