

ಚಿಕ್ಕಬಳ್ಳಾಪುರ: ಆಕಾಶದಲ್ಲಿ ಸಣ್ಣ ಬೆಂಕಿಯುಂಡೆ ಮಾದರಿಯಲ್ಲಿ ಕಾಣಿಸಿಕೊಂಡ ಕಲ್ಲೊಂದು ತಾಲೂಕಿನ ಶ್ರೀರಾಮಪುರದ ಹೂವಿನ ತೋಟದಲ್ಲಿ ಬಿದ್ದಿರುವುದು ಗ್ರಾಮದಲ್ಲಿ ಆತಂಕ, ಕುತೂಹಲ ಮೂಡಿಸಿದೆ.
ಗ್ರಾಮದ ಶ್ರೀನಿವಾಸ್ ಗುರುವಾರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಲ್ಲು ಬಿದ್ದಿದ್ದು, ಸಣ್ಣ ಉಲ್ಕೆಯ ಮಾದರಿಯಲ್ಲಿ ಕಂಡು ಬಂದಿದೆ. ಕಲ್ಲು 2 ಕೆ.ಜಿ. ತೂಕವಿದೆ. ಸ್ಥಳೀಯ ಮುಖಂಡರ ಸಲಹೆ ಮೇರೆಗೆ ಭೂ ವಿಜ್ಞಾನ ಇಲಾಖೆಗೆ ಒಪ್ಪಿಸಲಾಗಿದೆ.
ಆಕಾಶದಿಂದ ಬೀಳುವಾಗ ಬೆಂಕಿಯುಂಡೆ ಮಾದರಿಯಲ್ಲಿ ಬಿತ್ತು ಎಂದು ರೈತ ಹೇಳುತ್ತಿರುವುದು ಹಾಗೂ ಕಲ್ಲು ಭಿನ್ನವಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಆಕಾಶದಿಂದ ಉಲ್ಕೆಯು ಭೂಮಿಯ ಗುರುತ್ವಾಕರ್ಷಣೆಗೆ ಸಿಕ್ಕಿ, ಬಳಿಕ ಒಳ ವಾತಾವರಣ ಪ್ರವೇಶಿಸಿದ ವೇಳೆ ಉಷ್ಣಾಂಶಕ್ಕೆ ಸುಟ್ಟು ಸಣ್ಣ ಕಲ್ಲಿನ ಮಾದರಿಯಲ್ಲಿ ಭೂಮಿಗೆ ಬಿತ್ತೊ? ಇಲ್ಲವೇ ಯಾರಾದರೂ ಕಲ್ಲನ್ನು ಜಮೀನಿನತ್ತ ಎಸೆದರೊ? ಎಂಬುದು ತಿಳಿಯಬೇಕಿದೆ.