ರಾಜ್ಯದ ಪೊಲೀಸರಿಗೆ ರಾಷ್ಟ್ರದಲ್ಲಿ ಒಳ್ಳೆಯ ಸ್ಥಾನಮಾನವಿದೆ: ಡಾ. ರಜನೀಶ್ ಗೋಯೆಲ್

Traffic Police
Published on

ಬೆಂಗಳೂರು: ರಾಜ್ಯ ಪೊಲೀಸರಿಗೆ ಇಡೀ ದೇಶದಲ್ಲಿಯೇ ಉತ್ತಮವಾದ ಹೆಸರಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್ ಹೇಳಿದರು.
ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಪೊಲೀಸರ ಕಾರ್ಯ ವೈಖರಿ, ನಿಪುಣತೆ, ಸಾಮರ್ಥ್ಯ ಇಡೀ ರಾಷ್ಟ್ರದಲ್ಲಿ ಒಳ್ಳೆಯ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದ್ದೆ. ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಅಪರಾಧ ಪ್ರಕರಣವೊಂದರಲ್ಲಿ ಬಸ್ ಟಿಕೇಟ್ ಬಿಟ್ಟರೆ ಬೇರೆ ಯಾವುದೇ ಸುಳಿವು ಇರಲಿಲ್ಲ. ಆದರೆ ಸಿಕ್ಕ ಸಣ್ಣ ಸುಳಿವನ್ನೇ ಬಳಸಿಕೊಂಡು ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಎಷ್ಟೇ ಜಟಿಲವಾದ ಅಪರಾಧ ಪ್ರಕರಣವಿದ್ದರೂ ನಮ್ಮ ಪೊಲೀಸರು ಅದನ್ನು ಭೇದಿಸುವಲ್ಲಿ ಸಲರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತರಕರ ಘಟನೆಗಳು ನಡೆಯಲಿಲ್ಲ. ಆದರೆ ಇದೀಗ ಲೋಕಾಸಭಾ ಚುನಾವಣೆ ನಮ್ಮ ಮುಂದೆ ಇದ್ದು, ಅದನ್ನು ಎದುರಿಸಲು ನಮ್ಮ ಪೊಲೀಸರು ಈಗಾಗಲೇ ಮಾನಸಿಕವಾಗಿ ಸಿದ್ದರಾಗಿದ್ದಾರೆ. ಚುನಾವಣೆ ವೇಳೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುತ್ತಾರೆ ಎಂಬ ನಂಬಿಕೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸರಿಗೆ ಬೇಕಾದ ಮೂಲಭೂತ ಸೌಕರ್ಯಗಳು, ಆಧುನಿಕ ತಂತ್ರಯಾನ ಮತ್ತು ಸಿಬ್ಬಂದಿ ನೇಮಕದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅವುಗಳುನ್ನು ಕೊಡಿಸುವ ಕೆಲಸವನ್ನು ನಾನು ಮಾಡಿಕೊಂಡು ಬಂದಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net