

ಬೆಂಗಳೂರು ಸಿದ್ದರಾಮಯ್ಯ ಅವರಿಗೆ ಎನ್‌ಇಪಿ ಎಂದರೆ ಏನು ಅಂತಾ ಗೊತ್ತಿಲ್ಲ. ಪಠ್ಯಪುಸ್ತಕವನ್ನೇ ಎನ್‌ಇಪಿ ಅಂದುಕೊಂಡಿದ್ದಾರೆ. ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎನ್‌ಇಪಿಯಲ್ಲಿ ಯಾವುದೇ ಲೋಪಗಳಿಲ್ಲ. ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ನಿಮಗೆ (ಸಿದ್ದರಾಮಯ್ಯ) ಅರ್ಥವಾಗಿಲ್ಲವೆಂದರೆ, ಅರ್ಥವಾಗಿರುವ ತಜ್ಞರನ್ನೇ ಚರ್ಚೆಗೆ ಕರೆದುಕೊಂಡು ಬನ್ನಿ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಪಂಥಾಹ್ವಾನ ನೀಡಿದ್ದಾರೆ.
ಪೀಪಲ್ಸ್ ಫೋರಂ ಆಫ್ ಕರ್ನಾಟಕ ಎಜುಕೇಷನ್ ಸಂಘಟನೆಯು ಮಂಗಳವಾರ ಅರಮನೆ ರಸ್ತೆಯಲ್ಲಿರುವ ಸ್ವೌಟ್ಸ್ ಆೃಂಡ್ ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಶಿಕ್ಷಣ ತಜ್ಞರ ಸಭೆ’ಯಲ್ಲಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯದಲ್ಲಿ 3 ವರ್ಷ ಅನುಷ್ಠಾನವಾಗಿರುವ ನೀತಿಯನ್ನು ರದ್ದುಗೊಳಿಸುವುದು ಮೂರ್ಖತನದ ಪರಮಾವಧಿ. ಇಡೀ ದೇಶಕ್ಕೇ ಬೇಕಿರುವ ಯೋಜನೆ ರದ್ದು ಊರ್ಜಿತವಾಗುವುದಿಲ್ಲ ಎಂದು ಹೇಳಿದರು.
ಪ್ರಸ್ತುತ ಸಮಾಜಕ್ಕೆ ಬೇಕಿರುವ ಕೌಶಲ, ಸಮಗ್ರತೆ, ತಂತ್ರಜ್ಞಾನ, ಸಂಸ್ಕೃತಿಯನ್ನು ಒಳಗೊಂಡ ನೀತಿಯನ್ನು ಜಾರಿಗೊಳಿಸಲಾಗಿದೆ. ಇಂತಹ ನೀತಿಯನ್ನು ರದ್ದುಗೊಳಿಸಿ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಬೇಡಿದ ಎಂದು ಆಗ್ರಹಿಸಿದರು.