ಜನರ ಸಂಕಷ್ಟಗಳು ನಾ.ಡಿಸೋಜ ಸಾಹಿತ್ಯದಲ್ಲಿ ಅಡಕ

Na D'soza
ಸೊರಬದಲ್ಲಿ ಆಯೋಜಿಸಿದ್ದ ಸಾಹಿತಿ ನಾ.ಡಿಸೋಜರ ಬದುಕು - ಬರಹ ಕುರಿತು ಸಾಕ್ಷ ್ಯಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಸ್.ಕೃಷ್ಣಾನಂದ್ ಉದ್ಘಾಟಿಸಿದರು. ಎಚ್.ಎಂ.ಭುವನೇಶ್, ಭಾರ್ಗವ ನಾಡಿಗ್, ಡಾ. ಎಂ.ಕೆ.ಭಟ್, ಗಾರ್ಗಿ ಕಾರೇಹಕ್ಲು ಇತರರಿದ್ದರು.
Published on

ಸೊರಬ: ಸಾಹಿತಿ ನಾ.ಡಿಸೋಜ ಅವರು ಜನಪರ ಸಾಹಿತ್ಯ ರಚನೆಯ ಜತೆಗೆ ಸಮಾಜಗಳ ನಡುವೆ ಉತ್ತಮ ಭಾಂದವ್ಯ ಸೃಷ್ಟಿಸುವ ವ್ಯಕ್ತಿತ್ವ ಹೊಂದಿದ್ದರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್.ಕೃಷ್ಣಾನಂದ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ತಾಲೂಕು ಕಸಾಪ ಹಾಗೂ ಲಯನ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ಸಾಹಿತಿ ನಾ.ಡಿಸೋಜ ಅವರ ಬದುಕು-ಬರಹ ಕುರಿತ ಸಾಕ್ಷೃಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಾ. ಡಿಸೋಜ ಅವರು ಜಾತಿ ಕಟ್ಟಳೆಗಳನ್ನು ಮೀರಿ ಬೆಳೆದ ಸಾಹಿತಿ. ಮುಳುಗಡೆ ಸಂತ್ರಸ್ತರ, ರೈತರ ಬದುಕಿನ ಭಾವನೆಗಳನ್ನು ಕಣ್ಣಾರೆ ಕಂಡು ಅದನ್ನು ಸಾಹಿತ್ಯದಲ್ಲಿ ತರುವ ಮೂಲಕ ಅರಿವು ಮೂಡಿಸಿದ್ದರು. ಪರಿಸರ ಸಂರಕ್ಷಣೆ ಜಾಗೃತಿ, ರೈಲ್ವೆ ಹೋರಾಟ, ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಹೆಮ್ಮೆಯ ಸಾಹಿತಿ ಎಂದರು.

ರಾಜ್ಯ ಲೆಕ್ಕಪತ್ರ ಇಲಾಖೆ ನಿವೃತ್ತ ಹಿರಿಯ ಉಪ ನಿರ್ದೇಶಕ ಜಿ.ಬಂಗಾರಪ್ಪ ಜಡೇಕರ್ ಮಾತನಾಡಿ, ನಾ.ಡಿಸೋಜ ಅವರಿಗೆ ಪರಿಸರ ಸಂರಕ್ಷಣೆ ಬಗ್ಗೆ ಇದ್ದಂತಹ ಕಾಳಜಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅವರು ನಾಡಿನ ಸಾತ್ವಿಕ ಪ್ರಜ್ಞೆಯ ಸಾಕಾರ ಮೂರ್ತಿಯಾಗಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಷಣ್ಮುಖಾಚಾರ್ ಮಾತನಾಡಿ, ಸಾಹಿತಿ ನಾ.ಡಿಸೋಜ ನೌಕರ, ಸಾಹಿತಿ, ಹೋರಾಟಗಾರರಾಗಿ ನೀಡಿದ ಕೊಡುಗೆ ಅಪಾರ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಎಂ.ಭುವನೇಶ್, ಚಿಂತಕ ಭಾರ್ಗವ ನಾಡಿಗ್, ಡಾ. ಎಂ.ಕೆ.ಭಟ್, ನಾ.ಡಿ ಸಾಕ್ಷೃಚಿತ್ರ ಸಂಚಿಕೆ ನಿರ್ದೇಶಕರಾದ ಗಾರ್ಗಿ ಕಾರೇಹಕ್ಲು, ರಾಜಪ್ಪ ಮಾಸ್ಟರ್, ಕಸಾಪ ಮಾಜಿ ಕಾರ್ಯದರ್ಶಿ ರಮೇಶ್, ಸಮಿತಿ ಸದಸ್ಯೆ ಎಸ್.ರತ್ನಾ, ಸಂಘಟನಾ ಕಾರ್ಯದರ್ಶಿ ಎನ್.ರಮೇಶ್, ಮಂಜಪ್ಪ, ಕೋಶಾಧ್ಯಕ್ಷ ಮೋಹನ್, ಗೌರವ ಕಾರ್ಯದರ್ಶಿ ರೇವಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net