

ಕೋಲಾರ: ಎತ್ತ ನೋಡಿದರೂ ಕಲಾವಿದರ ಕಲರವ, ತಮಟೆ ವಾದನ, ಡೊಳ್ಳುಕುಣಿತ, ನಗಾರಿ, ಪಟ ಕುಣಿತ, ಡೋಲು ವಾದನ, ಕೀಲು ಕುದುರೆ ಆಕರ್ಷಕ ಮೆರವಣಿಗೆಯ ಸೊಬಗು... ಹೌದು. ಇಂತಹ ಸಂಭ್ರಮದ ಕ್ಷಣಕ್ಕೆ ಕೋಲಾರ ನಗರ ಸಾಯಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ 2 ದಿನಗಳ ರಾಜ್ಯಮಟ್ಟದ ಜನಪರ ಉತ್ಸವಕ್ಕೆ ಸೋಮವಾರ ಚಾಲನೆ ದೊರೆಯಿತು.
ಉತ್ಸವದ ಮೊದಲ ದಿನ ಬೆಳಗ್ಗೆ ಕಲಾ ತಂಡಗಳ ಮೆರವಣಿಗೆಗೆ ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ,ಜಿ.ಪಂ ಸಿಇಒ ಪ್ರವಿಣ್ ಪಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್ ಚಾಲನೆ ನೀಡಿದರು.
ನಗರದ ಬಂಗಾರಪೇಟೆ ವೃತ್ತದಿಂದ ಶುರುವಾದ ಕಲಾ ತಂಡಗಳ ಮೆರವಣಿಗೆಯು ಡೂಂ ಲೈಟ್ ವೃತ್ತ, ಕ್ಲಾಕ್ ಟವರ್, ಹೊಸ ಬಸ್ ನಿಲ್ದಾಣ, ಎಂಬಿ ರಸ್ತೆ, ಮೆಕ್ಕೆ ವೃತ್ತದ ಮೂಲಕ ಸಾಗಿ ಟಿ.ಚನ್ನಯ್ಯ ರಂಗಮಂದಿರದ ಸಮೀಪ ಅಂತ್ಯಗೊಂಡಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 40ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ಮೆರವಣಿಗೆಗೆ ಮೆರುಗು ನೀಡಿದರು. ಆಯಾ ಜಿಲ್ಲೆಯ ವೇಷಭೂಷಣ ತೊಟ್ಟು ಪಾಲ್ಗೊಂಡಿದ್ದವರ ಕಲೆ ಪ್ರದರ್ಶನ ಗಮನ ಸೆಳೆಯಿತು.
ಶಾಸಕ ಕೊತ್ತೂರು ಜಿ.ಮಂಜುನಾಥ್ ತಮಟೆ ವಾದನಕ್ಕೆ ಭರ್ಜರಿ ಡಾನ್ಸ್ ಮಾಡಿದ್ದು ವಿಶೇಷವಾಗಿತ್ತು. ಇವರ ಜತೆಗೆ ಯುವಕರು, ಯುವತಿಯರೂ ಕುಣಿದು ಕುಪ್ಪಳಿಸಿದರು.
* ವೋಟ್ ಪಾಲಿಟಿಕ್ಸ್ ಬೇಡ:
ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಅರಿವು ಇಲ್ಲದವರು ಮೀಸಲಾತಿ ತೆಗೆದು ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿ ಕೇವಲ ವೋಟ್ ಪಾಲಿಟಿಕ್ಸ್ ಮಾಡಬಾರದು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರ್ಮ ಅನುಭವಿಸಬೇಕಾಗುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದಿಂದ ಜನಪ್ರತಿನಿಧಿ, ಅಧಿಕಾರಿಗಳು ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ. ಭೂಮಿ ಮೇಲೆ ದೇವರು ಕಾಣದೆ ಇರಬಹುದು, ಆದರೆ ಪ್ರತ್ಯೇಕ್ಷ$ವಾಗಿ, ಪರೋಕ್ಷವಾಗಿ ಕಂಡತಹ ದೇವರು ಅಂಬೇಡ್ಕರ್ ಮಾತ್ರ ಎಂದು ಬಣ್ಣಿಸಿದರು.
