

ಬೆಂಗಳೂರು: ನಿಷೇಧಿತ ಉಗ್ರ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್‌ಗೆ(ಟಿಟಿಪಿ) ನಿಧಿ ಸಂಗ್ರಹ ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಉತ್ತರ ಪ್ರದೇಶದ ಅಲಿಗಢ್ ಜಿಲ್ಲೆ ನಿವಾಸಿ ಮೊಹಮ್ಮದ್ ಆರೀಫ್ (42) ಮತ್ತು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನಿವಾಸಿ ಹರ್ಮಝ್ ವರ್ಸಿದ್ ಶೇಖ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಈ ಇಬ್ಬರು ಹಿಂಸಾತ್ಮಕ ಕೃತ್ಯ ನಡೆಸಲು, ದೇಶದ ಮುಸ್ಲಿಂ ಯುವಕರಿಗೆ ಮೂಲಭೂತವಾದಿಗಳನ್ನಾಗಿ ಮಾಡಲು ಮತ್ತು ನಿಷೇಧಿತ ಉಗ್ರ ಸಂಘಟನೆಗೆ ನೇಮಿಸಲು ಪ್ರಯತ್ನಿಸಿದ್ದರು.
ದೆಹಲಿಯಲ್ಲಿ ಶಂಕಿತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ ಅಡಿ ಆರೋಪದಡಿ ಎ್ಐಆರ್ ದಾಖಲಾಗಿತ್ತು. ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಫ್ರೆಂಚ್ ಭಾಷಾಂತರನಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಆರ್ೀ ಮತ್ತು ಶೇಖ್, ಸಾಮಾಜಿಕ ಜಾಲತಾಣಗಳಲ್ಲಿ ಗೂಢಲಿಪಿ ಮೂಲಕ ಸಂವಹನ ನಡೆಸುತ್ತಿದ್ದರು. ಸಿರಿಯಾ ಮೂಲದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ಆನ್‌ಲೈನ್ ನಿರ್ವಾಹಕನೊಂದಿಗೆ (ಹ್ಯಾಂಡ್ಲರ್) ಸೇರಿಕೊಂಡು ಸಂಚು ರೂಪಿಸುತ್ತಿದ್ದರು. ಭಾರತದಲ್ಲಿ ತಮ್ಮಬಲೆಗೆ ಸುಲಭವಾಗಿ ಬೀಳುವ ಮುಸ್ಲಿಂ ಯುವಕರನ್ನು ಶಂಕಿತರು ಗುರುತಿಸುತ್ತಿದ್ದರು.
ಬಳಿಕ ಮೂಲಭೂತವಾದ ಬೋಧನೆ ಮಾಡಿ ಟಿಟಿಪಿ ಸಿದ್ಧಾಂತದ ಬಗ್ಗೆ ಪ್ರಚಾರ ಮಾಡಿ ನೇಮಿಸಿಕೊಳ್ಳಲು ಯತ್ನಿಸುತ್ತಿದ್ದರು. ಅಷ್ಟೇ ಅಲ್ಲದೆ, ಜಿಹಾದ್‌ನಲ್ಲಿ ತೊಡಗಲು ಮತ್ತು ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಅಮಾಯಕ ಯುವಕರಿಗೆ ಪ್ರಚೋದಿಸುತ್ತಿದ್ದರು ಎಂದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಐಎ ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಮೊಹಮ್ಮದ್ ಆರೀಫ್, ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಟಿಟಿಪಿಗೆ ಸೇರಲು ಹೊರಟಿದ್ದ. ಅದಕ್ಕಾಗಿ ಇರಾನ್ ಮತ್ತು ಅಫ್ಘಾನಿಸ್ತಾನ ಗಡಿ ಮೂಲಕ ಅಕ್ರಮವಾಗಿ ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದ. ಇದಕ್ಕಾಗಿ ಆರೀಫ್ ತನ್ನ ಇಡೀ ಕುಟುಂಬಕ್ಕೆ ಇರಾನ್ ವೀಸಾ ಪಡೆಯಲು ಅರ್ಜಿ ಸಲ್ಲಿಸಿದ್ದ. ಜತೆಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದ. ಆನಂತರ ಭಾರತಕ್ಕೆ ಮರಳಿದ ರೀತಿ ನಂಬಿಸಲು ಮತ್ತೆ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದ. ಈ ಎಲ್ಲವನ್ನು ಡಾರ್ಕ್‌ನೆಟ್‌ವನಲ್ಲಿ ಸಂಪರ್ಕ ಮಾಡುತ್ತಿದ್ದ ಹ್ಯಾಂಡ್ಲರ್ ನಿರ್ದೇಶನದಂತೆ, ಇರಾನ್ ಮಶ್ಹಾದ್‌ನಗರದಲ್ಲಿ ಬೊಶ್ರಾ ಹೋಟೆಲ್ನಲ್ಲಿ ರೂಮ್‌ಗಳನ್ನು ಬುಕ್ ಮಾಡಿದ್ದ ಮಾಹಿತಿ ಬಯಲಾಗಿದೆ.
ಮತ್ತೊಬ್ಬ ಶಂಕತ ಹರ್ಮಝ್ ಶೇಖ್, ಟಿಟಿಪಿ ಚಟುವಟಿಕೆಗಳನ್ನು ಮುಂದುವರಿಸಲು ಪಾಕಿಸ್ತಾನಕ್ಕೆ ಹಣ ರವಾನೆ ಮಾಡುತ್ತಿದ್ದ. ಹಿಂಸಾತ್ಮಕ ಕೃತ್ಯಗಳ ಮೂಲಕ ಚುನಾಯಿತ ಸರ್ಕಾರವನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಉದ್ದೇಶಿಸಿದ್ದ.