Shrek Sheep Story: ಉಣ್ಣೆ ಕತ್ತರಿಸೋ ಭಯಕ್ಕೆ ಓಡಿಹೋಗಿ 6 ವರ್ಷ ತಲೆಮರೆಸಿಕೊಂಡಿದ್ದ ಕುರಿ: ಆಮೇಲೇನಾಯ್ತು ಗೊತ್ತಾ?

Shrek Sheep Story
ಉಣ್ಣೆ ಕಟ್‌ ಮಾಡುವ ಭಯಕ್ಕೆ ಓಡಿಹೋಗಿ 6 ವರ್ಷ ಅಡಗಿ ಬದುಕಿದ್ದ ಕುರಿ
Published on: 
Summary

ಉಣ್ಣೆ ಕತ್ತರಿಸುವುದಕ್ಕೆ ಹೆದರಿ ಓಡಿಹೋಗಿ ತಲೆಮರೆಸಿಕೊಂಡಿದ್ದ ಕುರಿ

6 ವರ್ಷ ಮನುಷ್ಯರ ಕಣ್ಣಿಗೆ ಬೀಳದೆ ಗುಹೆಗಳಲ್ಲಿ ಬದುಕುಳಿದ ಬುದ್ಧಿವಂತ ಪ್ರಾಣಿ

ಮೈಮೇಲೆ ಬರೋಬ್ಬರಿ 27 ಕೆಜಿ ಉಣ್ಣೆ ಬೆಳೆದು, ನಡೆಯಲು ಆಗದೆ ಸಿಕ್ಕಿಬಿದ್ದ ಶ್ರೆಕ್

New Zealand Shrek Sheep: ನ್ಯೂಜಿಲೆಂಡ್‌ನಲ್ಲಿ 1998ರ ಸಮಯದಲ್ಲೊಂದು ರೋಚಕ ಘಟನೆ ನಡೆದಿತ್ತು. ಜಾನ್ ಪೆರಿಯಮ್ ಎಂಬುವವರು 'ಬೆಂಡಿಗೊ ಸ್ಟೇಷನ್' ಹೆಸರಿನಲ್ಲಿ ಬೃಹತ್ ಕುರಿ ಫಾರ್ಮ್ ನಡೆಸುತ್ತಿದ್ದರು. ಸುಮಾರು 27 ಸಾವಿರ ಎಕರೆ ವಿಸ್ತೀರ್ಣದ ಈ ಫಾರ್ಮ್‌ನಲ್ಲಿ 17,000 ಕುರಿಗಳಿದ್ದವು. ಅದರಲ್ಲಿ 'ಶ್ರೆಕ್' ಎಂಬ ಹೆಸರಿನ ಮೆರಿನೊ ತಳಿಯ ಕುರಿಯೂ ಒಂದಾಗಿತ್ತು.

ವರ್ಷಕ್ಕೊಮ್ಮೆ ಕುರಿಗಳ ಉಣ್ಣೆ ಕತ್ತರಿಸಲು ಎಲ್ಲವನ್ನೂ ಒಟ್ಟಿಗೆ ಸೇರಿಸುತ್ತಿದ್ದಾಗ, ಈ ಶ್ರೆಕ್ ಕುರಿಗೆ ಅದು ಇಷ್ಟವಿರಲಿಲ್ಲ ಎಂದು ಕಾಣಿಸುತ್ತೆ. ಎಲ್ಲ ಕುರಿಗಳು ಸಾಲಿನಲ್ಲಿ ನಿಂತರೆ, ಇದು ಮಾತ್ರ ಯಾರಿಗೂ ಸಿಗದಂತೆ ಬೆಟ್ಟ-ಗುಡ್ಡಗಳ ಕಡೆಗೆ ಕಾಲ್ಕಿತ್ತಿತು. ದುರ್ಗಮ ಬೆಟ್ಟದ ಮೇಲಿದ್ದ ಕಲ್ಲಿನ ಗುಹೆಗಳಲ್ಲಿ ಇದು ಅಡಗಿ ಕುಳಿತುಕೊಂಡಿತ್ತು.

‘Shrek’ found on the hill
ಗುಡ್ಡದಲ್ಲಿ ಪತ್ತೆಯಾದ ‘ಶ್ರೆಕ್’

ಫಾರ್ಮ್‌ನ ನೌಕರರು ಹೆಲಿಕಾಪ್ಟರ್ ಮತ್ತು ನಾಯಿಗ ಜತೆ ಹುಡುಕಾಡಿದರೂ, ಈ ಕುರಿ ಮಾತ್ರ ಸಿಕ್ಕಿರಲಿಲ್ಲ. ಅಲ್ಲಿ ದೊಡ್ಡ ಮಾಂಸಾಹಾರಿ ಪ್ರಾಣಿಗಳು ಇಲ್ಲದ ಕಾರಣ, ಅದು ಬೆಟ್ಟದಲಿದ್ದ ಹುಲ್ಲು ತಿಂದು, ನೀರು ಕುಡಿದು ಕಣ್ಣು ತಪ್ಪಿಸಿಕೊಂಡು ಹೇಗೋ ಬದುಕಿತ್ತು.

