ಪಂಜಾಬ್,ಹರಿಯಾಣ ರೈತರ ಹೋರಾಟ ಎಂದು ಬಿಂಬಿಸುವ ಸರ್ವೋಚ್ಚ ನ್ಯಾಯಾಲಯದ ಆದೇಶ ಪುನರ್ ಪರಿಶೀಲನೆಯಾಗಲಿ: ಕುರುಬೂರು ಶಾಂತಕುಮಾರ್.

kuruburu
Published on

ಬೆಂಗಳೂರು: ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟ ಕುರಿತ ಸಮಸ್ಯೆಗಳ ಪರಿಹಾರಕ್ಕೆ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯದ ನಿವೃತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ 5 ಜನ ಪರಿಣಿತರ ಸೇರಿಸಿ ಸಮಿತಿ ರಚಿಸಿದ್ದು,ಅಲ್ಲಿನ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಇಡೀ ದೇಶದ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಆದೇಶ ಕೇವಲ ಅಲ್ಲಿನ ರೈತರಿಗೆ ಮಾತ್ರ ಸೀಮಿತವಾಗಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ದೇಶದ ರೈತರಿಗೆ ಎಂ ಎಸ್ ಪಿ ಗ್ಯಾರಂಟಿ ಕಾನೂನು ಆಗಬೇಕು ಎಂದು ಹೋರಾಟ ನಡೆಸಲಾಗುತ್ತಿದೆ ಈ ಹೋರಾಟವನ್ನು ಇಡೀ ದೇಶದ ರೈತರು ಬೆಂಬಲಿಸಿ ಮುಂದುವರಿಸಿದ್ದಾರೆ. ಈಗ ರಚಿಸಿರುವ ಸಮಿತಿಯನ್ನ ಇಡೀ ದೇಶಕ್ಕೆ ಅನ್ವಯವಾಗುವಂತೆ ದಕ್ಷಿಣ ಭಾರತ ರಾಜ್ಯಗಳ ಪರಿಣಿತರನ್ನು ಸೇರಿಸಿ ಸಮಿತಿ ರಚಿಸಿ ಮತ್ತು ಈಗ ಹೂರಡಿಸಿರುವ ಆದೇಶ ಪುನರ್ ಪರಿಶೀಲಿಸಲಿ ಎಂದು ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಖಾಸಗಿ ಫೈನಾನ್ಸ್‌ಗಳು ,ಖಾಸಗಿ ಬ್ಯಾಂಕುಗಳ ಹಾವಳಿ, ಕಾನೂನುಬಾಹಿರ ಕಿರುಕುಳ ತಪ್ಪಿಸಲು ಕೂಡಲೇ ರಿಸರ್ವ್ ಬ್ಯಾಂಕ್ ಕಠಿಣ ನೀತಿ ರೂಪಿಸಲಿ. ರೈತರ ಕೃಷಿ ಸಾಲ ವಸೂಲಾತಿಗಾಗಿ ರೂಪಿಸಿರುವ ಸರ್ಪ್ರೈಸಿ ಕಾಯ್ದೆಯನ್ನು ರದ್ದುಗೊಳಿಸಬೇಕು ಈ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತಬೇಕು.ಜತೆಗೆ ಪ್ರಸಕ್ತ ಸಾಲಿನ ಹೆಚ್ಚುವರಿ ಕಬ್ಬುದರ ನಿಗದಿ. ಕಳೆದ ವರ್ಷದ 150 ಬಾಕಿ ಕೊಡಿಸಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭತ್ತ ಉತ್ಪಾದನಾ ವೆಚ್ಚ ಏರಿಕೆಯಾಗಿದೆ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಹೆಚ್ಚುವರಿ 500 ಪ್ರೋತ್ಸಾಹ ಧನ ನೀಡಬೇಕು. ಅಲ್ಲದೆ,ಕೇರಳ ಹಾಗು ಒರಿಸ್ಸಾ ಮಾದರಿಯಲ್ಲಿ ರಾಜ್ಯದ ರೈತರ ಸಮಸ್ಯೆಗಳ ಕುರಿತು ಅಕ್ಟೋಬರ್‌ನಲ್ಲಿ ರಾಜ್ಯರೈತ ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು. ರಾಜ್ಯ ರೈತ ಸಂಘದ ಬಲ್ಲೂರ್ ರವಿಕುಮಾರ್, ರಾಜ್ಯ ರೈತ ಸಂಘದ ಮುಖಂಡರಾದ ಮಂಜೇಶಗೌಡ,ಅಜೇಯಕುಮಾರ,ಧರ್ಮರಾಜ, ಅಯೂಬ್ ಖಾನ್, ನೆಲಮಂಗಲ ಜಗದೀಶ, ರವೀಶ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಹತ್ತಳ್ಳಿ ದೇವರಾಜ್,ಬರಡನಪುರ ನಾಗರಾಜ್,

ಉಡಿಗಾಲ ರೇವಣ್ಣ, ಸುಂದ್ರಪ್ಪ ,ನೀಲಕಂಠಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net