ಮುಖ್ಯಮಂತ್ರಿ ಹುದ್ದೆಗೆ ಏಕನಾಥ್​​ ಶಿಂಧೆ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಸಮ್ಮತಿ: ಜುಲೈ 11ಕ್ಕೆ ವಿಚಾರಣೆ

Shinde
Published on

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಏಕನಾಥ್​ ಶಿಂಧೆ ಅವರ ನೇಮಕವನ್ನು ಪ್ರಶ್ನಿಸಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇದೇ ಜುಲೈ 11 ರಂದು ನಡೆಸಲು ಸುಪ್ರೀಂಕೋರ್ಟ್​ ಒಪ್ಪಿಗೆ ನೀಡಿದೆ.

ರಜೆ ಪೀಠದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆಕೆ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ ಜುಲೈ 11ಕ್ಕೆ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಈಗಾಗಲೇ ಬಾಕಿ ಇರುವ ಅರ್ಜಿಗಳೊಂದಿಗೆ ಹೊಸ ಅರ್ಜಿ ವಿಚಾರಣೆಯನ್ನೂ ನಡೆಸಬೇಕೆಂದು ಹಿರಿಯ ವಕೀಲ ದೇವದತ್​ ಕಾಮಪತ್​ ಶಿವಸೇನೆಯ ನಾಯಕ ಸುಭಾಷ್​ ದೇಸಾಯಿ ಅವರ ಪರ ಹಾಜರಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇದರ ಜತೆಗೆ ಜೂನ್​ 30 ರಂದು ಶಿಂಧೆ ಬಣಕ್ಕೆ ಬಿಜೆಪಿ ಸರ್ಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲರ ನಿರ್ಧಾರವನ್ನು ಕೋರ್ಟ್​ನಲ್ಲಿ ಪ್ರಶ್ನಿಸಿದ್ದು, ಹೊಸ ಸ್ಪೀಕರ್ ಆಯ್ಕೆ ಸೇರಿದಂತೆ ಜುಲೈ 3 ಮತ್ತು 4 ರಂದು ನಡೆದ ವಿಧಾನಸಭಾ ಪ್ರಕ್ರಿಯೆಗಳನ್ನು ಸಹ ಠಾಕ್ರೆ ಬಣ ಪ್ರಶ್ನಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net