ಸರ್ಕಾರದಿಂದ ಎಸ್ಸಿಪಿ ಯೋಜನೆಯಡಿ ಕೋಲಾರದಲ್ಲಿ ಜನಪರ ಉತ್ಸವ ಏರ್ಪಡಿಸಲಾಗಿದೆ. ಕಲಾ ತಂಡಗಳ ಮೆರವಣಿಗೆ, ಕವಿಗೋಷ್ಠಿ, ವಿಚಾರ ಸಂಕಿರಣ ನಡೆಸುತ್ತಿರುವ ಉದ್ದೇಶ ಜನತೆಗೆ ಗೊತ್ತಾಗಬೇಕು ಎಂದರು.
ಗ್ರಾಮೀಣ ಭಾಗದ ಜನರಲ್ಲಿನ ಕಲೆ ಅನಾವರಣಗೊಳಿಸಬೇಕು. ನಶಿಸಿ ಹೋಗುತ್ತಿರುವ ಕಲೆಯನ್ನು ಬೆಳೆಸುವ ಕೆಲಸ ಸರ್ಕಾರ, ನಮ್ಮೆಲ್ಲರ ಕರ್ತವ್ಯ. ಡಿಸ್ಕೋಗೆ ಮಾರು ಹೋಗಿರುವ ದಿನಗಳಲ್ಲಿ ಕಲೆ ರಸಬೇಕಾಗಿದೆ ಎಂದರು.
ಕನ್ನಡ ಮತ್ತು ಸಂಸತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಮಹಾನ್ ಪುರುಷರು ಮಾಡಿದ ಸಾಧನೆಗಳು, ಜಾನಪದ ಉತ್ಸವಗಳ ಬಗ್ಗೆ ಮುಂದಿನ ಪೀಳಿಗೆಗೆ ಗೊತ್ತಾಗಬೇಕಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಜನ ಪಾಲ್ಗೊಳ್ಳುವುದು ವಿರಳ, ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಲೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂಥ ಉತ್ಸವಗಳು ಪೂರಕವಾಗಬೇಕು. ಟಿಎಸ್ಪಿ ಅಡಿ ಬಳ್ಳಾರಿ, ಚಿತ್ರದುರ್ಗ, ಎಸ್ಸಿಪಿ ಅಡಿ ರಾಯಚೂರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಹಿಂದೆ ಸಣ್ಣ ನೀರಾವರಿ ಸಚಿವನಾಗಿದ್ದಾಗ ಜಿಲ್ಲೆಗೆ ಬಂದು ಪ್ರಗತಿ ಪರಿಶೀಲನೆ ಮಾಡಿದೆ, ಆಗ ನೀರಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಕೆಸಿ ವ್ಯಾಲಿ ನೀರು ಯೋಜನೆ ಜಾರಿಗೆ ತರಲಾಯಿತು, ಆಗಲೂ ಟೀಕೆಗಳು ಬಂದವು, ಆದರೂ ತಜ್ಣರೊಂದಿಗೆ ಚರ್ಚಿಸಿಯೆ ಜಾರಿಗೆ ತಂದೆವು ಎಂದು ಸ್ಮರಿಸಿದರು.