6 ವರ್ಷದ ಬಳಿಕ ಪತ್ತೆ

ಹೀಗೆ ವರ್ಷಗಳು ಕಳೆದಂತೆ ಅದರ ಮೈಮೇಲೆ ವಿಪರೀತ ಉಣ್ಣೆ ಬೆಳೆದು, ಆ ಉಣ್ಣೆ ಬರೋಬ್ಬರಿ 27 ಕಿಲೋಗ್ರಾಂ ತೂಕ ತಲುಪಿತ್ತು. ಉಣ್ಣೆಯ ಭಾರದಿಂದ ಅದಕ್ಕೆ ಸರಿಯಾಗಿ ನಡೆಯಲೂ ಆಗುತ್ತಿರಲಿಲ್ಲ, ಕಣ್ಣುಗಳೂ ಮುಚ್ಚಿಕೊಂಡಿದ್ದವು. ಕೊನೆಗೆ 2004ರಲ್ಲಿ ಫಾರ್ಮ್ ಸಿಬ್ಬಂದಿಗೆ ಶ್ರೆಕ್ ಸಿಕ್ಕಾಗ, ಒಂದು ದೊಡ್ಡ ಉಣ್ಣೆಯ ಉಂಡೆಯಂತೆ ಕಾಣಿಸುತ್ತಿತ್ತು. ಒಟ್ಟು 80 ಕೆಜಿ ತೂಕವಿದ್ದ ಈ ಕುರಿಯನ್ನು ನೋಡಿ ಎಲ್ಲರೂ ಅಚ್ಚರಿಪಟ್ಟರು.

globally famous 'Shrek' sheep
ಜಾಗತಿಕ ಮಟ್ಟದಲ್ಲಿ ಫೇಮಸ್​ ಆದ 'ಶ್ರೇಕ್' ಕುರಿ

ನ್ಯಾಷನಲ್ ಟಿವಿ ಲೈವ್‌ನಲ್ಲೇ ಉಣ್ಣೆ ಕಟಿಂಗ್​

ಆಮೇಲೆ ನ್ಯೂಜಿಲೆಂಡ್‌ನ ನ್ಯಾಷನಲ್ ಟಿವಿಯಲ್ಲಿ ಲೈವ್‌ನಲ್ಲೇ ಇದರ ಮೈಮೇಲಿದ್ದ ಉಣ್ಣೆಯನ್ನೆಲ್ಲಾ ಕತ್ತರಿಸಲಾಯ್ತು. ಆ ಉಣ್ಣೆಯಿಂದ ಬರೋಬ್ಬರಿ 20 ಸೂಟ್‌ಗಳನ್ನು ಹೊಲಿಯಬಹುದಾಗಿತ್ತು. ಕೊನೆಗೆ ಆ ಉಣ್ಣೆಯನ್ನು ಹರಾಜು ಮಾಡಿ ಬಂದ ದುಡ್ಡನ್ನೆಲ್ಲಾ ಮಕ್ಕಳ ಆಸ್ಪತ್ರೆಗೆ ದಾನವಾಗಿ ನೀಡಲಾಯ್ತು.

Shearing of sheep's wool during a live broadcast
ನೇರ ಪ್ರಸಾರದಲ್ಲೇ ಕುರಿ ಉಣ್ಣೆಯ ಕಟಿಂಗ್​

ಇದನ್ನೂ ಓದಿ: ಕಾರ್ ಸೆನ್ಸರ್ ಶಬ್ದಕ್ಕೆ ರೊಚ್ಚಿಗೆದ್ದ ನೇಬರ್: ವಕೀಲೆಯ ಕಾರಿಗೆ ಬೆಂಕಿ ಹಚ್ಚಿ ವಿಡಿಯೋ ಮಾಡಿದ ಪಾಗಲ್! | Car On Fire

ಅಷ್ಟೇ ಅಲ್ಲದೆ, ನ್ಯೂಜಿಲೆಂಡ್ ಪ್ರಧಾನಿಯನ್ನೂ ಭೇಟಿ ಮಾಡಿದ್ದ ಈ ಶ್ರೆಕ್ ಕುರಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಕೊನೆಗೆ ತನ್ನ 16ನೇ ವಯಸ್ಸಿನಲ್ಲಿ 2011ರಲ್ಲಿ ವಯೋಸಹಜ ಕಾಯಿಲೆಯಿಂದ ಈ ಕುರಿ ಸಾವನ್ನಪ್ಪಿತು.