

Sun Sets: ಭಾರತದ ಈ ಗ್ರಾಮದಲ್ಲಿ ಸೂರ್ಯ ಮುಳುಗುವುದು ಮಧ್ಯಾಹ್ನ 3 ಗಂಟೆಗೆ ಎಂದರೆ ನಂಬುತ್ತೀರಾ? ಹೌದು, ಈ ವಿಶಿಷ್ಟ ಭೌಗೋಳಿಕ ವೈಶಿಷ್ಟ್ಯವು ಈ ಗ್ರಾಮವನ್ನು ಪ್ರವಾಸಿಗರಿಗೆ ಆಕರ್ಷಕವಾಗಿಸಿದೆ. ಇಲ್ಲಿನ ನಿವಾಸಿಗಳು ತಮ್ಮ ದೈನಂದಿನ ಜೀವನವನ್ನು ಈ ವಿಚಿತ್ರ ಪ್ರಕೃತಿ ನಿಯಮಕ್ಕೆ ಹೊಂದಿಕೊಂಡಿದ್ದಾರೆ. ಈ ಗ್ರಾಮವು ಪ್ರವಾಸಿಗರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ.
ಈ ನಿಗೂಢ ಗ್ರಾಮವೆಂದರೆ ತೆಲಂಗಾಣದ ಪೆಡ್ಡಪಲ್ಲಿ ಜಿಲ್ಲೆಯಲ್ಲಿರುವ ಕೊಡುರುಪಾಕ ಗ್ರಾಮ. ಇಲ್ಲಿ ಮಧ್ಯಾಹ್ನ 3 ಗಂಟೆಗೆ ಸೂರ್ಯ ಮುಳುಗಲಿದೆ. ಈ ಗ್ರಾಮವು ನಾಲ್ಕು ಬೆಟ್ಟೆಗಳಿಂದ ಸುತ್ತುವರಿದಿದ್ದು, ಇದರಿಂದಾಗಿ ಇಲ್ಲಿನ ಚೌಕಟ್ಟು ಸಮಯಕ್ಕಿಂತ ಭಿನ್ನವಾಗಿರುತ್ತದೆ. ಹೀಗಾಗಿ, ಇಲ್ಲಿ ಪಶ್ಚಿಮ ದಿಕ್ಕಿನಲ್ಲಿ ಇರುವ ರಂಗನಾಯಕುಳ ಗುಟ್ಟ ಎಂಬ ದೊಡ್ಡ ಬೆಟ್ಟೆಯು ಸೂರ್ಯನ ಕಿರಣಗಳನ್ನು ಅಡೆಯುವುದರಿಂದ ಮಧ್ಯಾಹ್ನ 3.30 ಗಂಟೆಗೆ ಸೂರ್ಯಾಸ್ತವಾಗುತ್ತದೆ ಮತ್ತು 5 ಗಂಟೆಗೆ ಇಡೀ ಊರಿಗೆ ಕತ್ತಲೇ ಅವರಿಸುತ್ತದೆ ಎಂದು ವರದಿ ಉಲ್ಲೇಖಿಸುತ್ತದೆ.
ಕೊಡುರುಪಾಕ ಗ್ರಾಮವು ತೆಲಂಗಾಣದ ಪೆಡ್ಡಪಳ್ಳಿ ಜಿಲ್ಲೆಯ ಸುಲ್ತಾನಾಬಾದ್ ಮಂಡಲದಲ್ಲಿರುವ ಪ್ರಾಚೀನ ಗ್ರಾಮವಾಗಿದ್ದು, ಇದರ ಸಂಸ್ಕೃತಿ ಮುಖ್ಯವಾಗಿ ಪ್ರಾಚೀನ ದೇವಾಲಯಗಳು, ಜೈನ ಮತ್ತು ಸಾತವಾಹನ ಕಾಲದ ಪರಂಪರೆಗಳು ಮತ್ತು ಕೃಷಿ ಆಧಾರಿತ ಜೀವನಶೈಲಿಯ ಮೇಲೆ ಕೇಂದ್ರೀಕರಿಸಿದೆ.
ಪ್ರಮುಖ ದೇವಾಲಯಗಳು ಕೊಡುರುಪಾಕದ ಸಂಸ್ಕೃತಿಯ ಮೂಲವೆಂದರೆ ಇಲ್ಲಿನ ಪ್ರಾಚೀನ ದೇವಾಲಯಗಳು. ಸಾತವಾಹನ ಮತ್ತು ಜೈನ್ ಕಾಲದಿಂದಲೇ ನಿರ್ಮಿತವಾದ ಈ ದೇವಾಲಯಗಳು ಇಂದಿಗೂ ಆರಾಧನೆಗೆ ತೆರೆದಿವೆ ಮತ್ತು ರಾಜ್ಯಾದ್ಯಂತ ಭಕ್ತರನ್ನು ಆಕರ್ಷಿಸುತ್ತವೆ. ಹೀಗಾಗಿ, ದೇವಾಲಯಗಳ ಜತೆಗೆ ಸೂರ್ಯಸ್ತ ನೋಡಲು ದೇಶದ್ಯಾಂತ ಪ್ರವಾಸಿಗರು ದಂಡೇ ಬರುತ್ತಿದೆ.
ತೆಲಂಗಾಣದ ಸಾಮಾನ್ಯ ಹಬ್ಬಗಳಾದ ಬತುಕಮ್ಮ, ಸಂಕ್ರಾಂತಿ, ವಿಜಯಾದಶಮಿ, ಬೊನಾಲು ಮತ್ತು ಸಮ್ಮಕ್ಕ ಸಾರಲಮ್ಮ ಜಾತ್ರೆಗಳು ಇಲ್ಲಿಯೂ ಆಚರಣೆಯಾಗುತ್ತವೆ. ದೇವಾಲಯಗಳಲ್ಲಿ ನಡೆಯುವ ವಾರ್ಷಿಕ ಉತ್ಸವಗಳು ಗ್ರಾಮೀಣ ಮತ್ತು ನಗರ ಜನರನ್ನು ಒಗ್ಗೂಡಿಸುತ್ತವೆ. ಗ್ರಾಮದ ವಿಶಿಷ್ಟ ಭೂಪ್ರಕೃತಿಯಿಂದಾಗಿ (ಬೆಟ್ಟೆಗಳು ಸೂರ್ಯೋದಯ-ಸೂರ್ಯಾಸ್ತವನ್ನು ಪ್ರಭಾವಿಸುವುದರಿಂದ) ದಿನದ ಕೆಲಸ ಸೂರ್ಯೋದಯದೊಂದಿಗೆ ಆರಂಭವಾಗಿ ಮಧ್ಯಾಹ್ನ 4 ಗಂಟೆಗೆ ಮುಗಿಯುತ್ತದೆ, ಇದು ಸ್ಥಳೀಯ ಜೀವನಶೈಲಿಯ ಒಂದು ವಿಶಿಷ್ಟ ಆಚರಣೆಯಾಗಿದೆ.(ಏಜೆನ್ಸೀಸ್)