ಸಂಸದ ಎಂ.ಮಲ್ಲೇಶ್ಬಾಬು, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್ಸಿಗಳಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಕನ್ನಡ ಮತ್ತು ಸಂಸತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಒ ಡಾ.ಪ್ರವಿಣ್ ಪಿ.ಬಾಗೇವಾಡಿ, ಕೋಲಾರ ಎಸ್ಪಿ ಬಿ.ನಿಖಿಲ್, ಕೆಜಿಎಫ್ ಎಸ್ಪಿ ಶಾಂತರಾಜು, ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್, ನಗರಸಭೆ ಅಧ್ಯಕ್ಷೆ ಲಕ್ಷಿ$್ಮದೇವಮ್ಮ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯೆ ಕಮಲಮ್ಮ, ತಹಸೀಲ್ದಾರ್ ಡಾ.ಎಂ.ನಯನಾ ಉಪಸ್ಥಿತರಿದ್ದರು.
* ಬಜೆಟ್ನಲ್ಲಿ ಅನುದಾನ
ಹಿಂದಿನ ಸರ್ಕಾರದ ಅವಧಿಯಲ್ಲಿ ಇಂತಹ ಕಾರ್ಯಕ್ರಮ ನಡೆದಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಸಾಧಕರಿಗೆ ಪ್ರದಾನ ಮಾಡಲಾಯಿತು. ಎಸ್ಸಿಪಿ ಯೋಜನೆ ಜನರಿಗೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶ, ಪ್ರತಿ ಇಲಾಖೆಯಲ್ಲೂ ಎಸ್ಸಿ ಜನಾಂಗದ ಏಳಿಗೆಗಾಗಿ ಶೇ.24.1 ಅನುದಾನ ಮೀಸಲಿರಿಸಲಾಗಿದೆ. ಇದಕ್ಕೆ ಮೂಲ ಕಾರಣ ಡಾ.ಬಿ.ಆರ್.ಅಂಬೇಡ್ಕರ್. ಸಿದ್ದರಾಮಯ್ಯ ಅವರು ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಬಜೆಟ್ ಅನುದಾನ ಘೋಷಿಸುತ್ತಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
* ಕಲಾವಿದರಿಗೆ ಪ್ರಶಸ್ತಿ ನೀಡಿ
ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಶ್ರೀಮಂತರನ್ನು ಆಯ್ಕೆ ಮಾಡಿ ಕೊಡುವ ಬದಲು ಗ್ರಾಮೀಣ ಕಲಾವಿದರಿಗೂ ಕೊಡಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು. ಒಂದು ಮರ ಕಡಿದರೆ ಐನೂರು ಮರ ನೆಡಬೇಕು ಎಂಬ ನೀತಿ ಅರಣ್ಯ ಇಲಾಖೆಯಲ್ಲಿದೆ. ಆ ಪದ್ಧತಿಯನ್ನು ಕಲೆಗಳಲ್ಲೂ ಜಾರಿಗೆ ತರಬೇಕು. ಜಿಲ್ಲೆಯ ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪ, ಲತ್ಿ ಸಾಬ್, ಸಿಎನ್ ಆರ್ ರಾವ್ ಸೇರಿ ಅನೇಕ ಮಹನೀಯರು ಅಪಾರ ಕೊಡುಗೆ ನೀಡಿದ್ದಾರೆ. ಅಂತಹವರ ಸಾಧನೆಗಳನ್ನು ಕಲೆಗಳಲ್ಲಿ ಅನಾವರಣ ಮಾಡುವ ಕೆಲಸ ಆಗಲಿ ಎಂದು ತಿಳಿಸಿದರು. ಕಲೆ ಇರೋರನ್ನು ಸರ್ಕಾರಿ ಅಧಿಕಾರಿಗಳನ್ನಾಗಿ ಮಾಡಬೇಕು. ವೀಕ್ಷಣೆ ಮಾಡುವವರು ವೇದಿಕೆ ಮೇಲೆ ಇದ್ದಾರೆ, ಕಲೆಗಾರರು ಮನೆಯಲ್ಲೆ ಇದ್ದಾರೆ. ಬೆಟ್ಟವನ್ನು ಚದುರುವುದು ಬೇಡ, ಕಲೆಗಾರರ ಬೆಟ್ಟ ಕಟ್ಟೊಣ, ಅವರಿಗೆ ಏನು ಸಹಾಯ ಬೇಕಾದರು ಮಾಡಲು ಸಿದ್ಧ ಎಂದು ಘೋಷಿಸಿದರು.
* ವೀಣೆ ವಾದನಕ್ಕೆ ಕಲಾಸಕ್ತರು ಫಿದಾ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಚಿಕ್ಕಬಳ್ಳಾಪುರ ಜಿಲ್ಕೆಯ ಗುಡಿಬಂಡೆ ತಾಲೂಕಿನ ಕಲಾವಿದ ಮುಖವೀಣೆ ಆಂಜಿನಪ್ಪ ಅವರು ವೀಣೆ ವಾದಿಸಿದರು. ವಿವಿಧ ಬಂಗಿಯಲ್ಲಿ ನುಡಿಸಿದ ವಾದನಕ್ಕೆ ಪ್ರೇಕ್ಷಕರು ಮನಸೋತರು. ಬಾಯಿ, ಮೂಗಿನ ಮೂಲಕ ಹಾಗೂ ಒಂದು ಮೂಗಲ್ಲಿ ನೀರು ಹಾಕಿಕೊಂಡು ಇನ್ನೊಂದು ಮೂಗಲ್ಲಿ ಹೊರ ಬಿಟ್ಟಿದ್ದು ಬೇರಗಾಗಿಸಿತು. ಆಂಜಿನಪ್ಪ ಅವರ ಕಲೆ ಗಮನಸಿದ ಸಚಿವ ಬೈರತಿ ಸುರೇಶ್, ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರು ವೇದಿಕೆಯ ಮೇಲೆ ಅರ್ಥಿಕ ನೆರವು ನೀಡಿದರು. ಸಚಿವ ಶಿವರಾಜ ತಂಗಡಗಿ ಅವರು ಆಂಜಿನಪ್ಪ ಅವರಿಗೆ ವಿದ್ವಾಂಸ ಪ್ರಶಸ್ತಿ ನೀಡುವಂತೆ ಅಧಿಕಾರಿಗಳಿಗೆ ಶಿಾರಸು ಮಾಡಿದರು. ಜತೆಗೆ ಮುಖವೀಣೆ ಆಂಜಿನಪ್ಪ ಅವರಿಗೆ ಅಗತ್ಯ ನೆರವು ಕಲ್ಪಿಸಲು ಸಿದ್ಧ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಘೋಷಿಸಿದರು
* ಕೋಲಾರ ಶೈಲಿ ಊಟ
ಎಲ್ಲರಿಗೂ ಕೋಲಾರ ನೆಲದ ಶೈಲಿಯ ಊಟ, ಬೆಳಗಿನ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಉಪಾಹಾರ ಚೌಚೌಬಾತ್, ಕಾರ ಪೊಂಗಲ್ ಚಟ್ನಿ ಹಾಗೂ ಮಧ್ಯಾಹ್ನ ಮುದ್ದೆ, ಹಿದುಕಿದ ಬೇಳೆ ಸಂಬಾರು, ಅನ್ನ ತಿಳಿ ಸಾಂಬಾರು, ಕಾಯಿ ಹೋಳಿಗೆ, ತುಪ್ಪ, ಕೋಸಂಬರಿ, ಕ್ಯಾಬೇಜ್ ಪಲ್ಯ ಮಜ್ಜಿಗೆ ಹಾಗೂ ರಾತ್ರಿ ಊಟಕ್ಕೆ ಚಪಾತಿ, ಹಿದುಕಿನ ಬೇಳೆ ಸಾರು, ಅನ್ನ ತಿಳಿ ಸಂಬಾರು, ಕಾಯಿ ಹೋಳಿಗೆ, ಕೋಸಂಬರಿ, ಕ್ಯಾಬೇಜ್ ಪಲ್ಯದ ವ್ಯವಸ್ಥೆ ಮಾಡಲಾಗಿತ್ತು.